ಕುಂದಾಪುರ: ಕೋಡಿ ಶ್ರೀ ಚಕ್ರೇಶ್ವರಿ ಮಹಾತ್ಮೆ ಎಂಬ ನೂತನ ಯಕ್ಷಗಾನ ಪ್ರಸಂಗವನ್ನು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಎಚ್. ಎನ್. ಅಶೋಕ್ ಕುಮಾರ್ ಶೆಟ್ಟಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಮಹಾತ್ಮೆಯ ಪ್ರಸಂಗವನ್ನು ಸೌಕೂರು ಮೇಳಕ್ಕೆ ಅರ್ಪಿಸಲಾಯಿತು.
ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ಅವರನ್ನು ಶ್ರೀ ಚಕ್ರಮ್ಮ ದೇವಸ್ಥಾನದ ಕಾರ್ಯದರ್ಶಿ ಬಿ. ಪಿ. ಪೂಜಾರಿ ಸನ್ಮಾನಿಸಿದರು. ಯಕ್ಷಗಾನಕ್ಕೆ ಇತಿಹಾಸ ಒದಗಿಸಿದ ಕ್ಷೇತ್ರದ ಪಾತ್ರಿಗಳಾದ ಮಾಧವ ಎಂ. ಪೂಜಾರಿಯವರನ್ನು, ತಿಮ್ಮಪ್ಪ ಖಾರ್ವಿ ಹಾಗೂ ಸೌಕೂರು ಮೇಳದ ಸಂಚಾಲಕರಾದ ಕೋಡಿ ವಿಶ್ವನಾಥ ಗಾಣಿಗರನ್ನು ಸುರೇಶ ಬಂಗೇರ ಸನ್ಮಾನಿಸಿದರು. ಸಂತೋಷ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು