ಸಿ.ಎಫ್.ಐ. ನಿಂದ ಖಾಸಗಿ ವಿಶ್ವವಿದ್ಯಾಲಯ ವಿಧೇಯಕ ವಿರೋಧಿಸಿ ಪ್ರತಿಭಟನೆ

ಕುಂದಾಪುರ: ಕರ್ನಾಟಕ ರಾಜ್ಯ ಸರಕಾರ ತಂದಿರುವ ಖಾಸಗಿ ವಿಶ್ವವಿದ್ಯಾಲಯ ವಿಧೇಯಕ 2012ನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಶಾಸ್ತ್ರೀ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು. 
    ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸುಹೇಲ್ ಕೋಲಾರ್ ಮಾತನಾಡಿ, ಈ ವಿಧೇಯಕ ಬಡವರ, ಅಲ್ಪಸಂಖ್ಯಾತರ,
ಹಿಂದುಳಿದವರ ವಿರೋಧಿಯಾಗಿದೆ. ಇದನ್ನು ಸರಕಾರ ಕೂಡಲೇ ವಾಪಾಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 
        ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷ ಫರ್ಹಾನ್ ಹೊನ್ನಾಳ ಮಾತನಾಡಿ, ಕೇಂದ್ರ ಸರಕಾರ ಎಫ್‌ಡಿಐ ತರುವ ಮೂಲಕ ಬಡವರ ರಕ್ತಹೀರಲು ಪ್ರಯತ್ನಿಸಿದರೆ, ರಾಜ್ಯ ಸರಕಾರ ಈ ಮಸೂದೆಯನ್ನು ತರುವ ಮೂಲಕ ಬಡ ವಿದ್ಯಾರ್ಥಿಗಳನ್ನು ಬಲಿಪಶು ಮಾಡಲು ಹೊರಟಿದೆ. ಒಂದು ವೇಳೆ ಈ ವಿಧೇಯಕದಿಂದ ಅನ್ಯಾಯವಾದಲ್ಲಿ ಕ್ಯಾಂಪಸ್ ಫ್ರಂಟ್ ಬೀದಿಗಿಳಿದು ಹೋರಾಟವನ್ನು ನಡೆಸುತ್ತದೆ ಎಂದು ಎಚ್ಚರಿಸಿದರು. 
ಕುಂದಾಪ್ರ.ಕಾಂ- editor@kundapra.com