ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ

ಕುಂದಾಪುರ: ಸುವರ್ಣ ಸಂಭ್ರಮದ ಸಂಭ್ರಮದ ಸಡಗರದಲ್ಲಿರುವ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ಸಂಸ್ಮರಣೆ ಸಮಾರಂಭ ಡಿ. 5 ರಂದು ಜರುಗಿತು. 
    ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿ ಡಾ| ಹೆಚ್. ಶಾಂತಾರಾಮ್ ವಹಿಸಿದ್ದರು.
      ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಭಾಗವಹಿಸಿ ಮಾತನಾಡಿದರು. ಕಾಲೇಜಿನ ವಿಶ್ವಸ್ಥ ಮಂಡಳಿಯ ಪರವಾಗಿ ಕೆ. ದೇವದಾಸ್ ಕಾಮತ್ ಸಂಸ್ಥಾಪಕರ ಸಂಸ್ಮರಣೆಗೈದರು, ಕಾಲೇಜಿನ ಅಧ್ಯಾಪಕರ ಪರವಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕ ಅರುಣಾಚಲ ಮಯ್ಯ ಮತ್ತು ವಿಧ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿನಿ ಕಮಲಾಕ್ಷಿ ಸಂಸ್ಥಾಪಕರ ಸಂಸ್ಮರಣೆಗೈದರು.
       ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ನಡೆದ ಸಂಗೀತ ಸ್ವರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ತಂಡಕ್ಕೆ ಕೊಡಮಾಡುವ ಡಾ| ಎ. ಎಸ್. ಭಂಡಾರ್ಕಾರ್ ಪರ್ಯಾಯ ಫಲಕವನ್ನು ಮತ್ತು ವಿವಿಧ ಸಂಗೀತ ಸ್ವರ್ಧೆಗಳ ವಿಜೆತರಿಗೆ ಬಹುಮಾನಗಳನ್ನು ಈ ಸಂಧರ್ಭದಲ್ಲಿ ವಿತರಿಸಲಾಯಿತು.
     ಸಮಾರಂಭದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಬಿ. ಎಂ. ಸುಕುಮಾರ್ ಶೆಟ್ಟಿ. ಕೆ. ಶಾಂತಾರಾಮ್ ಪ್ರಭು, ರಾಜೇಂದ್ರ ತೊಳಾರ್ ಮತ್ತು ಆಡಳಿತ ಮಂಡಳಿಯ ಸದಸ್ಯ ಸೋಲೋಮನ್ ಸೋನ್ಸ್, ನಿವೃತ್ತ ಪ್ರಾಂಶುಪಾಲ ಎ. ಸಿ. ತುಂಗಾ ಅವರು ಉಪಸ್ಥಿತರಿದ್ದರು.
     ಭಂಡಾರ್ಕಾರ್ ಕುಂಡುಂಬದ ಮೋಹನ್  ಭಂಡಾರ್ಕಾರ್ ಮತ್ತು ರಾಧಾ ಶೆಣೈ ಉಪಸ್ಥಿತರಿದ್ದರು. 
ಕಾಲೇಜಿನ ಪ್ರಾಂಶುಪಾಲ ಪ್ರೋ| ಚಂದ್ರಶೇಖರ್ ದೋಮ ಸ್ವಾಗತಿಸಿದರು. ಉಪನ್ಯಾಸಕಿ ಸರೋಜ ಎಂ ಕಾರ್ಯಕ್ರಮ ನಿರ್ವಹಿಸಿ, ಉಪನ್ಯಾಸಕಿ ಶಾಲಿನಿ ಧನ್ಮಾದಗೈದರು.