ಹೃದಯ ಚಿಕಿತ್ಸೆ ಆರ್ಥಿಕ ನೆರವು

ಕುಂದಾಪುರ: ಹೃದಯ ಕಾಯಿಲೆಯಿಂದ ಬಳಲುತ್ತಿರುವ ಕುಂದಾಪುರ ತಾಲೂಕು ಕಂಡ್ಲೂರು ನಿವಾಸಿ ಫೆಲಿಕ್ಸ್ ಡಿ’ಸೋಜರವರ ಹೃದಯ ಚಿಕಿತ್ಸೆಗಾಗಿ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಹಣ ಮಂಜೂರಾದ ಕುರಿತು ಮಂಜೂರು ಪತ್ರವನ್ನು ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಿದ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್
ಚಂದ್ರ ಶೆಟ್ಟಿಯವರ ಪರವಾಗಿ ಕುಂದಾಪುರ ತಾಲೂಕ್ ಪಂಚಾಯತ್ ಮಾಜಿ ಸದಸ್ಯೆ ಜ್ಯೋತಿ  ವಿ ಪುತ್ರನ್ ಹಸ್ತಾಂತರಿಸಿದರು.


ಜೊತೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಹೆಗ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್ , ಉಪಾಧ್ಯಕ್ಷ ಚಂದ್ರ ಶೇಖರ್ ಶೆಟ್ಟಿ, ಕಾರ್ಯದಶರ್‌ಿ ವಿನೋದ ಕ್ರಾಸ್ತಾ, ಸಾಮಾಜಿಕ ಕಾರ್ಯಕರ್ತ ವಿಜಯ ಪುತ್ರನ್ ಮುಂತಾದವರು ಉಪಸ್ಥಿತರಿದ್ದರು.