"ಲೈಫ್ ಆಫ್ ಪೈ" ಸಿನಿಮಾಗೆ ಆಸ್ಕರ್

 ಚಿತ್ರರಂಗ್ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಲಾಸ್ ಎಂಜಲಿಸ್ ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 85 ನೇ ಸಾಲಿನ 2013ರ ಆಸ್ಕರ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತೀಯರ ನಿರೀಕ್ಷೆಯಂತೆ "ಲೈಫ್ ಆಫ್ ಪೈ" ಎರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. 
    ನಿರ್ದೇಶಕ ಆಂಗ್ಲೀ ಡಿ ಅವರ 3ಡಿ ಚಿತ್ರ "ಲೈಫ್ ಆಫ್ ಪೈ" ಅತ್ಯುತ್ತಮ ಛಾಯಾಗ್ರಹಣ ಮತ್ತು ವಿಶ್ಯುವಲ್ ಎಫೆಕ್ಟ್ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಚಿತ್ರದ ಛಾಯಾಗ್ರಹಕ ಕ್ಲಾಡಿಯೊ ವಿರಾಂಡ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಭಾರತದ ಸುರಾಜ್ ಶರ್ಮಾ, ಬೆಂಗಳೂರಿನ ಗೌತಮ್ ಬೇಳೂರು ಲೈಫ್ ಆಫ್ ಪೈ ಚಿತ್ರದಲ್ಲಿ ನಟಿಸಿದ್ದರು. 
   ಲೈಫ್ ಆಫ್ ಪೈ ಕೆನಡಾದ ಯಾನ್ ಮಾರ್ಟೆಲ್ ಅವರ "ಲೈಫ್ ಆಫ್ ಪೈ" ಕಾದಂಬರಿ ಆಧಾರಿತ ಸಿನಿಮಾವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲೂ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಕಾದಂಬರಿ ಪಡೆದಿತ್ತು.

ಕುಂದಾಪ್ರ ಡಾಟ್ ಕಾಂ- editor@kundapra.com