ಉಡುಪಿ ಜಿಲ್ಲೆಯಲ್ಲೇ ಪ್ರಸಿದ್ದವಾದ ವಂಡಾರು ಕಂಬಳ ಇಲ್ಲಿನ ಸುಮಾರು 5 ಎಕ್ರೆಗೂ ಜಾಸ್ಥಿ ವಿಸ್ತೀರ್ಣದ ಕಂಬಳ ಗದ್ದೆಯಲ್ಲಿ ನಡೇಯುವ ಕಂಬಳ ಜನರ ಬಾಯಲ್ಲಿ ಮನೆ ಮಾತಗಿದ್ದು ಕಂಬಳಕ್ಕೆ ಬಹಳ ವರ್ಷದ ಇತಿಹಾಸವೂ ಇದೆ. ಬಹಳ ಹಿಂದೆ ಪಾಂಡವರು ಈ ಕಂಬಳ ಗದ್ದೆ ಹಾಗೂ ಕುಂದಾಪುರ ಕೋಟೆಶ್ವರದ ಕೋಟಿತೀರ್ಥ ಪುಷ್ಖರಣಿಯನ್ನು ಒಂದೇ ರಾತ್ರಿ ನಿರ್ಮಿಸಿದ್ದರು. ಅಂದು ರಾತ್ರಿ ತಿನ್ನುವ ಸಲುವಾಗಿ ಹಲಸಿನ ಹಣ್ಣನ್ನು ಸಿಗಿಯಲು ಹೋದ ಸಂದರ್ಭದಲ್ಲಿ ಕೋಳಿ ಕೂಗಿ ಬೆಳಕಾಗುತ್ತಾ ಬಂತು ಅಲ್ಲಿಗೆ ಗದ್ದೆ ನಿರ್ಮಾಣ ನಿಲ್ಲಿಸಿದರು.
ಅದಕ್ಕೆ ಪುಷ್ಟಿ ನೀಡುವಂತೆ ಈ ಗದ್ದೆ ಸಮೀಪದಲ್ಲೇ ಅರ್ದ ಸಿಗಿದ ಹಲಸಿನ ಹಣ್ಣಿನ ಆಕ್ರತಿಯ ಕಲ್ಲಿನ ಪ್ರತಿಮೆ ಇದ್ದು ಅದನ್ನು ಪಾಂಡವರ ಕಲ್ಲೆಂದು ಕರೆಯುವ ಜನರು ಇಗಲೂ ಅದಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಕೋಡಿ ಹಬ್ಬದ ದಿನ ವಂಡಾರು ಕಂಬಳ ಗದ್ದೆಯಲ್ಲಿ ದೂಳು ಏಳುತ್ತದೆ ಮತ್ತು ವಂಡಾರು ಕಂಬಳದ ದಿನ ಕೋಟೇಶ್ವರ ಕೋಟಿತೀರ್ಥ ಕೆರೆಯಲ್ಲಿ ಕೆಸರು ಏಳುತ್ತದೆ ಎನ್ನುವ ಮಾತೂ ಇದೆ.

ದೈವದ ನಂಬಿಕೆಯ ಮೂಲಕ ಜಾನುವಾರುಗಳಿಗೆ ಯಾವುದೇ ಕೊರತೆಯಾಗದಿರಲಿ, ಅವುಗಳು ಅಭಿವ್ರದ್ಧಿ ಹೊಂದಲಿ ಎನ್ನುವ ಆಶಯದೊಂದಿಗೆ ಹರಕೆ ರೂಪದಲ್ಲಿ ನಡೆಸಲಾಗುವ ಕ್ರೀಡೆ. ಧಾರ್ಮಿಕ ಕಟ್ಟುಕಟ್ಟಳೆ ಮುಖಾಂತರ ನಡೆಯುವ ಕಂಬಳ ಮನೋರಂಜನೆಯೊಂದಿಗೆ ಗ್ರಾಮೀಣ ಸೊಗಡನ್ನು ಸಾರುತ್ತದೆ.
ಈ ಬಾರಿಯ ವಂಡಾರು ಕಂಬಳ ಸಂಭ್ರಮ ಸಡಗರದಿಂದ ಜರುಗಿತು. 150ಕ್ಕೂ ಹೆಚ್ಚು ಜೋಡಿ ಕೋಣಗಳ ಓಟ ನೆರೆದ ಸಾವಿರಾರು ಜನರನ್ನು ರಂಜಿಸಿತು.