ಸಿಐಟಿಯು ನ 4ನೇ ಉಡುಪಿ ಜಿಲ್ಲಾ ಸಮ್ಮೇಳನ


ಕುಂದಾಪುರ: ದೇಶದ ಶ್ರೀಮಂತರ ಸಲುವಾಗಿಯೇ ವಿದೇಶಿ ಬಂಡವಾಳ ಹೂಡಿಕೆ ಪದ್ದತಿ ಜಾರಿ ಗೊಳಿಸುವ ಬಗ್ಗೆ ಸರಕಾರ ಆಸಕ್ತಿ ವಹಿಸಿದೆ. ಬಡವರನ್ನು ಮತ್ತಷ್ಟು ಬಡವರನಾಗಿಸುತ್ತಿರುವ ಅಮೇರಿಕಾ ಸರಕಾರದ ಆರ್ಥಿಕ ನೀತಿ ಭಾರತದಲ್ಲಿ ಅಳವಡಿಸುವುದು ಹಗಲು ಕಂಡ ಬಾವಿಗೆ ರಾತ್ರಿ ಬಿದ್ದ ಹಾಗೆ ಎಂದು ಸಿ.ಐ.ಟಿಯು. ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪ್ರಸನ್ನ ಕುಮಾರ್ ಹೇಳಿದರು.

    ಅವರು ಕುಂದಾಪುರ ಕಾರ್ಮಿಕ ಭವನದಲ್ಲಿ ಜರುಗಿದ ಸಿ.ಐ.ಟಿ.ಯು. ನ ೪ನೇ ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರ ಸಂಕಷ್ಟಗಳಿಗೆ ಸ್ವಂದಿಸದೇ, ಕಾರ್ಮಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರಕಾರದ ವಿರುದ್ದ ಎಲ್ಲಾ ಕಾರ್ಮಿಕರು ಸಂಘಟಿತರಾಗಬೇಕಿದೆ ಎಂದರು,
      ಏ.4ರಿಂದ ಕೇರಳದ ಕಣ್ಣೂರಿನಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸಿಐಟಿಯು ಸಮ್ಮೇಳನ, ಅದೇ ರೀತಿ ಶಿರಸಿಯಲ್ಲಿ ಜ.27ರಿಂದ ನಡೆಯುವ ಸಿಐಟಿಯು ರಾಜ್ಯ ಸಮ್ಮೇಳನದ ಅಂಗವಾಗಿ ಈ ಸಮ್ಮೇಳನ ನಡೆಯುತ್ತಿದೆ ಎಂದರು. ಸಿಐಟಿಯು ಮುಖಂಡ ಕಾಮ್ರೇಡ್ ವಿಶ್ವನಾಥ ರೆ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಹಿರಿಯ ಮುಖಂಡರಾದ ಮಹಾಬಲ ವಡೇರಹೋಬಳಿ, ಬಾಲಕಷ್ಣ ಶೆಟ್ಟಿ, ಎರಿಕ್ ರೆಬೆಲ್ಲೊ, ದೋಗು ಸುವರ್ಣ, ಲಕ್ಷ್ಮಣ್, ಎ.ಎಸ್.ಆಚಾರ್ಯ ಉಪಸ್ಥಿತರಿದ್ದರು. ಸುರೇಶ ಕಲ್ಲಾಗರ ಮತ್ತು ಬಳಗದವರು ಕ್ರಾಂತಿಗೀತೆ ಹಾಡಿದರು.