ದೇಶದ ಆರ್ಥಿಕ, ಸಾಮಾಜಿಕ ಪ್ರಗತಿ ಆಶಾದಾಯಕವಾಗಿಲ್ಲ: ಡಾ.ಜಿ.ವಿ.ಜೋಶಿ

ಕುಂದಾಪುರ: ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಆಶಾದಾಯ ಕವಾಗಿಲ್ಲ. ನಮ್ಮ ನಿರೀಕ್ಷೆಯಷ್ಟು ಸಫಲತೆ ಸಾಧ್ಯವಾಗಿಲ್ಲ ಎಂದು ರಾಜ್ಯ ಯೋಜನಾ ಆಯೋಗದ ಸದಸ್ಯ ಹಾಗೂ ನಿಟ್ಟೆ ಕೆ.ಎಸ್.ಹೆಗ್ಡೆ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ವಿ.ಜೋಶಿ ಹೇಳಿದ್ದಾರೆ.
         ಅವರು ಭಂಡಾರ್ಕಾರ್ಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಮಂಗಳೂರು ವಿವಿ ಅರ್ಥಶಾಸ್ತ್ರ ಸಂಘದ ಸಹಯೋ ಗದಲ್ಲಿ ಆಯೋಜಿಸಿದ ‘11ನೆ ಯೋಜನೆ ಅನುಭವಗಳು ಹಾಗೂ 12ನೆ ಯೋಜನೆಯ ನಿರೀಕ್ಷೆಗಳು’ ಎಂಬ ವಿಷಯದ ಕುರಿತ ಎರಡು ದಿನಗಳ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
       ಹನ್ನೋಂದನೆಯ ಯೋಜನೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ವಾಗಿ ಇನ್ನೂ ಅಭಿವೃದ್ಧಿಯಾಗಬೇಕಾಗಿದೆ. ಸಾಮಾಜಿಕ ಮತ್ತು ರಾಜಕೀಯ ಸಮತೋಲನಕ್ಕೆ ಆರ್ಥಿಕ ವ್ಯವಸ್ಥೆಯೂ ಅತ್ಯಗತ್ಯ ಎಂಬ ಅಭಿಪ್ರಾಯ ಉನ್ನತ ವಲಯಗಳಿಂದಲೇ ವ್ಯಕ್ತವಾಗಿದೆ ಎಂದರು.
         ಹನ್ನೋಂದನೇ ಯೋಜನೆಯಡಿಯಲ್ಲಿ ಅನೇಕ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳು ನಮ್ಮ ನಿರೀಕ್ಷೆಯ ಫಲ ಕಂಡಿಲ್ಲ. ಆದರೆ 12ನೇ ಯೋಜನೆಯಲ್ಲಿ ನಾವು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಬಲ ಗೊಳಿಸುವ ಯೋಜನೆಗಳನ್ನು ರೂಪಿಸಬ ಹುದಾಗಿದೆ. ಅಲ್ಲದೇ 12ನೇ ಯೋಜನೆ ಯಲ್ಲಿ ಅಭಿವೃದ್ಧಿ ಗೊಳ್ಳ ಬೇಕಾದ ಕ್ಷೇತ್ರ ಗಳನ್ನು ಗುರುತಿಸಿ ಸೂಕ್ತ ಯೋಜನೆ ಯನ್ನು ರೂಪಿಸುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
      ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಶನ್ ಆಡಳಿತಾ ಧಿಕಾರಿ ಡಾ.ಎಚ್. ಶಾಂತಾರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಂದ್ರಶೇಖರ ದೋಮ ಅಧ್ಯಕ್ಷತೆ ವಹಿಸಿದ್ದರು.
            ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಷಯದ ನಿವೃತ್ತ ಪ್ರ್ರಾಧ್ಯಾಪಕರಾದ ಪ್ರೊ. ಹಿಲ್ಡಾ ರಾಡ್ರಿಗಸ್, ಪ್ರೊ. ರಘುರಾಮ್ ಸೋಮಯಾಜಿ ಹಾಗೂ ಡಾ. ಟಿ. ಎನ್.ರಾಮಕೃಷ್ಣ ಮತ್ತು ಪಿಎಚ್‌ಡಿ ಪದವಿ ಪಡೆದ ಡಾ.ನವೀನ್ ಶೆಟ್ಟಿ, ಡಾ.ಪ್ರಕಾಶ್ ರಾವ್, ಡಾ. ದೇವರಾಜ್ ಮತ್ತು ಡಾ. ಶಂಕರ್ ಪತಳಿ ಇವರನ್ನು ಸನ್ಮಾನಿಸಲಾಯಿತು.
          ಮಂಗಳೂರು ವಿವಿ ಅರ್ಥಶಾಸ್ತ್ರ ಸಂಘದ ಅಧ್ಯಕ್ಷ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾರಾಯಣ ರಾವ್ ಮತ್ತು ಜಿ.ಎಂ.ಗೊಂಡ ವೇದಿಕೆಯಲ್ಲಿ ಉಪಸ್ಥಿ ತರಿದ್ದರು. ಉಪನ್ಯಾಸಕಿ ಸವಿತಾ ಶಾಸ್ತ್ರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿಯ ಎಂಜಿಎಂ ಕಾಲೇಜಿನ ಡಾ.ಪ್ರಕಾಶ್ ರಾವ್ ವಂದಿಸಿದರು.
-ಶ್ವೇತ
ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ



ಕುಂದಾಪ್ರ.ಕಾಂ- editor@kundapra.com