ಕೊಡಿ ಹಬ್ಬ: ಉಪ್ಪುಂದ ಮನ್ಮಹಾರಥೋತ್ಸವ

ಕುಂದಾಪುರ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ ಸಂಭ್ರಮದಿಂದ ಜರುಗಿತು.
          ಬೆಳಿಗ್ಗೆ 5 ಗಂಟೆಯಿಂದ ಗೋಕರ್ಣದ ತಂತ್ರಿ ಗಣಪತಿ ಭಟ್ ಹಿರೆಗಂಗೆ ಅವರ ನೇತತ್ವದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ನವದಂಪತಿಗಳು ಕಬ್ಬಿನ ಕೊಡಿ ಖರೀದಿಸಿ ಶ್ರೀ ದೇವಿಯ ದರ್ಶನ ಪಡೆದರು.
ದೇವಿಯ ಹರಕೆ ಸೀರೆಗಳ ಏಲಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಸೀರೆಯನ್ನು ಪಡೆದರು. ಸಂಜೆ ಗಂಟೆ, ಜಾಗಟೆ, ಡೊಳ್ಳು ಕುಣಿತದ ಮೂಲಕ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ರಥ ಎಳೆಯುವುದರ ಮೂಲಕ ಕೃತಾರ್ಥರಾದರು.
ಕುಂದಾಪ್ರ.ಕಾಂ- editor@kundapra.com