ಸಾಹಿತ್ಯ ರಚನೆ ಜೀವನಾನುಭವದಿಂದ ಮೂಡಿಬರಬೇಕು: ಯು. ಸಿ.ಹೊಳ್ಳ

ಬೈಂದೂರು: ಕನ್ನಡ ಮತ್ತು ಕರ್ನಾಟಕಕ್ಕೆ ಭವ್ಯ ಪರಂಪರೆಯಿದೆ. ಜಗತ್ತಿನ ಅತಿ ಪ್ರಾಚೀನ ಭಾಷೆಗಳಲ್ಲಿ ಕನ್ನಡವು ಒಂದು. ಅಚ್ಚಕನ್ನಡದಲ್ಲಿ ಕೃತಿ ರಚಿಸಿದ ಆಂಡಯ್ಯ ಕನ್ನಡವೆನಿಪ್ಪನಾಡು ತಿಲ್ವಾದುದು ಎಂದಿದ್ದಾರೆ. ಕನ್ನಡ ಕರ್ನಾಟಕ ಎಂಬ ಭಾಷಾಭಿಮಾನದ ಜೊತೆಜೊತೆಗೆ ಬಹುಸಂಸ್ಕ್ರತಿಯ ನಾಡಿನಲ್ಲಿ ಎಲ್ಲಾ ಸಂಸ್ಕ್ರತಿಯ ರಕ್ಷಣೆ- ಸಂವರ್ದನೆ ಆಗುವುದು ಒಟ್ಟು ಭಾವೈಕೈತೆಯ ದೃಷ್ಟಿಯಿಂದ ಅವಶ್ಯವಾಗಿದೆ. ಸಾಹಿತ್ಯ ರಚನೆ ಜೀವನಾನುಭವ ದಿಂದ ಮೂಡಿಬರಬೇಕು ಎಂದು ಉಪ್ಪುಂದ ಚಂದ್ರಶೇಖರ ಹೊಳ್ಳ ಆಶಿಸಿದರು.
        ಅವರು ಬೈಂದೂರು ರಾಜರಾಜೇಶ್ವರಿ ಕಲಾಮಂದಿರದಲ್ಲಿ ನಡೆದ 12ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ತಮ್ಮ ಆಶಯ ಭಾಷಣದಲ್ಲಿ ಕನ್ನಡ ನಾಡು ನುಡಿಯ ಮಜಲುಗಳನ್ನು ಅವಲೋಕಿಸುತ್ತಾ ಶಬ್ಡಕ್ಕೆ ಪ್ರಾವಿತ್ಯವಿರುವಂತೆ ಜೀವನಕ್ಕೂ ಪ್ರಾವಿತ್ಯ ಇರಬೇಕು. ಶಬ್ದವಾಗಲಿ ಜೀವನವಾಗಲಿ ದುರ್ಬಳಕೆಗೊಳ್ಳಬಾರದು. ಗಡಿನಾಡಿನಲ್ಲಿ ಸಂಚರಿಸುವಾಗ ಸ್ಥಳೀಯ ಬಹುಭಾಷಿಕರೊಂದಿಗೆ ಸಹಬಾಳ್ವೆ ನಡೆಸುತ್ತಲೇ ಕನ್ನಡದ ಕಂಪನ್ನು ಉಳಿಸಿ ಬೆಳೆಸುವಂತಿರಬೇಕು. 
       ಮೊದಲ ದಿನದ ಉದ್ಘಾಟನೆ ಬಳಿಕ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳ ವಿಚಾರಧಾರೆಗಳು ಪ್ರತಿಧ್ವನಿಸಿತು. ಬೈಂದೂರು ತಾಲೂಕು ಆದ್ಯತೆ ಕನ್ನಡ ಸಾಹಿತ್ಯ ಕಾರಂತ, ಅಡಿಗರ ಕೃತಿ ಕರಾವಳಿ ಪರಿಸರ ಸಂರಕ್ಷಣೆ ಜೊತೆಗೆ ಕವಿಗೋಷ್ಠಿ ಹಾಗೂ ಭಾವಗಾಯನ ಸಾಹಿತ್ಯಾಭಿಮಾನಿಗಳನ್ನು ಮುದಗೊಳಿಸಿತ್ತು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸೂಕ್ತ ಆಹ್ವಾನ ನೀಡಿಲ್ಲ ಎನ್ನುವ ವಿಚಾರ ಹೊರತುಪಡಿಸಿದರೆ ಅಚ್ಚುಕಟ್ಟಿನ ವ್ಯವಸ್ಥೆ ಪುಸ್ತಕ ಭಂಡಾರ ಸಮ್ಮೇಳನದ ಮೊದಲ ದಿನದ ಮೆರುಗನ್ನು ಹೆಚ್ಚಿಸಿತ್ತು. ಮೂರ್ತಿ ಬೈಂದೂರು, ಚಂದ್ರ ಬಂಕೇಶ್ವರ, ಸುರಭಿ ಕಲಾ ಶಾಲೆ, ಲಾವಣ್ಯ ತಂಡದ ರಂಗಗೀತೆ, ಕುಡುಬಿ ಕುಣಿತ, ಭಜನ ಕುಣಿತ, ಭರತನಾಟ್ಯ ಮನರಂಜನೆ ನೀಡಿತ್ತು.