ಡಿ.28 ರಿಂದ ಉಡುಪಿ ಜಿಲ್ಲಾ ಮಟ್ಟದ ನಾಟಕೋತ್ಸವ

ಬೈಂದೂರು : ಲಾವಣ್ಯ (ರಿ.) ಬೈಂದೂರು ವತಿಯಿಂದ ಉಡುಪಿ ಜಿಲ್ಲಾ ನಾಟಕೋತ್ಸವವು ದಿ. 28, 29 ಹಾಗೂ 30ರಂದು ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಲಿದೆ. ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ನಡೆಯಲಿರುವ ನಾಟಕೋತ್ಸವದ ಉದ್ಘಾಟನೆಯನ್ನು ಬೈಂದೂರಿನ ಶಾಸಕ ಶ್ರೀ ಕೆ. ಲಕ್ಷೀನಾರಾಯಣ ನೆರವೇರಿಸಲಿದ್ದು, ನಾಟಕ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಮಾಲತಿ ಸುಧೀರ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ರಿಜಿಸ್ಟ್ರಾರ ಶ್ರೀ ಟಿ. ಜಿ. ನರಸಿಂಹಮೂರ್ತಿ, ಸದಸ್ಯ ಶ್ರೀ ರಾಜೇಂದ್ರ ಕಾರಂತ, ಲಾವಣ್ಯದ ಅಧ್ಯಕ್ಷ ಶ್ರೀ ಸದಾಶಿವ ಡಿ ಇತರರು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

        ಮೂರು ದಿನಗಳ ಕಾಲ ನಡೆಯಲಿರುವ ನಾಟಕೋತ್ಸವದಲ್ಲಿ ಪರಿಸರದ 12 ಮಂದಿ ಹಿರಿಯ ರಂಗಕಲಾವಿದರುಗಳನ್ನು ಸನ್ಮಾನಿಸಲಾಗುವುದು. ಜಿಲ್ಲೆಯ ರಂಗತಂಡಗಳಾದ ರಸರಂಗ ಕೋಟ, ಸುಮನಸಾ (ರಿ.) ಕೊಡವೂರು, ಹಾಗೂ ರಥಬೀದಿ ಗೆಳೆಯರು (ರಿ.) ಉಡುಪಿ ಇವರುಗಳಿಂದ ಕ್ರಮವಾಗಿ ಕೆಂಪು ಕಣಗಿಲೆ, ಭೀಷ್ಮನ ಕೊನೆಯ ದಿನಗಳು, ಗಂಗಿ ಪರಸಂಗ ನಾಟಕಗಳು ಪ್ರದರ್ಶನಗೊಳ್ಳಲಿದೆ.
ಕುಂದಾಪ್ರ.ಕಾಂ- editor@kundapra.com