ಬೈಂದೂರು, ಶಂಕರನಾರಾಯಣ, ಬ್ರಹ್ಮಾವರ ತಾಲೂಕು ರಚನೆ...?


ಕುಂದಾಪುರ/ಬ್ರಹ್ಮಾವರ: ಬೈಂದೂರು, ಶಂಕರನಾರಾಯಣ, ಬ್ರಹ್ಮಾವರ ತಾಲೂಕು ರಚನೇಯ ಕೂಗು ದಿನೇ ದಿನೇ  ಹೆಚ್ಚುತ್ತಲೇ ಇದೆ. ಹತ್ತಾರು ವರ್ಷಗಳಂದ ಈ ಭಾಗದ ಜನ ತಾಲೂಕು ರಚನೆಗಾಗಿ ಮನವಿ ಸಲ್ಲಿಸುತ್ತಾ, ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಸರಕಾರ ಇದ್ಯಾವುದಕ್ಕೂ ಸ್ವಂದಿಸಿಲ್ಲ . ತಾಲೂಕು ರಚನೆಗಾಗಿ ಸಿದ್ಧಪಡಿಸಿಟ್ಟ ವರದಿಗಳಿಗೆ ಧೂಳು ಮೆತ್ತದೆ. ಭರವಸೆಯೊಂದನ್ನು ಬಿಟ್ಟು ಇಲ್ಲಿನ ಜನರಿಗೆ ಮತ್ತೇನೂ ಸಿಕ್ಕಿಲ್ಲ. ಯಾವುದನ್ನು ತಾಲೂಕು ಕೇಂದ್ರವಾನ್ನಾಗಿಸಬೇಕು ಎಂಬ ಗೊಂದಲ ನಮ್ಮ ರಾಜಕಾರಂಇಗಳನ್ನು ಕಾಡದೇ ಇರದು. ಓಟ್ ಬ್ಯಾಂಕ್ ಗಾಗಿ ಎಲ್ಲ ತಿಳಿದೂ ತಿಳಿಯದವರಂತೆ ನಟಿಸುತ್ತದ್ದಾರೆ. ಆದರೆ ಜನತೆ ತಮ್ಮ ಹೋರಾಟವನ್ನು ನಡೆಸುತ್ತಲೇ ಇದ್ದಾರೆ.

ಬೈಂದೂರು ವರದಿ:

ವರದಿ 1: ಕನ್ನಡ ರಾಜ್ಯೋತ್ಸವದಂದು ಬೈಂದೂರಿನಲ್ಲಿ ನಾಗರಿಕ ವೇದಿಕೆ ಹಾಗೂ ಕ.ಸಾ.ಪ ವತಿಯಿಂದ ಶಾಸಕರಿಗೆ ಮಖ್ಯಮಂತ್ರಿಗಳಿಗೆ ಬೈಂದೂರು ತಾಲೂಕು ರಚನೆಯ ಕುರಿತು ವಿಶೇಷ ತಹಶೀಲ್ದಾರರು ಶ್ರೀ ರಾಜು ಮೊಗವೀರ‌ ಅವರ ಮೂಲಕ ಮನವಿ ನೀಡಿ‌ ಒತ್ತಾಯಿಸಲಾಯಿತು.
       ತಾಲೂಕು ರಚನೆಗೆ ಒತ್ತಾಯಿಸಿ ನಾಗರಿಕ ವೇದಿಕೆ ಬೈಂದೂರು ವತಿಯಿಂದ ಸಾಂಕೇತಿಕವಾಗಿ ಕಾರ್ಡ್ ಚಳುವಳಿ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಬೈಂದೂರು ಹೋಬಳಿ ನಾಗರಿಕರು ಎಚ್ಚರಿಸಿದ್ದರು. ಇಂದು ಬಹಿರಂಗವಾಗಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಒಪ್ಪಿಸಲಾಯಿತು.
      ಪ್ರಕಾಶ್‌ಸಿಂಗ್ ವರದಿಯಲ್ಲಿ ಬೈಂದೂರು ತಾಲೂಕು ರಚನೆಯನ್ನು ಕೈ ಬಿಟ್ಟಿರುವ ವಿಚಾರ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಜನತೆಗೆ ಮಾಡಿದ‌ ಅನ್ಯಾಯ‌ ಎಂದು ರವೀಂದ್ರ ಶ್ಯಾನುಭಾಗ್‌ರವರು ಹೇಳಿದರು. ಈ ಬಗ್ಗೆ ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಯಾರು ವಿರೋದಿಸಿದರೂ, ಬೈಂದೂರು ತಾಲೂಕು ರಚನೆಯ ವಿಚಾರದಲ್ಲಿ‌ ಒಮ್ಮತದ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ, ಬೈಂದೂರು ತಾಲೂಕು ರಚಿಸಬೇಕೆಂದು ಮುಂದೆ, ಬೈಂದೂರಿನ ಸಂಘ ಸಂಸ್ಥೆಗಳ ಹಾಗೂ ತಾಲೂಕು ರಚನಾ ಸಮಿತಿಯ‌ ಅಧ್ಯಕ್ಷರೊಂದಿಗೆ ಹೋರಾಟವನ್ನು ನಡೆಸುವ ಕುರಿತು ತಿಳಿಸಿದರು. 
         ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ‌ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್, ಚಂದ್ರಶೇಖರ್ ಹೊಳ್ಳ, ವಸಂತ ಹೆಗ್ಡೆ, ಜಯಾನಂದ ಹೋಬಳಿದಾರ್, ವಿಶ್ವೇಶ್ವರ್ ಭಟ್, ಭಾಸ್ಕರ್ ಶೆಟ್ಟಿ ಬಿಯಾರ್, ಡಾ|| ಸುಬ್ರಹ್ಮಣ್ಯ ಭಟ್, ರಾಮದೇವಾಡಿಗ , ಜಗದೀಶ್‌ಪಟವಾಲ್ , ಉದಯ ಶೆಟ್ಟಿ ನಾಕಟ್ಟೆ, ರಾಮದೇವಾಡಿಗ, ಕೃಷ್ಣ ಪೂಜಾರಿ, ಶಂಕರ ಬಂಕೇಶ್ವರ್ ಉಪಸ್ಥಿತರಿದ್ದರು.
       
