ಯಾಕೂಬ್ ಖಾದರ್ ಗುಲ್ವಾಡಿಗೆ ಅಂತರಾಷ್ಟೀಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಪ್ರಶಸ್ತಿ

ಕುಂದಾಪುರ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ, ಸಾಮಾಜಿಕ ಕಾರ್ಯಕರ್ತ, ಜನಪದ ವಸ್ತುಗಳ ಸಂಗ್ರಹಕರ ಹಾಗೂ ಬ್ಯಾರಿ ಅಕಾಡೆಮಿಯ ತ್ರೈಮಸಿಕ ಪತ್ರಿಕೆ ಬೆಲ್ಯಿರಿಯ ಸಂಪಾದಕ ಯಾಕೂಬ್ ಖಾದರ್ ಗುಲ್ವಾಡಿಯವರ ಸಮಾಜ ಸೇವಾ ಕ್ಷೇತ್ರದ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಘ ಅಬುದಾಬಿ ಹಾಗೂ ಹೃದಯವಾಹಿನಿ ಪತ್ರಿಕೆ ಮಂಗಳೂರು ಕೊಡಮಾಡುವ ಪ್ರತಿಷ್ಠಿತ ಅಂತರಾಷ್ಟೀಯ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯನ್ನು ಅಬುದಾಬಿ ಇಂಡಿಯನ್ ಸ್ಕೂಲ್ ಶೆಖ್ ಜಾಯೆದ್ ಸಂಭಾಂಗಣದಲ್ಲಿ ಡಿ. 14, 15 ರಂದು ಕರ್ನಾಟಕದ  ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಧಾನ ಮಾಡಲಿದ್ದಾರೆ. ಸಮರಂಭದಲ್ಲಿ ಭಾರತ ಸರಕಾರದ ಸ್ಥಳಿಯ ರಾಯಭಾರಿ ರಮೇಶ, ಅಬುದಾಬಿಯ ನ್ಯೂ ಮೆಡಿಕಲ್ ಸೆಂಟರ್ ಅಧ್ಯಕ್ಷ ಬಿ. ಆರ್ ಶೆಟ್ಟಿ, ಹೃದಯವಾಹಿನಿ ಬಳಗದ ಮಂಜುನಾಥ ಸಾಗರ್, ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸವೋತ್ತಮ ಶೆಟ್ಟಿ, ನಿವೃತ್ತ ಭಾರತ ಸರಕಾರದ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಖಾಧಿಕಾರಿ ಜಯಪ್ರಕಾಶ್ ರಾವ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಸಮಾರಂಭದ ಅಧ್ಯಕ್ಷ ಸಾಹಿತಿ ಮಲ್ಲೆಪುರ ಜಿ. ವೆಂಕಟೇಶ್ ಉಪಸ್ಥಿತರಿರುವರು.