ಅನುಭವ ಕಥನ: ಮೂಡುಬಗೆಯ ವಾಗ್ಜೋತಿಗೆ ಭೇಟಿ ಕೊಟ್ಟಾಗ...


         ಅಂದು ಭಂಡಾರ್ಕಾರ್ಸ್ ಕಾಲೇಜಿನ ಮನಶಾಸ್ತ್ರ ವಿಭಾಗದಿಂದ ಮೂಡುಬಗೆಯಲ್ಲಿರುವ ವಾಗ್ಜೋತಿ ಶ್ರವಣದೋಷ ಹಾಗೂ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಭೇಟಿ ನೀಡಿದಾಗ ನಮಗಾದ ಅನುಭವ ಮರೆಯಲಸಾಧ್ಯ. ವಾಗ್ಜೋತಿಗೆ ಭೇಟಿ ಕೊಟ್ಟಾಗ ಮೊದಲು ಕಂಡು ಬಂದದ್ದ ಏನು ತಿಳಿಯದ ಮುಗ್ಧ ಮಕ್ಕಳಿಗೆ ಆಟವಾಡಲು, ಮನಸ್ಸು ಉಲ್ಸಾಸಿತಗೊಳಿಸಲು ಇರುವ ಸೌಕರ್ಯಗಳು, ಅವುಗಳನ್ನು ನೋಡಿಯೇ ತಿಳಿಯಿತು. ಈ ವಿಶೇಷ ಮಕ್ಕಳು ವಾಗ್ಜೋತಿಗೆ ಬಂದ ಭಾಗ್ಯವಂತರೆಂದು.
       ಆ ವಿಶೇಷ ಮಕ್ಕಳೊಂದಿಗೆ ಮೊದಮೊದಲು ಬೆರೆಯಲು ಮುಜುಗರ, ಭಯವಾದರೂ ಕೂಡ, ಆ ಮಕ್ಕಳ ಹಾವ ಭಾವ, ಕರುಣೆ ಹುಟ್ಟಿಸುವಂತಹ ಮುಗ್ಧತೆ, ಕರುಣೆ ಹುಟ್ಟಿಸುವಂತಹ ಮುದ್ದಾದ ಮುಖಗಳು ನಮ್ಮ ಮನಸ್ಸನ್ನು ಕರಗಿಸಿದ್ದವು. ಕ್ರಮೇಣ ಆ ವಿದ್ಯಾರ್ಥಿಗಳೊಂದಿಗೆ ಬೆರೆತಾಗ ನಮಗೆ ಅವರ ಬಗೆಗೆದ್ದ ಅಪಪ್ರಥೆ ದೂರವಾಯಿತು. ಕಿವಿ ಮತ್ತು ಮಾತಿನ ಅಸಮರ್ಥತನವೇ ಇವರನ್ನು ಇತರ ಮಕ್ಕಳಿಗಿಂತ ಭಿನ್ನವಾಗಿಸಿದೆ ಎನ್ನುವುದರಲ್ಲಿ ನಮಗೆ ಯಾವುದೇ ಸಂದೇಹ ಕಂಡು ಬರಲಿಲ್ಲ. ಆ ಮಕ್ಕಳು ಯಾವುದೇ ಮುಜುಗರ, ಭಯವಿಲ್ಲದೆ ನಮ್ಮೊಂದಿಗೆ ಬೆರೆಯಲು ಪ್ರಯತ್ನಿಸಿದವು. ಅದ್ರ್ಂತೆಯೇ ಅವರವರ ಹೆಸರುಗಳನ್ನು ಪುಸ್ತಕದಲ್ಲಿ ಬರೆದು ಪರಿಚಯಿಸಿಕೊಂಡರು.
