ಜಾದೂಗಾರ ಓಂ ಗಣೇಶ್ ಅವರ 'ಜಾದೂಗಾರನ ಜರ್ನಿ' ವಿಮರ್ಶೆ ಸಭೆ

ಉಡುಪಿ:  ಇಲ್ಲಿನ ರಂಗಭೂಷಣ ಸಂಸ್ಥೆ ವತಿಯಿಂದ 'ಜಾದೂಗಾರನ ಜರ್ನಿ' ಒಂದು ಇಣುಕು ನೋಟ ಎಂಬ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜಾದೂಗಾರ ಓಂ ಗಣೇಶ್ ಅವರ ಕೃತಿಯ ವಿಮರ್ಶೆ ನಡೆಯಿತು.
      ಒಳಕಾಡು ರಂಗನಾಥ ಶೆಣೈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರವಾಸಿಗ ಮಗು ಹೃದಯದವನಾಗಿರಬೇಕು. ಜತೆಗೆ ಕುತೂಹಲ ಸ್ವಭಾವದವನಾಗಿದ್ದರೆ ಮಾತ್ರ ಒಬ್ಬ ಸೃಜನಶೀಲ ಪ್ರವಾಸ ಕಥನವನ್ನು ಬರೆಯಲು ಸಾಧ್ಯ ಎಂದು ಹೇಳಿದರು. 
      ಹಿರಿಯ ನ್ಯಾಯವಾದಿ  ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ಬದುಕಿನ ಸೂಕ್ಷ್ಮ ಸಂವೇದನೆಗಳಿಗೆ ಹೊಸ ಅರ್ಥವನ್ನು ಹುಡುಕುವ ಓಂ ಗಣೇಶರ ಪ್ರವಾಸಿ ಮನಸ್ಸು ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು. 
       ಮುಖ್ಯ ವಿಮರ್ಶಕ ಮುರಳೀಧರ ಉಪಾಧ್ಯಾಯ ಹಿರಿಯಡಕ, ಅಂತಾ ರಾಷ್ಟ್ರೀಯ ಜಾದೂಗಾರ ಪ್ರೊ. ಶಂಕರ್ 
ನಿರ್ದೇಶಕರಾದ ಯು. ವಸಂತ್ ರಾವ್ ಮತ್ತು ಕೆ. ಜನಾರ್ದನ್ ಕಾಮತ್ ಲೇಖಕ ಓಂ ಗಣೇಶ್ ಉಪಸ್ಥಿತರಿದ್ದರು. ನಿರ್ದೇಶಕ ರಾಘವೇಂದ್ರ ಕಿಣಿ ಕಡಿಯಾಳಿ ಕಾರ್ಯಕ್ರಮ ನಿರೂಪಿಸಿದರು. ವಕೀಲ ಲಕ್ಷ್ಮಣ್ ಆರ್. ಶೆಣೆ ಸ್ವಾಗತಿಸಿದರು. ಆಡಳಿತ ನಿದೇಶಕ ಶಶಿ ಭೂಷಣ ಕಿಣೀ ತೋನ್ಸೆ ವಂದಿಸಿದರು.