ಪತ್ರಕರ್ತ ನವೀನ್ ಸೂರಿಂಜೆ ಬಂಧನ ಖಂಡಿಸಿ ಪ್ರತಿಭಟನಾ ಸಭೆ

ಕುಂದಾಪುರ: ಪತ್ರಕರ್ತ ನವೀನ್ ಸೂರಿಂಜೆ ಬಂಧನ ಖಂಡಿಸಿ ಮತ್ತು ಅವರ ಮೇಲಿನ ಮೊಕದ್ದಮೆಗಳ ಹಿಂತೆಗತಕ್ಕೆ ಆಗ್ರಹಿಸಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಸಿ.ಪಿ.ಐ(ಎಂ), ಕಾಂಗ್ರೆಸ್, ಜೆಡಿಎಸ್, ಡಿಎಸ್ ಎಸ್, ಛಾಯಾಗ್ರಾಹಕರ ಸಂಘ, ಸಹಮತ ಸಂಘಟನೆ, ಡಿವೈಎಫ್ ಐ, ಪಾಪುಲರ್ ಫ್ರಂಟ್  ಆಫ್ ಇಂಡಿಯಾ, ಹೂವಿನ ವ್ಯಾಪಾರಿಗಳ ಸಂಘ ಮೊದಲಾದ ಸಮಾನ ಮನಸ್ಕ ಸಂಘಟನೆಗಳ ಬೆಂಬಲ ಮತ್ತು ಪಾಲ್ಗೊಳ್ಳುವಿಕೆಯೊಂದಿಗೆ ಪ್ರತಿಭಟನಾ ಸಭೆ ನಡೆಸಿತು.    ಸಭೆಯಲ್ಲಿ ನಾಡಿನ ಖ್ಯಾತ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಜಿ.ರಾಜಶೇಖರ್ ಮಾತನಾಡಿದರು. ಬಳಿಕ ಪೋಲಿಸರಿಗೆ ಮನವಿ  ಸಲ್ಲಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಸಂಘಟನೆಗಳ ಪದಧಿಕಾರಿಗಳು ಜೋತೆಗಿದ್ದರು.
                                             ಕುಂದಾಪ್ರ.ಕಾಂ- editor@kundapra.com