ಏನಾದರೂ ಆಗುವ ಮೊದಲು ಮಾನವರಾಗೋಣ

      ಅಂದು ಅಂದೆತಹ ಕಾಲವಿತ್ತು. ಪ್ರತಿಯೊಂದು ಮನದಲ್ಲೂ ವಸುದೈವ ಕುಟುಂಬಕಂ ಎಂಬ ಆಳಿಯದ ಧೋರಣಿಗಳು ಪರಸ್ವರ ಪ್ರೀತಿ, ವಿಶ್ವಾಸ, ಆತ್ಮೀಯತೆ, ಒಗ್ಗಟ್ಟು, ತಮ್ಮವರಿಗಾಗಿ ಹೋರಾಡುವ ಕಿಚ್ಚು ರಕ್ತದ ಕಣ ಕಣದಲ್ಲೂ ಸ್ವಾಭಿಮಾನ, ಸದ್ಭಾವನೆಯ ಹೂಗಳು ಹರಿದಾಡುತ್ತಿದ್ದವು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಘೋಷಣೆಗಳನ್ನು ಮಣ್ಣಿನ ಕಣಕಣಗಳೂ ಕೂಡಿ ಹೇಳುತ್ತಿದ್ದವನಬ-ನು. ಇದೇ ಅಲ್ಲವೇ ನಿಜವಾದ ಮಾನವೀಯ ಮೌಲ್ಯಗಳು? ಅಂದು ಗಾಂಧಿತಾತ ಕಂಡ ರಾಮ ರಾಜ್ಯದ ಕನಸು, ಬ್ರಹ್ಮನ ಸೃಷ್ಟಿಯ ನಿಜವಾದ ಅರ್ಥ.
      ಕ್ರಮೇಣ ಕಾಲಚಕ್ರದಲ್ಲಿ ಸಿಲುಕಿ ಬದಲಾದ ಸಮಾಜದಲ್ಲಿ ಇಂದು ಮಾನವನ ಜೀವನದ ಅರ್ಥಗಳು ಬದಲಾಗುತ್ತಿವೆ. ಅರ್ಥ ಬದಲಾದಂತೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಬದಲಾವಣೆಯಾ ಕಾರಣಗಳನ್ನು ಹುಡುಕುತ್ತಾ ಹೊರಟರೆ ಸಿಗುವ ಉತ್ತರ ಅನುಕರಣೆ. ಬೇಡದ ಅನುಕರಣೆಯನ್ನು ಆಧುನಿಕತೆಯಾ ನೆಪದಲ್ಲಿ ಮಾಡಿ, ಬೇಕಾಗುವ ಮೌಲ್ಯಗಳನ್ನು ಬೇಡವೆಂದು ತಿರಸ್ಕರಿಸಿ, ಕೊನೆಗೆ ಬೇಕು ಬೇಡಗಳ ಕುರಿತು ಚಿಂತಿಸುತ್ತಾ ಕೂರುವ ಮಾನವ ಇಂದು ಸಮಾಜದಲ್ಲಿ ಬೇಡವಾದ ವ್ಯಕ್ತಿಯಾಗಿದ್ದಾನೆ. ಇಂದಿನ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ, ಸಂಬಂಧಗಳೆಲ್ಲಾವೂ ಬೂಟಾಟಿಕೆಯ ಮಾತುಗಳಾಗಿ ಜನರ ಬಾಯಲ್ಲಿ ಹರಿದಾಡುತ್ತಿವೆಯೇ ಹೂರತೂ ವಾಸ್ತವದಲ್ಲಿ ಯಾವೊಬ್ಬ ವ್ಯಕ್ತಿಯೂ ಅಳವಡಿಸಿಕೊಂಡಿಲ್ಲ. ಪ್ರೀತಿ-ಸ್ನೇಹಗಳು ಮುರಿದು ಬಿತ್ತು ಎಂಬ ಕಾರಣಕ್ಕೆ ದೇಹಹತ್ಯೆ ಮಾಡಿಕೊಳ್ಳುವವರನ್ನು ನಾವು ನೋಡುತ್ತಿದ್ದೆವೆ. ಆದರೆ ನಿಜವಾದ ಪ್ರೇಮ ಸ್ನೇಹಗಳು ಮುರಿದು ಬೀಳುವುಹೇಗೆ? ತೋರ್ಪಡಿಕೆಯ ಸಂಬಂದಗಳಲ್ಲಿ ಮಾತ್ರ ಇದು ಸಾಧ್ಯವಷ್ಟೇ. ಸಮಾಜದಲ್ಲಿ ಇಂದು ಉಪಕಾರ ಪ್ರತಿ ಉಪಕಾರ ಎಂಬ ಮಾತುಗಳು ಕೇವಲ ಮರೇಚಿಕೆಯಾಗಿದೆ. ಪ್ರತಿನಿತ್ಯ ನಾವು ಕೇಳುತ್ತಿರುವುದು ಕೊಲೆ, ಸುಲಿಗೆ, ದರೋಡೆ, ವಂಚನೆ ಎಂಬ ಇತ್ಯಾದಿ ವಿಷಯಗಳೇ. ಇಂದು ಕ್ರೀಡೆ ಮುಂತಾದವುಗಳ ನೆಪದಲ್ಲಿ ದೇಶಗಳು ಮೇಲ್ನೋಟಕ್ಕೆ ಆತ್ಮೀತೆಯನ್ನು ತೋರ್ಪಡಿಸಿದರೂ ನಸುಕಿನಲ್ಲಿ ಗುದ್ದಾಡಿಕೊಳ್ಳುತ್ತಿವೆ. ಆಧುನಿಕ್ಪತೆಯ ನೆಪದಲ್ಲಿ ಮಾನವ ತನ್ನ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುದರಲ್ಲಿ ವಿಫಲನಾಗಿದ್ದಾನೆ. ಮಾನವೀಯ ಮೌಲ್ಯಗಳಿಗೆ ನೆಲೆಯಿಲ್ಲಂದತಾಗಿದೆ. ಹಾಗಾಗಿ ಸಮಾಜದಲ್ಲಿ ಅಸುನೀಗದ ಅಶಾಂತಿ ಎದ್ದು ತೋರುತ್ತಿದೆ.
     ಮಾನವೀಯತೆಯು ಮನುಷ್ಯನಿಂದ ಕಣ್ಮರೆಯಾದಂತೆಯೇ, ಮನುಷ್ಯನು ಭೂಮಿಯಿಂದ ಕಣ್ಮರೆಯಾಗಲೇ ಬೇಕಾಗುತ್ತವೆ. ಮಾನವ ತನ್ನ ಬದುಕಿನ ಉದ್ದೇಶ ಹಾಗೂ ಅರ್ಥಗಳನ್ನು ಅರಿತು, ಸಭ್ಯನಾಗದ ಹೂರತು, ಆದರ್ಶ ವ್ಯಕ್ತಿತ್ವವನ್ನು ತನ್ನಲ್ಲಿ ಅಳವಡಿಸಿಕೊಳ್ಳದ ಹೂರತು, ಆ ಅನುಕರಣೆಯಿಂದ ಒದಗಿಸಿದ ಅಹಂಕಾರವನ್ನು ಮೆಟ್ಟಿನಿಲ್ಲದ ಹೊರೆತು, ಈ ಪ್ರಕೃತಿ ಮಾತೆ ಅವನನ್ನು ತನ್ನ ಮಡಿಲಲ್ಲಿ ಆರೈಕೆ ಮಾಡಲಾರಳು. ನಾವುಗಳು ಏನಾದರೂ ಆಗುವ ಮೊದಲು ಮಾನವರಾಗಬೇಕಿದೆ. ಸಾಧಕರಾಗುವ ಮೊದಲು ಜೀವನದ ಉತ್ತರ ಕಂಡುಕೊಂಡು ತನ್ನ ವ್ಯಕ್ತಿತ್ವ ನಿರ್ಮಾಣದಲ್ಲಿ ತೊಡಗಿ ತನ್ನ ತನವನ್ನು ಯಾವ ಆಮಿಷಗಳಿಗೂ ಬಲಿಕೊಡದೆ ಬದುಕಬೇಕಾಗಿದೆ. ಹಾಗೆ ಬದುಕಿದವರೆ ಮಾತ್ರ ಈ ಬದುಕಿನಲ್ಲಿ ನಿಜವಾದ ಸಫಲತೆಯನ್ನು ಕಾಣಲು ಸಾಧ್ಯ ನಿಜಾರ್ಥದಲ್ಲಿ ಮಾನವರಾಗಲು ಸಾಧ್ಯ.


 ಬಿಂದುತುಂಗಾ
ತೃತೀಯ ಬಿ.ಕಾಂ.
ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ.

ಕುಂದಾಪ್ರ.ಕಾಂ- editor@kundapra.com