  ವರದಿ 2: ಬೈಂದೂರು ತಾಲೂಕು ರಚನೆಯ ಹೋರಾಟದ ಕಾವು ದಿನೇ ಏರುತ್ತಲಿದೆ. ಕಳೆದ ಕೆಲವು ದಿನಗಳ ಹಿಂದೆ ಬೈಂದೂರು ಹೋಬಳಿ ನಾಗರಿಕರು ಮುಖ್ಯಮಂತ್ರಿಗಳಿಗೆ ತಾಲೂಕು ರಚನೆಯ ಬಗ್ಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು ಹಾಗೂ ಒಗ್ಗಟ್ಟಾಗಲು ಕರೆ ನೀಡಲಾಗಿತ್ತು. ಈ ದಿನ ದಿನಾಂಕ. 03-11-2012ರಂದು ಶಾಸಕ ಕೆ. ಲಕ್ಷ್ಮೀನಾರಾಯಣ ಇವರಿಗೆ ನಾಗರೀಕ ವೇದಿಕೆ ಬೈಂದೂರು ವತಿಯಿಂದ ತಾಲೂಕು ರಚನೆಯ ಬಗ್ಗೆ ಮನವಿ ಸಲ್ಲಿಸಲಾಯಿತು. 

    ವರದಿ 3:  ಬೈಂದೂರನ್ನು ತಾಲೂಕನ್ನಾಗಿ ಘೋಷಿಸಬೇಕೇಂದು ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿಯವರ ನೇತ್ರತ್ವದಲ್ಲಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಜಿ. ಪಂ. ಸದಸ್ಯೆ ಗೌರಿ ದೇವಾಡಿಗ ನಾಗರೀಕ ವೇದಿಕೆ ಅಧ್ಯಕ್ಷ ರವೀಂದ್ರ ಶ್ಯಾನುಬಾಗ್, 12ನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಯಾನಂದ ಹೋಬಳಿದಾರ್, ಸದಾಶಿವ ಡಿ, ಬೈಂದೂರು ಹೋಬಳಿ ಕ.ಸಾ.ಪ. ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಕ.ಸಾ.ಪ. ಗೌರವ ಕಾರ್ಯದರ್ಶಿ ಯು. ಸಂದೇಶ ಭಟ್, ನಿತಿನ್ ಶೆಟ್ಟಿ, ಭಾಸ್ಕರ ಶೆಟ್ಟಿ, ಗೋವಿಂದ ಎಂ., ವಸಂತ ಶೆಟ್ಟಿ, ಯು. ಗೋಪಾಲ ಶೆಟ್ಟಿ, ಗಣೇಶಪ್ರಸನ್ನ ಮಯ್ಯ, ಜಯರಾಮ ಶೆಟ್ಟಿ, ಸುರೇಶ ಬಟ್ವಾಡಿ ಉಪಸ್ಥಿತರಿದ್ದರು.

ಶಂಕರನಾರಾಯಣ ವರದಿ:

ತಾಲೂಕು ಆಗ್ರಹಿಸಿ 10 ಸಾವಿರ ಅಂಚೆಕಾರ್ಡ್ ರವಾನೆ.

