ವಿವೇಕಾನಂದರ 151ನೇ ಜನ್ಮ ಶತಮಾನೋತ್ಸವ‌ ಆಚರಣೆ

ಬೈಂದೂರು: ನಾಗರಿಕ ವೇದಿಕೆ ಬೈಂದೂರು‌ ಇದರ ವತಿಯಿಂದ ಹಾಗೂ ಸೇವಾ ಸಂಗಮ‌ ಬೈಂದೂರು‌ ಇವರ ಸಹಕಾರದೊಂದಿಗೆ‌ ಇಲ್ಲಿನ ಶಿಶುಮಂದಿರದಲ್ಲಿ ಸ್ವಾಮಿ ವಿವೇಕಾನಂದರ 151ನೇ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.
     ನಿವೃತ್ತ‌ ಉಪನ್ಯಾಸರಾದ  ಶೇಷಪ್ಪಯ್ಯ ಹೆಬ್ಬಾರ್  ದೀಪ ಬೆಳಗಿಸಿ ಕಾರ್‍ಯಕ್ರಮವನ್ನು ಉದ್ಘಾಟಿಸಿದರು.
     ಜಗನ್ನಾತ್‌ ಅಧ್ಯಕ್ಷತೆ ವಹಿಸಿದ್ದರು. ನಾಗರಿಕ ವೇದಿಕೆಯ‌ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಬಿಯಾರ, ಜಗದೀಶ ಪಟವಾಲ್, ನಾಗರಾಜ ಶೇಟ್, ಕೃಷ್ಣ ಪೂಜಾರಿ, ಪ್ರಕಾಶ್, ಶಂಕರ ಬಂಕೇಶ್ವರ, ಸಂಜಯ್, ಶ್ರೀಧರ್ ಉಪಸ್ಥಿತರಿದ್ದರು.
ಚಂದ್ರಶೇಖರ್ ನಾವಡ ಬೈಂದೂರು ಕಾರ್ಯಕ್ರಮ ನಿರೂಪಿಸಿ, ಮಂಜುನಾಥ ವಂದಿಸಿದರು.