ಉಪ್ಪುಂದ: ಬ್ರಹತ್ ರಕ್ತದಾನ ಶಿಬಿರ

ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕ,  ಜಿ ಶಂಕರ್ ಫ್ಯಾಮಿಲಿ ಟ್ರಸ್ಟ, ರಕ್ತನಿಧಿ ಕೆ.ಎಂ .ಸಿ ಮಣಿಪಾಲ, ರಿಕ್ಷಾ ಟೆಂಪೋ ಹಾಗೂ ಕಾರು ಚಾಲಕ ಮಾಲಕರ ಸಂಘ  ಉಪ್ಪುಂದ ಇವರ ಸಂಯುಕ್ತಾಶ್ರಯದಲ್ಲಿ ಉಪ್ಪುಂದದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು.

 ಜಿ ಶಂಕರ್ ಪ್ಯಾಮಿಲಿ ಟ್ರಸ್ಟನ ನಾಡೋಜ ಡಾ. ಜಿ ಶಂಕರ್ ಶಿಬಿರವನ್ನು ಉದ್ಘಾಟಿಸಿದರು. ಉದ್ಯಮಿ ಬಿ ಎಸ್ ಸುರೇಶ ಶೆಟ್ಟಿ ಉಪ್ಪುಂದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು
     ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅದ್ಯಕ್ಷ ಜಯ.ಸಿ ಕೋಟ್ಯಾನ್, ರಕ್ತನಿಧಿ ಕೆ.ಎಂ .ಸಿ ಮಣಿಪಾಲ ಇದರ ನಿರ್ದೇಶಕ ಡಾ.ಆದಿತ್ಯಾ, ಸರಕಾರಿ ಪ್ರಥಮ ದರ್ಜೇ ಕಾಲೇಜು ಉಪ್ಪುಂದದ ಪ್ರಾಂಶುಪಾಲರಾದ ಯು ಸೀತಾರಾಮಾ ಮಯ್ಯ, ಉಪ್ಪುಂದ ಗ್ರಾಮ ಪಂಚಾಯತ್ ಅದ್ಯಕ್ಷೆ ಯು ಸುಶೀಲ ಎನ್ ಗಾಣಿಗ  , ಕೃಷ್ಣ ಮೊಗವೀರ , ಮೊಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ಅದ್ಯಕ್ಷರಾದ ರಾಮ ಮೊಗವೀರ ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು. ಪುರಂದರ ಗಾಣಿಗ ಸ್ವಾಗತಿಸಿ, ಬಾಬು ಪೂಜಾರಿ ನಿರೂಪಿಸಿದರು. ಸುರೇಶ ದೇವಾಡಿಗ ಧನ್ಯವಾದಗೈದರು.