ಉರಿಗೊಬ್ಬ ಅರವಿಂದ ಕೇಜ್ರಿವಾಲ್‌ ಇರಬೇಕು; ನ್ಯಾ.ಸಂತೋಷ ಹೆಗ್ಡೆ

ಕುಂದಾಪುರ: ಅರವಿಂದ ಕೇಜ್ರಿವಾಲ್‌ರಂಥವರು ಪ್ರತಿ ಊರು, ಗ್ರಾಮಗಳಲ್ಲಿ ಹುಟ್ಟಿಕೊಳ್ಳಬೇಕು. ಅವರಂತಹ ವ್ಯಕ್ತಿಗಳಿಂದಾಗಿ ಜಾಗೃತಿಯಾದರೂ ಮೂಡಿತು ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಹೇಳಿದರು. ಅವರು ಹಂಗಳೂರು ಸೈಂಟ್ ಫಿಯುಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ಪೋಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.  1948ರ ಜೀಪ್ಸ್ ಕ್ಯಾಂಡಲ್ ಹಗರಣದಿಂದ ಹಿಡಿದು 2012ರ ಕೋಲ್‌ಗೇಟ್ ಹಗರಣದ ತನಕ ಸಾವಿರ ಕೋಟಿ ಹಣ ಭ್ರಷ್ಟಾಚಾರಕ್ಕೆ ತುತ್ತಾಗಿದೆ. ಈ ಹಣ ಪ್ರಾಮಾಣಿಕವಾಗಿ ಸಲ್ಲಬೇಕಾದವರಿಗೆ ಸಂದಿದ್ದರೆ
ಭಾರತಕ್ಕೆ ಈ ದುರ್ದಿನ ಲಭಿಸುತ್ತಿರಲಿಲ್ಲ . 2012ರಲ್ಲಿ ಜಗತ್ತಿನ ಪ್ರಾಮಾಣಿಕ ದೇಶಗಳ
ಪಟ್ಟಿಯ ಸಾಲಿನಲ್ಲಿ ಭಾರತಕ್ಕೆ 87ನೇ ಸ್ಥಾನ ಲಭಿಸಿರುವುದು ನೋಡಿದರೆ ನಾಚಿಗೇಡಿನ ವಿಷಯ ಎಂದು ವಿಷಾದಿಸಿದರು.
         ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಹಂಗಳೂರು ಸೈಂಟ್ ಫಿಯುಸ್ ಇಗರ್ಜಿ ಧರ್ಮಗುರು ಜಾನ್ ವಾಲ್ಟರ್ ಮೆಂಡೋನ್ಸಾ, ಇಗರ್ಜಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಫಿಲಿಪ್ ಫರ್ನಾಂಡೀಸ್, ಕಾರ್ಯದರ್ಶಿ ಲೀನಾ ಡಿಸೋಜ, ತಾಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ, ಇಗರ್ಜಿ ಆಡಳಿತ ಮಂಡಳಿ ಮಾಜಿ ಉಪಾಧ್ಯಕ್ಷ ಮೊಂತು ಫರ್ನಾಂಡೀಸ್, ಉದ್ಯಮಿ ಜಯಕರ ಶೆಟ್ಟಿ, ಶಾಲೆಯ ಸಂಚಾಲಕಿ ಸಿಸ್ಟರ್ ಲೊರೆನ್ಜಾ ಡಿಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಡಾ.ಸಿಲ್ವಿನಾ ವಾಜ್ ಉಪಸ್ಥಿತರಿದ್ದರು. ಸಿಸ್ಟರ್ ಸರೀನಾ ಸ್ವಾಗತಿಸಿದರು. ಶಾಂತಿ ಮತ್ತು ಉಷಾ ಕಾರ್ಯಕ್ರಮ ನಿರ್ವಹಿಸಿದರು. ಫಾತಿಮಾ ವಂದಿಸಿದರು.