     ನಮ್ಮಂತ ಸಾಮಾನ್ಯರು ಆ ವಿಶೇಷ ಮಕ್ಕಳನ್ನು ನೇರವಾಗಿ ನೋಡಿದಾಗ ಏನು ತಿಳಿಯದ, ಪ್ರಯೋಜನವಿಲ್ಲದ ಮಕ್ಕಳೆಂದು ಭಾವಿಸುವುದು ಸಹಜ. ಆದರೆ ನಮ್ಮ ಆ ಊಹೆ ತಪ್ಪು. ಏಕೆಂದರೆ ಅವರಿಗೆ ಅವರದೇೆ ಭಾಷೆ ಇದೆ. ಅದು ಅವರಿಗೆ ಅವರ ಅಧ್ಯಾಪಕರಿಗೆ ಅಷ್ಟೇ ಅರ್ಥವಾಗುತ್ತದೆ. ಅದು ನಮ್ಮಂತ ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ ಸಾಧ್ಯ. ಆ ಮಕ್ಕಳು  ಬುದ್ಧಿಮತ್ತೆಯಲ್ಲಿ ನ್ಯೂನ್ಯತೆ ಹೊಂದಿದ್ದರೂ ಕೂಡ, ತಮ್ಮಲಿರುವ ಊನವನ್ನು ಮರೆಮಾಚಲು ವಿಶೇಷ ಪ್ರತಿಭೆಗಳಿಂದ ಅಂದರೆ ಅವರಿಂದಲೇ ತಯಾರಿಸಲ್ಪಟ್ಟ ಗ್ರೀಟಿಂಗ್ಸ್ ಕಾರ್ಡಗಳು, ಪುಷ್ಪಗುಚ್ಛಗಳು, ಕಾರ್ಟೂನ್ಸ್ಗಳಿಂದಲೇ ನೋಡುಗರ ಆರ್ಕಷಣೆಯನ್ನು ತಮ್ಮೆಡೆಗೆ ಸೆಳೆದು ಕೊಳ್ಳುತ್ತಾರೆ. ಅವರೇ ನಿಮರ್ಮಿಸಿದ ವರ್ಣ ನಿಮರ್ಮಿತ ಚಿತ್ರಗಳಲ್ಲಿ ಎಲ್ಲಾ ಮಕ್ಕಳು ತಮ್ಮದೆ ಆದ ಛಾಪವನ್ನು ಮೂಡಿಸಿದ್ದಾರೆ.
      ಅಲ್ಲಿನ ಶಿಕ್ಷಕರ ಪಾತ್ರ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಬಹುಮುಖ್ಯವಾದುದು. ಅವರಿಗೆ ತಾಳ್ಮೆಯೇ ಔಷಧ. ತಾಳಿದವನು ಬಾಳಿಯಾನು ಎಂಬ ಮಾತು ಅಲ್ಲಿನ ಶಿಕ್ಷಕ ಸಿಬ್ಬಂದಿಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದರೆ ತಪ್ಪಲ್ಲ. ವಿಶೇಷ ಮಕ್ಕಳನ್ನು ನೋಡಿಕೊಳ್ಳುವಲ್ಲಿ ವಿದೇಶಿಯರೂ ಕೈ ಜೋಡಿಸಿದ್ದಾರೆ. ಅಲ್ಲದೆ ಆ ಮಕ್ಕಳ ಜೊತೆ ಆತ್ಮೀಯತೆಯಿಂದ ಕಾಲ ಕಳೆಯಲು ಮುಖ್ಯೋಪಾಧ್ಯಾಯರ ಅನುಮತಿಯೋಂದಿಗೆ ಯಾರೂ ಕೂಡ ಬರಬಹುದು. ಇಲ್ಲಿನ ವಿಶೇಷ ಮಕ್ಕಳಿಗೆ ಖಠಿಜಜಛಿ ಖಿಡಿಚಿಟಿಟಿರ ಹಾಗೂ ಉಡಿಠಣಠಿ ಊಜಚಿಡಿಟಿರ ಂಜ  ಮೂಲಕ ತುಟಿ ಚಲನೆ (ಐಠಿ ಒಠತಜಟಜಟಿಣ), ಕೈ ಬೆರಳುಗಳ ವಿನ್ಯಾಸದ ಮೂಲಕ ಮಕ್ಕಳು ಪಾಠ ಪ್ರವಚನಗಳಲ್ಲಿ ತೊಡಗುವಂತೆ ಮಾಡುತ್ತಾರೆ. ನಾವು ವಾಗ್ಜೋತಿಗೆ ಭೇಟಿ ನೀಡಿದ್ದರ ಪ್ರಮುಖ ಉದ್ದೇಶ ಮಕ್ಕಳ ಬುದ್ಧಿಮತ್ತೆಯನ್ನು ಪರೀಕ್ಷಿಸುವುದಾಗಿತ್ತು. ಅದರಂತೆಯೇ ನಾವು ಮಕ್ಕಳಿಗೆ ನೀಡಿದ ಪರೀಕ್ಷೆಗಳೆಂದರೆ 1 Coloured Progressive Matrices 2) Developmental Screening  Test 3) Seguine farm Board Test.  ಈ ಪರೀಕ್ಷೆಗಳ ಮೂಲಕ ಅವರಲ್ಲಿರುವ ಬುದ್ಧಿಶಕ್ತಿ (Intelligent Quotient), ಗ್ರಹಿಸುವ ಶಕ್ತಿ (Grasping Power), ಅಲೋಚನಾ ಶಕ್ತಿ (Thinking Capacity), ಪ್ರತ್ಯಕ್ಷ ಅನುಭವ (Perception), ಅವಧಾನ (Attention), ಎಕಾಗ್ರತೆ ಮಟ್ಟ (Concentration level) ಇತ್ಯಾದಿಗಳನ್ನು ಅಳೆಯಲಾಯಿತು.