   ನಕ್ಸಲ್‌ಪೀಡಿತ ಪ್ರದೇಶವನ್ನೊಳಗೊಂಡಿರುವ ಶಂಕರನಾರಾಯಣವನ್ನು ತಾಲೂಕನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಸ್ಥಳೀಯ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ 10000 ಅಂಚೆ ಕಾರ್ಡ್ ರವಾನಿಸಿದೆ. 
ಈಗಾಗಲೆ 32 ಗ್ರಾಮಗಳು ಶಂಕರನಾರಾಯಣ ತಾಲೂಕಾಗಬೇಕೆಂದು ನಿರ್ಣಯ ತೆಗೆದುಕೊಂಡಿದ್ದು ಸರಕಾರ ಮೀನ ಮೇಷ ಎಣಿಸದೆ ಅಭಿವದ್ಧಿ ಹಿತದಷ್ಟಿಯಿಂದ ತಾಲೂಕು ಘೋಷಣೆ ಮಾಡಬೇಕು. ಆಗ್ರಹಕ್ಕೆ ಸ್ಪಂದಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೋರಾಟ ಸಮಿತಿಯ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಆಗ್ರಹಿಸಿದ್ದಾರೆ.

ಬ್ರಹ್ಮಾವರ 
ವರದಿ:

ತಾಲೂಕು ರಚನೆಗಾಗಿ ಮುಖ್ಯ ಮಂತ್ರಿ ಭೇಟಿಗೆ ನಿಯೋಗ ಸಿದ್ಧತೆ.
         ಬ್ರಹ್ಮಾವರ ತಾಲೂಕು ರಚನೆ ಮಾಡುವ ಕುರಿತು ಪಕ್ಷ ಭೇದ ಮರೆತು ನಿಯೋಗ ಮಾಡಿಕೊಂಡು ಮುಖ್ಯ ಮಂತ್ರಿಗಳ ಭೇಟಿಯನ್ನು ಮಾಡಿಸುವ ಹೊಣೆಗಾರಿಕೆಯನ್ನು ಉಡುಪಿ ಶಾಸಕ ರಘುಪತಿ ಭಟ್ ವಹಿಸಿಕೊಂಡಿದ್ದಾರೆ. 
       ಬ್ರಹ್ಮಾವರ ಹಂದಾಡಿಯ ಶ್ರೀ ದುರ್ಗಾ ಸಭಾ ಗಹದಲ್ಲಿ ಮಂಗಳವಾರ ಜರುಗಿದ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಸಭೆಯಲ್ಲಿ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 
    ಸಮಿತಿ ಅಧ್ಯಕ್ಷ ಬಾರಕೂರು ಸತೀಶ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, 30 ವರ್ಷದ ಬೇಡಿಕೆಗೆ ಇನ್ನೂ ಸ್ಪಂದಿಸದೆ, ಈ       ತನಕ ಆಡಳಿತ ಮಾಡಿದ ಎಲ್ಲಾ ಸರಕಾರಗಳು ಬ್ರಹ್ಮಾವರ ಜನತೆಗೆ ನಂಬಿಸಿ ದ್ರೋಹ ಮಾಡಿವೆ. ಆಡಳಿತಾತ್ಮಕ ಎಲ್ಲ ವ್ಯವಸ್ಥೆಗಳಿರುವ ಬ್ರಹ್ಮಾವರವನ್ನು ತಾಲೂಕು ಮಾಡುವಂತೆ ಹೋರಾಟ ಸಮಿತಿಯು ಕಳೆದ ವಾರ ಮುಖ್ಯ ಮಂತ್ರಿಗಳ ವಿಳಾಸಕ್ಕೆ ಅಂಚೆ ಕಾರ್ಡಬರೆಯುವ, ಮೊಬೆಲ್ ಗೆ ಎಸ್‌ಎಂಎಸ್ ಮಾಡುವ ಮತ್ತು ಅಂತರ್ಜಾಲಕ್ಕೆ ಬ್ರಹ್ಮಾವರವನ್ನು ತಾಲೂಕು ಮಾಡಿ ಎನ್ನುವ ಸಂದೇಶವನ್ನು ರವಾನಿಸುವ ಕಾರ್ಯ ಮಾಡಿತ್ತು ಎಂದರು. 
         ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನಿರಂಜನ ಶೆಟ್ಟಿ. ತಾಲೂಕು ಪಂಚಾಯಿತಿ ಸದಸ್ಯೆ ಉಷಾ ಮಟಪಾಡಿ, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ವಾಸುದೇವ್, ಜ್ಞಾನ ವಸಂತ್ ಶೆಟ್ಟಿ, ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಎಸ್.ನರೋನ್ಹ.ಕಾರ್ಮಿಕ ಮುಖಂಡ ವಿಠಲ್ ಪೂಜಾರಿ ಉಪಸ್ಥಿತರಿದ್ದರು.