ಬಡ ನಿವೇಶನ ರಹಿತರ ಸಮಾವೇಶ


ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಪುರಸಭೆ ವ್ಯಾಪ್ತಿಯ ವಡೇರಹೋಬಳಿ, ನಾನಾ ಸಾಹೇಬ್ ರಸ್ತೆ, ವಿಠಲವಾಡಿ, ಜೆಎಲ್‌ಬಿ ರಸ್ತೆ, ಕಾಲೇಜು ರಸ್ತೆ, ಅಂಬೇಡ್ಕರ್ ನಗರ, ಟಿ.ಟಿ. ರಸ್ತೆ ಪ್ರದೇಶದ 8ನೆ ವಾರ್ಡ್ ಮಟ್ಟದ ಬಡ ನಿವೇಶನ ರಹಿತರ ಸಮಾವೇಶವನ್ನು ಕುಂದಾಪುರ ಕಾರ್ಮಿಕ ಭವನದಲ್ಲಿ ರವಿವಾರ ಜರುಗಿತು.

       ಪುರಸಭೆ ವ್ಯಾಪ್ತಿಯ ನಿವೇಶನ ರಹಿತರ ಸಂಚಾಲಕ, ಕಾರ್ಮಿಕ ಮುಖಂಡ ಎಚ್.ನರಸಿಂಹ ಮಾತನಾಡಿ, ಮನೆ, ನಿವೇಶನಕ್ಕಾಗಿ ಪುರಸಭೆಗೆ ಅರ್ಜಿ ಸಲ್ಲಿಸಿ ರುವ ಎಲ್ಲಾ ಅರ್ಹ ಅರ್ಜಿದಾರರಿಗೆ ಮನೆ ನಿವೇಶನ ಮಂಜೂರು ಮಾಡಲು ಪುರಸಭೆ ಆಡಳಿತ ತೀರ್ಮಾನ ಕೈಗೊಳ್ಳಬೇಕು. ಭೂಮಿಯ ಹಕ್ಕು ನಮ್ಮ ಹಕ್ಕು. ಈ ಹಿನ್ನೆಲೆಯಲ್ಲಿ ಡಿ.14ರ ಬೆಳಗ್ಗೆ 10 ಗಂಟೆಗೆ ಪುರಸಭಾ ಕಚೇರಿಯೆದುರು ಬೃಹತ್ ಧರಣಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
      ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ, ಹೋರಾಟ ಸಮಿತಿ ಸಂಚಾಲಕ ವಿ.ನರಸಿಂಹ, ಗುಣರತ್ನ, ಅಶ್ವತ್ಥ್‌ಕುಮಾರ್, ಸುಧಾಕರ ಕಾಂಚನ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ವಹಿಸಿದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಕೋಶಾಧಿಕಾರಿ ನಾಗರತ್ನ ನಾಡ ಸ್ವಾಗತಿಸಿದರು.
     ಪುರಸಭೆ ವ್ಯಾಪ್ತಿಯ 8ನೆ ವಾರ್ಡ್ ಮಟ್ಟದ ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಗಿರೀಶ್, ಉಪಾಧ್ಯಕ್ಷರುಗಳಾಗಿ ನಾಗ ವಿ., ಪಿಲಿಫ್ ಗೊನ್ಸಾಲ್ವಸ್, ಪ್ರೇಮಾ ಶ್ರೀನಿವಾಸ, ಕಾರ್ಯದರ್ಶಿಯಾಗಿ ಎಚ್.ನರಸಿಂಹ, ಜೊತೆ ಕಾರ್ಯದರ್ಶಿಯಾಗಿ ಶಂಕರ ಪೂಜಾರಿ, ಸದಾನಂದ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇತ್ರಾವತಿ, ಜಯಂತಿ, ಮಂಜುನಾಥ, ಮೈನಾಡಿ ಗೋಪಾಲ, ಹುಸೈನ್, ರಾಘವೇಂದ್ರ ವಿಠ್ಠಲವಾಡಿ, ಗುಣರತ್ನರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.