ಕುಂದಾಪ್ರ ಡಾಟ್ ಕಾಂ ಕುರಿತು

         ಬದಲಾವಣೆ ಜಗದ ನಿಯಮ. ಕಾಲ ಬದಲಾದಂತೆ ಆಧುನಿಕತೆಯ ಹೊಸ ಹೊಸ ಆಯಾಮಗಳಿಗೆ ತೆರೆದುಕೊಳ್ಳುವುದು ಇಂದಿನ ಅನಿವಾರ್ಯತೆ. ಓದುಗನೊಬ್ಬ ಬಯಸಿದನ್ನು ಮಾತ್ರ ನೀಡುವುದಲ್ಲದೆ ಬರಹಗಾರ ಓದುಗರನ್ನು ತಲುಪಬೇಕಾದರೆ ನವ ನವೀನ ಹಾಗೂ ಸುಲಭದ ಮಾರ್ಗವನ್ನು ಕಂಡು ಕೊಳ್ಳಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಇದು ಬಹು ಮುಖ್ಯವಾಗಿ ತೋರುತ್ತಿದೆ. ಆ ದಿಸೆಯಲ್ಲಿ ಒಂದಿಷ್ಟು ಯೋಚಿಸಿ, ಯೋಜಿಸಿಯೇ ಅಂತರಜಾಲದ ಕದ ತಟ್ಟಿದ್ದು, ಮುಂದಿನದೇನಿದ್ದರೂ ಓದುಗ ಮಿತ್ರರಿಗೆ ಉತ್ಕಷ್ಟವಾದುದನ್ನು ನೀಡುವ ಪ್ರಯತ್ನ.

*************************************
       ಪತ್ರಿಕೋದ್ಯಮದಲ್ಲೊಂದು ಹೊಸ ಭಾಷ್ಯ ಬರೆಯುವುದರ ಜೊತೆಗೆ ಕುಂದಾಪುರದ ವೈಶಿಷ್ಟ್ಯತೆಯನ್ನು ಜಗಕ್ಕೆ ಸಾರುವ, ಕುಂದಾಪುರದ ಪರಿಸರದಿಂದ ದೂರ ಉಳಿದಿರುವವರಿಗೆ ಇಲ್ಲಿನ ಚಿತ್ರಣವನ್ನು ಕಟ್ಟಿಕೊಡುವ, ಕುಂದಾಪ್ರ ಕನ್ನಡದ ಧ್ವನಿಯಾಗುವ,  ಕನ್ನಡ ನಾಡು-ನುಡಿಗಾಗಿ ಶ್ರಮಿಸುವ, ಕನ್ನಡದ ಮನಸ್ಸುಗಳನ್ನು ಕಟ್ಟುವ, ಸಾಹಿತ್ಯ ಲೋಕದಲ್ಲೊಂದಿಷ್ಟು ಅಳಿಲು ಸೇವೆಗೈಯುವ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಇತರೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಕೆಲಸ ಕುಂದಾಪ್ರ ಡಾಟ್ ಕಾಂ ಮೂಲಕ ನಡೆಯಲಿದೆ.

       ನೆನಪಿರಲಿ, ಇದು ಒಂದು ದಿನ, ವಾರ ಅಥವಾ ವರುಷದಲ್ಲಿ ಮಾಡಿ ಮುಗಿಸಬಹುದಾದ ಕೆಲಸವಂತೂ ಅಲ್ಲವೇ ಅಲ್ಲ. ಇದು ನಿರಂತರವಾದ ಪ್ರಕ್ರಿಯೆ. ಕ್ರಮೇಣವಾಗಿ ಒಂದೊಂದೇ ಅಂಶಗಳನ್ನು ಕುಂದಾಪ್ರ ಡಾಟ್ ಕಾಂ ಒಳಗೊಳ್ಳಲಿದೆ. ಅಲ್ಲಿಯ ತನಕ ಕಾಯುವ, ಒಳಗೊಳ್ಳುವ, ಪ್ರತಿ ವಿಷಯವನ್ನು ಗಮನಿಸುವ, ಗುರುತಿಸಿ ವಿರ್ಮಶಿಸುವ ಕೆಲಸ ಮಾತ್ರ ತಮ್ಮಿಂದ ನಡೆಯುತ್ತಿರಲಿ.
   
   ಅಂದ ಹಾಗೆ ಕುಂದಾಪ್ರ ಡಾಟ್ ಕಾಂ ಕೇವಲ ಕುಂದಾಪುರಕ್ಕಷ್ಟೇ ಸೀಮಿತವಾದದ್ದು ಎಂದು ತಿಳಿಯಬೇಕಾಗಿಲ್ಲ. ಪತ್ರಿಕೆಗಳಂತೆ ಇದಕ್ಕೆ ಸೀಮಿತ ವ್ಯಾಪ್ತಿಯನ್ನು ನಿರ್ಧರಿಸುವುದು ಸಮಂಜಸವೆನಿಸುವುದಿಲ್ಲ. ಕನ್ನಡ ಈ ಪೋಟರ್ಲ್ ಸಹಜವಾಗಿ ಭಾಷಾ ಕೊಳ್ಳು-ಕೊಡುಗೆಯನ್ನು ಒಳಗೊಂಡು ಪ್ರಾಂತ್ಯದ ಗಡಿ ಮಿರಿ ಮುಂದುವರಿಯುತ್ತದೆ. ಒಂದು ಸುದ್ದಿಯಾಗಿರಲಿ, ವರದಿ, ಲೇಖನವಾಗಿರಲಿ ಅದು ಸಮಾಜಮುಖಿಯಾಗಿದ್ದರೆ, ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗುವುದಾದರೇ ಅದು ಎಲ್ಲಿಯದೇ ವಿಚಾರವಾಗಿರಲಿ ಇಲ್ಲಿ ಪ್ರಕಟಗೊಳ್ಳುತ್ತದೆ.

     ಆಗಾಗ ಕಾಣಿಸಿಕೊಳ್ಳುವ ಅಕ್ಷರ ದೋಷ, ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಮೀರಿ ಕುಂದಾಪ್ರ ಡಾಟ್ ಕಾಂ ನಿಮಗೆ ಹಿಡಿಸಬಹುದು! ನಿಮ್ಮ ಸಲಹೆ, ಸೂಚನೆ, ಸಹಕಾರ ಸದಾ ಇರಲಿ.

ಫೆಸ್ ಬುಕ್ ನಲ್ಲಿ ಕುಂದಾಪ್ರ ಡಾಟ್ ಕಾಂ                                                                      
ಟ್ಟಿಟರ್ ನಲ್ಲಿ ಕುಂದಾಪ್ರ ಡಾಟ್ ಕಾಂ