’ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ’ ಆಹ್ವಾನ

ಕುಂದಾಪುರ: ಕರ್ನಾಟಕ ಬಾಲವಿಕಾಸ ಅಕಾಡಮಿಯು ಮಕ್ಕಳ ಸಾಹಿತ್ಯದ ೫ ಪ್ರಕಾರಗಳಿಗೆ2012-13 ನೇ ಸಾಲಿಗಾಗಿ ’ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ’ ಗಳನ್ನು ನೀಡಲು ನಿರ್ಧರಿಸಿದೆ.
       ಜನವರಿ 2012 ರಿಂದ ದಶಂಬರ 2012 ವರೆಗೆ ಪ್ರಕಟಗೊಂಡ ಸ್ವರಚಿತ ಕವನಸಂಕಲನ, ಕಥಾಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು), ಮಕ್ಕಳ ಜನಪದ (ಸೃಜನಾತ್ಮಕ/ಸಂಪಾದಿತ), ವೈಜ್ಞಾನಿಕ ಕೃತಿ, ಅನುವಾದಿತ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ), ಸಂಕೀರ್ಣ (ವಿಮರ್ಶೆ, ಲೇಖನ ಇತ್ಯಾದಿ) ಪುಸ್ತಕಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಪ್ರತಿಯೊಂದು ಪುಸ್ತಕದ ನಾಲ್ಕು ಪ್ರತಿಗಳನ್ನು ಈಕೆಳಕಂಡ ವಿಳಾಸಕ್ಕೆ ಕಳುಹಿಸುವಂತೆ ಆಸಕ್ತರಲ್ಲಿ ಕೋರಲಾಗಿದೆ.
     ಮಕ್ಕಳು ಮಕ್ಕಳಿಗಾಗಿ ಪ್ರಕಟಿಸಿದ ಕಾವ್ಯ, ಕತೆ, ಕೃತಿಗಳನ್ನು ಸಹ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಆದರೆ ಸದರಿ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಗಿರಬೇಕು. ಪ್ರಶಸ್ತಿಗಳಿಗೆ ಆಯ್ಕೆಯಾದ ಕೃತಿಗೆ ರೂ.5000 ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವುದೆಂದು ಕರ್ನಾಟಕ ಬಾಲವಿಕಾಸ ಅಕಾಡಮಿಯ ಉಡುಪಿ ಜಿಲ್ಲಾ ಸದಸ್ಯ ಪಾರಂಪಳ್ಳಿ ನರಸಿಂಹ ಐತಾಳರು ತಿಳಿಸಿರುತ್ತಾರೆ. ಪುಸ್ತಕ ಕಳುಹಿಸುವ ಕೊನೆಯ ದಿನಾಂಕ 01-01-2013
     ಪುಸ್ತಕ ಕಳುಹಿಸಬೇಕಾದ ವಿಳಾಸ- ಮಾನ್ಯ ಯೋಜನಾಧಿಕಾರಿಗಳು, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡಮಿ, ಪೋಲಿಸ್ ಹೆಡ್ ಕ್ವಾರ್ಟರ್ಸ್ ಎದುರು, ಮಹಾಂತೇಶ ನಗರ, ಧಾರವಾಡ-೮.