ದೇವಾಲಯಗಳಿಂದ ಸಮಾಜ ಕಟ್ಟುವ ಕೆಲಸವಾಗಲಿ : ಸಚಿವ ಪೂಜಾರಿ


ಕುಂದಾಪುರ: ಊರಿನ ಪ್ರತಿಯೊಂದೂ ದೇವಾಲಯಗಳು ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಬೇಕು. ಎಲ್ಲಾ ಜಾತಿಗಳ ಶ್ರದ್ಧಾ ಕೇಂದ್ರವಾಗಿ ಧಾರ್ಮಿಕ ಭಾವನೆಗಳನ್ನು ಬೆಳೆಸುವಂತಿರಬೇಕು ಎಂದು ರಾಜ್ಯದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ೩೪೨೫೬ ದೇವಸ್ಥಾನಗಳಿದ್ದು ಅತ್ಯಂತ ಕೆಳ ಹಂತದಲ್ಲಿರುವ ದೇವವಾಲಗಳು ಕೂಡಾ ನಿರಂತರ ಬೆಳಗಬೇಕಾದರೆ ಕನಿಷ್ಟ ಆದಾಯ ಇರಬೇಕು.
ಅದಕ್ಕಾಗಿ ಕನಿಷ್ಟ ಆದಾಯವಿರುವ ದೇವಸ್ಥಾನಗಳಿಗೆ ಸರ್ಕಾರದಿಂದ ನೀಡುವ ಅನುದಾನದ ಮಿತಿಯನ್ನು ೨೪ ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಅನುದಾನವನ್ನು ಉಡುಪಿ ಜಿಲ್ಲೆಗೆ ನೀಡಲಾಗಿದೆ ಎಂದು ಅವರು ಹೇಳಿದರು.
     ಇದೇ ಸಂದರ್ಭ ದೇವಸ್ಥಾನದ ಪರವಾಗಿ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಲಕ್ಷ್ಮೀನಾರಾಯಣ ಭಟ್ ಮತ್ತಿ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿ ಪರವಾಗಿ ಸಮಿತಿ ಅಧ್ಯಕ್ಷ ಶಂಕರ ಪೂಜಾರಿ, ಕಾರ್ಯದರ್ಶಿ ರಾಜ ಟಿ.ಎಸ್ ಸನ್ಮಾನಿಸಿ ಗೌರವಿಸಿದರು. ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಾನಂದ, ಕಾರ್ಯದರ್ಶಿ ಮಹೇಶ ಪೂಜಾರಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಬೈಂದೂರು ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ವೀರಭದ್ರ ಶೆಟ್ಟಿ, ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಖಾರ್ವಿ, ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಯು.ಕೆ., ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷೆ ಶಾರದಾ ಶೇರುಗಾರ್, ಗಂಗೊಳ್ಳಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ಗಣೇಶ ಶೆಣೈ, ತಾ.ಪಂ. ಮಾಜಿ ಅಧ್ಯಕ್ಷ ರಾಜು ದೇವಾಡಿಗ, ಸಮಿತಿ ಸಲಹೆಗಾರ ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಗೋಪಾಲ ಖಾರ್ವಿ ದಾವನಮನೆ ಮೊದಲಾದವರು ಉಪಸ್ಥಿತರಿದ್ದರು.