ಸಮುದಾಯ ಕುಂದಾಪುರ


   ಸಮುದಾಯ-ಸಾಸ್ಕೃತಿಕ ಸಂಘಟನೆ
  ನರ ದನಿಯನ್ನು ಹತ್ತಿಕ್ಕುವ ಪ್ರಭುತ್ವದ ಧೋರಣೆಯನ್ನು ಸಾಂಸ್ಕೃತಿಕವಾಗಿ ಪ್ರತಿಕ್ರಿಯಿಸುವ ನಿಟ್ಟಿನಿಂದ ಎಂಬತ್ತರ ದಶಕದಲ್ಲಿ ಜನರ ನಡುವಿನಿಂದ ಹುಟ್ಟಿಕೊಂಡ ಸಂಘಟನೆ ಸಮುದಾಯ. ರಂಗನಾಟಕಗಳು, ಬೀದಿನಾಟಕಗಳು, ಭಿತ್ತಿಚಿತ್ರಗಳು ಮುಂತಾದ ಪ್ರದರ್ಶನ ಕಲೆಗಳ ಮೂಲಕವೇ ಜನರಿಗೆ ದನಿ ನೀಡುತ್ತಿದೆ. `ಕಲೆ ಕಲೆಗಾಗಿ' ಎಂಬ ಧೋರಣೆಯನ್ನು ನಿರಾಕರಿಸುತ್ತಾ ಈವತ್ತಿಗೂ ಪ್ರಸ್ತುತವಾಗಿ ನಮ್ಮ ನಡುವಿದೆ.`ಕಲೆ ಜನರಿಗಾಗಿ' ಎಂಬ ತನ್ನ ಸಿದ್ಧಾಂತವನ್ನು ಆಗಿನಷ್ಟೇ ಈಗಲೂ ಅಪ್ಪಿಕೊಂಡು ಜನರ ಧ್ವನಿಯಾಗಿ ಮುಂದುವರಿಯುತ್ತಿದೆ.
ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ಜನರ ನಡುವಿನಿಂದ ಎಂದು ಹೇಳುತೇವೆ ನಾವು
ಮತ್ತೆ ಪಯಣ ಎಲ್ಲಿಗೆಂದು ಕೇಳಬಹುದು ನೀವು
ತಿರುಗಿ ಮತ್ತೆ ಜನರ ನಡುವೆ ಹೋಗುತೇವೆ ನಾವು

     ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ರಂಗ ತಂಡವಾಗಿ ಆರಂಭಗೊಂಡ ಸಮುದಾಯ `ಕಲೆ ಕಲೆಗಾಗಿ ಅಲ್ಲ, ಜನತೆಗಾಗಿ ಕಲೆ’ ಎಂಬ ಧ್ಯೇಯದೊಂದಿಗೆ ಜನತೆಯ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಬೀದಿ ನಾಟಕ, ಜಾಥಾ ಗಳನ್ನು ಮಾಡುತ್ತಾ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸಿಕೊಂಡಿದೆ. 
      ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ, ರೈತನತ್ತ ಸಮುದಾಯದ ಜಾಥಾ, ಅಣುಸಮರ ವಿರೋಧಿ ಬಣ್ಣದ ಜಾಥಾ, ಭೀಕರ ಬರದ ಎದುರು ಸಮುದಾಯದ ಜಾಥಾ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದ ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಕಳೆದ ವರ್ಷ `ಕುಲಂ’ ನಾಟಕದ ಮೂಲಕ ಜಾತಿಯ ಪ್ರಶ್ನೆಯನ್ನು ಯುದ್ಧ ಮತ್ತು ಅಶಾಂತಿಯ ಪ್ರಶ್ನೆಯಾಗಿ ಕೆದುಕಿತು. ಈ ವರ್ಷ ಅತ್ಯಂತ ಚರ್ಚೆಗೊಳಗಾದ ಈ ನೆಲದ ನಾಯಕ ಟಿಪ್ಪುವನ್ನು ಜನತೆಗೆ ಮರುಪರಿಚಯಿಸುವ ಪ್ರಯತ್ನವಾಗಿ ಎಚ್ ಎಸ್ ಶಿವಪ್ರಕಾಶರ `ಸುಲ್ತಾನ್ ಟಿಪ್ಪು’ವನ್ನು ಯುವ ನಿರ್ದೇಶಕ ವಾಸುದೇವ ಗಂಗೇರರ ಸಾರಥ್ಯದಲ್ಲಿ ರಂಗಕ್ಕೆ ತಂದಿದೆ.

ಸಂಪರ್ಕ:
ಸಮುದಾಯ ಕುಂದಾಪುರ
ಕುಂದೇಶ್ವರ ದೇವಾಲಯದ ಎದುರು
ಮುಖ್ಯ ರಸ್ತೆ,ಕುಂದಾಪುರ,ಉಡುಪಿ ಜಿಲ್ಲೆ- 576201
ಪೋನ್: ಉದಯ ಗಾಂವಕಾರ 9481509699(ಅಧ್ಯಕ್ಷರು)