     ಈ ವಾಗ್ಜೋತಿ ಕಿವುಡು ಮತ್ತು ಬುದ್ಧಿಮಾಂದ್ಯ ಶಾಲೆಯನ್ನು ಹಲವು ವರ್ಷಗಳಿಂದ ಜಿ. ಶಂಕರ್ ನಡೆಸಿಕೊಂಡು ಬಂದಿರುವುದು ಶ್ಲಾಘನೀಯವೇ ಸರಿ. ಅವರಂತೆ ಸಮಾಜದ ಎಲ್ಲಾ ದಾನಿಗಳು, ಜನಪ್ರತಿನಿಧಿಗಳು ಇಂತಹ ಮಕ್ಕಳಿಗೆ, ಸಂಸ್ಥೆಗೆ ಸಹಾಯ ನೀಡಲು ಮುಂದಾದರೆ, ಖಂಡಿತ ಇಂತಹ ಮಕ್ಕಳನ್ನು ಆಧುನಿಕ ಸಾಧನ ಸೌಲಭ್ಯಗಳನ್ನು ಬಳಸಿ ತಕ್ಕ ಮಟ್ಟಿಗೆ ಶಿಕ್ಷಿತರನ್ನಾಗಿಸಬಹುದು.
ಅಂದು ನಾನು ಆ ಮಕ್ಕಳೊಂದಿಗೆ ಬೆರೆತಾಗ ನನಗನ್ನಿಸಿದ್ದು, ಆ ಮಕ್ಕಳಿಗೆ ಬೇಕಾಗಿರುವುದು ಕೇವಲ ಮಮತೆ ಮತ್ತು ಲಕ್ಷ (ಐಠತಜ ಚಿಟಿಜ ಅಚಿಡಿಜ). ಆದರೆ ಹಲವರು ಅವರೊಂದಿಗೆ ಸಂವಹನ ಮಾಡಲು ಹಿಂಜರಿಯುವುದೇ ಹೆಚ್ಚು. ಇದು ಬದಲಾಗಬೇಕು. ಸಮಾಜದಲ್ಲಿ ಇಂತಹ ಮಕ್ಕಳಿಗೆ ಗೌರವ ಸಿಗಬೇಕು. ಅದೇನೇ ಇರಲಿ, ಈ ವಿಶೇಷ ಮಕ್ಕಳು ಅಧ್ಯಾಪಕರಿಗೆ, ಪಾಲಕರಿಗೆ ಹಾಗೂ ಸಮಾಜಕ್ಕೆ ಹೊರೆಯಲ್ಲ, ವಿಕಲಾಂಗತೆ ಶಾಪವಲ್ಲ ಎಂಬ ಮಾತನ್ನು ವಾಗ್ಜೋತಿ ವಿಶೇಷ ಶಾಲೆಯು ಅಲ್ಲಿನ ವಿಶೇಷ ಮಕ್ಕಳ ವಿವಿಧ ಪ್ರತಿಭೆಯ ಮೂಲಕ ತೋರುತ್ತದೆ.  

                                 ಲೇಖಕರು: ಚೈತ್ರ ಚಂದನ್ ಪಡುಕೋಣೆ