ಸಹಕಾರಿ ಸಂಘಗಳು ಸಮಾಜದ ಅಭಿವೃದ್ಧಿಗೆ ಪೂರಕ: ಶಾಸಕ ಕೆ. ಲಕ್ಷ್ಮೀನಾರಾಯಣ

ಕುಂದಾಪುರ: ಬೈಂದೂರಿನಲ್ಲಿ ಶ್ರೀ ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘ  ಉದ್ಘಾಟನೆಗೊಂಡಿತು. ನೂತನ ಕಛೇರಿಯನ್ನು  ಉದ್ಘಾಟಿಸಿ ಮಾತನಾಡಿದ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಸಹಕಾರಿ ಸಂಘಗಳು ತಮ್ಮ ಗ್ರಾಹಕರಿಗೆ ಶೀಘ್ರ ಸಾಲ ಸೌಲಭ್ಯ ನೀಡುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಠೇವಣೆದಾರರು ತಮ್ಮ ಠೇವಣೆಯನ್ನು ಸಹಕಾರಿ ಸಂಘಗಳಲ್ಲಿ ಹೆಚ್ಚು ಹೆಚ್ಚು ಇರಿಸಿದಾಗ, ಸಹಕಾರಿ ಸಂಘಗಳು ಸುಲಭ ಬಡ್ಡಿದರದಲ್ಲಿ ಗ್ರಾಹಕರಿಗೆ ಶೀಘ್ರ ಸಾಲ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಸಂಘಗಳು ಗ್ರಾಹಕರನ್ನು ಸತಾಯಿಸುವ ಮನೋಭಾವವನ್ನು ಬೆಳೆಸಿಕೊಳ್ಳದೆ, ಸಮಾಜದಲ್ಲಿರುವ ಸಾಮಾನ್ಯ ಜನರಿಗೂ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಂದರು.
     ತಲ್ಲೂರು ಶ್ರೀ ಕಾಳಿಕಾಂಬ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಆಚಾರ್ಯ ಬಡಾಕೆರೆ ಅಧ್ಯಕ್ಷತೆ ವಹಿಸಿದ್ದರು.
     ಅವಿಭಜಿತ ದಕ್ಷಿಣ ಕನ್ನಡ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಯು.ಕೆ. ಎಸ್. ಸೀತಾರಾಮ ಆಚಾರ್ಯ, ಶ್ರೀ ಕಾಳಿಕಾಂಬ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಜನಾರ್ಧನ ಆಚಾರ್ಯ ಬೈಂದೂರು, ಯಡ್ತರೆ ಗ್ರಾ.ಪಂ. ಅಧ್ಯಕ್ಷೆ ರಾಧಾ ಪೂಜಾರಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಸೀನಿಯರ್ ಮ್ಯಾನೇಜರ್ ರಘುರಾಮ ಆಚಾರ್ಯ ಕಲ್ಸಂಕ, ಬೈಂದೂರು ಟೆಂಪೋ, ರಿಕ್ಷಾ, ಟ್ಯಾಕ್ಷಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಬಟವಾಡಿ ಪಡುವರಿ, ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಮೋಕ್ತೇಸರ ನಾರಾಯಣ ಆಚಾರ್ಯ ಕುಂದಾಪುರ, ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ೩ನೇ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ ಉಪಸ್ಥಿತರಿದ್ದರು.
ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಸ್ಥಾನ ಮೊಕ್ತೇಸರ ಸುಧಾಕರ ಆಚಾರ್ಯ ತ್ರಾಸಿ ಶುಭಾಸಂಶನೆಗೈದರು, ನಾರಾಯಣ ಆಚಾರ್ಯ ಮಾವುಡ ಸ್ವಾಗತಿಸಿ, ಶ್ರೀಕಾಂತ ಆಚಾರ್ಯ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿ, ನಾಗರಾಜ ಆಚಾರ್ಯ ಬಿಜೂರು ವಂದಿಸಿದರು.