ಸಂಭ್ರಮದಿಂದ ಜರುಗಿದ ಶ್ರೀ ಕುಂದೇಶ್ವರ ದೀಪೋತ್ಸವ

ಕುಂದಾಪುರ: ನಗರದ ಪ್ರಮುಖ ದೇವಳವಾದ ಶ್ರೀ ಕುಂದೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಹಾಗೂ ರಥೋತ್ಸವ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ 9 ರಿಂದ ಶ್ರೀ ಕುಂದೇಶ್ವರ ಸ್ವಾಮಿ ಸನ್ನಧಿಯಲ್ಲಿ ಶತರುದ್ರಾಭಿಷೇಕ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ 8:30ಕ್ಕೆ ಶ್ರೀ ಕುಂದೇಶ್ವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ-ಲಕ್ಷದೀಪೋತ್ಸವ ಬಳಿಕ ಶ್ರೀ ದೇವರ ಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಮೆರವಣಿಗೆಗೆ ಕೊಂಡೋಯ್ಯಲಾಯಿತು. ಕಟ್ಟಿಪೂಜೆ ಕೆರೆದೀಪ ಇತ್ಯಾದಿಗಳು ಜರುಗಿದವು. ದೇವಳಕ್ಕೆ ಆಗಮಿಸದ್ದ ನೂರಾರು ಭಕ್ತಾದಿಗಳು ದೀಪ ಹಚ್ಚಿ ಕೃತಾರ್ತರಾದರು. ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ದೇವಳದ ವಠಾರದಲ್ಲಿ ಭಜನೆ ಹಾಗೂ ನೃತ್ಯ ವಿದೂಷಿ ಪವಿತ್ರಾ ಅಶೋಕ್ ಅವರ ನಿರ್ದೇಶನದಲ್ಲಿ ನೃತ್ಯ ವಸಂತ ನಾಟ್ಯಾಲಯದ ಕಲಾವಿದೆಯರಿಂದ ನೃತ್ಯ ಸಿಂಚನ ನೃತ್ಯ ಕಾರ್ಯಕ್ರಮ ಜರುಗಿತು.
ಈ ನಡುವೆ ಮಾಜಿ ಆಡಳಿತ ಧರ್ಮದರ್ಶಿ ಡಾ| ಹೆಚ್. ವಿ. ನರಸಿಂಹಮೂರ್ತಿ ಅವರಿಗೆ ಗೌರವ ಅರ್ಪಿಸಲಾಯಿತು.










 ದೀಪಾಲಂಕಾರಗಳಿಂದ ದೇವಳ, ಪುಷ್ಕರಿಣಿ, ಬೀದಿಗಳು ಕಂಗೊಳಿಸುತ್ತಿದ್ದವು. ಲಕ್ಷ ದೀಪೋತ್ಸವ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ  ಸಾಂಸ್ಕ್ರತಿಕ ಮನೋರಂಜನಾ ಕಾರ್ಯಕ್ರಮಗಳು ಮತ್ತು ಸುಡುಮದ್ದು ಪ್ರದರ್ಶನಗಳು ಜನರನ್ನು ಆಕರ್ಷಿಸಿದವು.
ಚಿತ್ರಗಳು: ಸುನಿಲ್