7 ದಿನದ ಹೆಣ್ಣು ಶಿಶುಗೆ ಕೆದೂರಿನ ಸ್ಪೂರ್ತಿಧಾಮ ಆಸರೆ

ಕುಂದಾಪುರ : ಉಡುಪಿ ಗಾರ್ಡ್ ಸಂಸ್ಥೆಯ ಕಛೇರಿ ಮುಂದೆ ಅನಾಥವಾಗಿ ಬಿದ್ದಿದ್ದ ಸುಮಾರು 7 ದಿನದ ಹೆಣ್ಣು ಶಿಶುವನ್ನು ಕೆದೂರಿನ ಸ್ಪೂರ್ತಿಧಾಮದಲ್ಲಿ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಬುಧವಾರ ನಡೆದಿದೆ.

        ಬೆಳಿಗ್ಗೆ ಕಛೇರಿ ಸಿಬ್ಬಂದಿ ಬಾಗಿಲು ತೆರೆಯಲು ಆಗಮಿಸಿದಾಗ ಬಾಗಿಲ ಬಳಿ ಅನಾಥವಾಗಿ ಮಲಗಿದ್ದ ಹಸುಗೂಸು ದೊರೆತಿದ್ದು ಮಗುವಿಗೆ ಆರೈಕೆ ನೀಡಿ ಅದರ ಪೋಷಕರ ಆಗಮನಕ್ಕಾಗಿ ಸಂಜೆ ಸುಮಾರು 4.30ರವರೆಗೂ ಕಾದರೂ ಯಾವುದೇ ಪ್ರಯೋಜನವಾಗಲಿಲ್ಲ.
         ಬಳಿಕ ಕೆದೂರು ಸ್ಪೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಅವರನ್ನು ಸಂಪರ್ಕಿಸಿ ಸ್ಪೂರ್ತಿ ಸಂಸ್ಥೆಗೆ ದಾಖಲಿಸಿದರು. ಸದ್ಯ ಶಿಶು ಸಂಸ್ಥೆಯಲ್ಲಿ ಆರೋಗ್ಯದಿಂದ ಆಶ್ರಯಸಿದ್ದು ಶಿಶುವಿಗೆ ಸಂಬಂಧಪಟ್ಟವರು ಸ್ಪೂರ್ತಿ ಸಂಸ್ಥೆ ದೂರವಾಣಿ ಸಂಖ್ಯೆ : 9845370674 ಇವರನ್ನು ಸಂಪರ್ಕಿಸಲು ಕೋರಲಾಗಿದೆ.