ನವೆಂಬರ್ 11ರಂದು ಸೌಹಾರ್ದ ದೀಪಾವಳಿ-2012

 ಕುಂದಾಪುರ: ಇಲ್ಲಿನ ಸಹಮತ ಪ್ರಸ್ತುತಪಡಿಸುತ್ತಿರುವ ಸೌಹಾರ್ದ ದೀಪಾವಳಿ-2012 ನವೆಂಬರ್ 11ರ ಭಾನುವಾರ ಸಂಜೆ 5.30ಕ್ಕೆ ಕುಂದಾಪುರದ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಉಧಾಟನೆಯನ್ನು  ಖ್ಯಾತ ಲೇಖಕಿ ವೈದೇಹಿ ನೆರವೇರಿಸಿದರೇ, ಕನ್ನಡದ ಖ್ಯಾತ ಸಾಹಿತಿ ನಾ. ಡಿಸೋಜ ಆಶಯ ಭಾಷಣ ಮಾಡಲಿರುವರು. ಖ್ಯಾತ ಲೇಖಕಿ ಸಾರಾ ಅಬೂಬಕರ್ ಸೌಹಾರ್ದ ಸಂದೇಶ ನೀಡುವರು. ಕೊರಗ ಸಮುದಾಯದಲ್ಲಿ ಪ್ರಪ್ರಥಮ ಡಾಕ್ಟರೇಟ್ ಪಡೆದ ಎಂಜಿಎಂ ಕಾಲೇಜಿನ ಡಾ. ಬಾಬು ಎಂ ಅವರಿಗೆ ಇದೇ ಸಂಧರ್ಭದಲ್ಲಿ ಅಭಿನಂದಿಸಲಾಗುವುದು. ಕುಂದಾಪುರದ ಡಿವೈಎಸ್‌ಪಿ ಯಶೋದಾ ಶಿರಬೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ದಫ್ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.