ವೆಂಕಟೇಶ ಕೋಣಿ-ಶೋಭಾ ದಂಪತಿಯಿಂದ ಮರಣೋತ್ತರ ದೇಹ ದಾನ


ಬೈಂದೂರು: ಇಲ್ಲಿನ ನಿವಾಸಿ, ಸಾಮಾಜಿಕ ಕಾರ್ಯಕರ್ತ ಕೋಣಿ ವೆಂಕಟೇಶ ನಾಯಕ್ ಮತ್ತು ಪತ್ನಿ ಶೋಭಾ ವಿ. ನಾಯಕ್ ದಂಪತಿಗಳು ತಮ್ಮ ದೇಹವನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಶರೀರ ಶಾಸ್ತ್ರ ವಿಭಾಗಕ್ಕೆ ಮರಣೋತ್ತರ ದೇಹದಾನ  ಮಾಡಿದ್ದಾರೆ.
     ಮರಣದ ನಂತರ ಈ ದೇಹಕ್ಕೆ ಮಾಡುವ ಧಾರ್ಮಿಕ ಕ್ರಿಯಾ ಕರ್ಮಕ್ಕಿಂತಲೂ ದೇಹದಾನದಿಂದ ಮಾನವ ಕೋಟಿಗೆ ಆಗುವ ಸಂಶೋಧನೆಯ ಲಾಭ ಅತಿ ಶ್ರೇಷ್ಠ ಎಂದು ಅರಿತು ದಂಪತಿಗಳು ತಮ್ಮ ದೇಹದಾನ ಮಾಡುವ ನಿರ್ಧಾರಕ್ಕೆ ಬಂದಿಂದ್ದಾರೆ. ವೆಂಕಟೇಶ ಕೋಣಿ  ಸಿಪಿಐ(ಎಂ) ಕಾರ್ಯಕರ್ತರಾಗಿದ್ದಾರೆ.
     ಮರಣೋತ್ತರ ದೇಹದಾನ  ಮಾಡುವ ಮೃತ್ಯು ಪತ್ರಕ್ಕೆ ಸಹಿ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮರಣೋತ್ತರ ದೇಹದಾನ ಮಾಡಿದ ವ್ಯಕ್ತಿ ಮರಣ ಹೊಂದಿದ 24 ತಾಸುಗಳ ಒಳಗಾಗಿ ಕುಟುಂಬಸ್ಥರು ಮಾಹಿತಿ ನೀಡಿದರೆ ಸ್ಥಳಕ್ಕೆ ಬಂದು ದೇಹವನ್ನು  ಕೊಂಡೊಯ್ಯುವ ಸಂಪೂರ್ಣ ಜವಾಬ್ದಾರಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನದ್ದಾಗಿರುತ್ತದೆ.

        ಮುಂದಿನ ಜನ್ಮ ಇದೆಯೋ ಇಲ್ಲವೋ ಎಂಬುವುದು ಯಾರಿಗೂ ಗೊತ್ತಿಲ್ಲ. ಧಾರ್ಮಿಕ ಆಚರಣೆಗಳು ಇಂದು ಅರ್ಥ ಕಳೆದುಕೊಳ್ಳುತ್ತಿದ್ದು ದೇಹ ಸುಡುವುದರಿಂದ ಮತ್ತು ಅನಂತರ ಕ್ರಿಯೆಯಿಂದ ಸ್ವರ್ಗ ಸಿಗುತ್ತದೆ ಎನ್ನುವುದರಲ್ಲಿ ನಮಗೆ ನಂಬಿಕೆ ಇಲ್ಲ. ಹೀಗಾಗಿ ಈ ದೇಹ ಯಾರಿಗಾದರೂ ಪ್ರಯೋಜನವಾಗಲಿ ಎಂದು ಎಂಬದು ನಮ್ಮ ಅಭಿಲಾಷೆ. ದೇಹದಾನ ಮಾಡುವುದರಿಂದ ಮೆಡಿಕಲ್ ಕಾಲೇಜಿನ ಇಡೀ ವಿದ್ಯಾರ್ಥಿ ಸಮೂಹಕ್ಕೆ ಪ್ರಯೋಜನವಾಗಲಿದೆ.
-ಕೋಣಿ ವೆಂಕಟೇಶ ನಾಯಕ್, ಶೋಭಾ ವಿ. ನಾಯಕ್ ದಂಪತಿ

ಹೆತ್ತವರ  ನಿರ್ಧಾರಕ್ಕೆ ನಮ್ಮ ಸಮ್ಮತಿಯೂ ಇದೆ. ಅದೊಂದು ಸಮಾಜ ಸೇವೆಯ ಕೆಲಸವಾಗಿರುವುದರಿಂದ ಅದಕ್ಕೆ ನಮ್ಮ ಸಹಮತವಿದೆ.
-ವೆಂಕಟೇಶ ಕೋಣಿ ಅವರ ಪುತ್ರ ಚೇತನ ವಿ. ನಾಯಕ್, ಪುತ್ರಿ ವರ್ಷಾ ವಿ. ನಾಯಕ್.