ಡಿಫರೆಂಟ್ ಪ್ರೇಮ ಪತ್ರ


ನನ್ನ ಪ್ರಿತಿಯ ಹುಡುಗಿ, ದಯವಿಟ್ಟು ನನ್ನ ಪ್ರಶ್ನಾವಳಿಗೆ ಉತ್ತರ ಕೊಡು.

1. ಕ್ಲಾಸ್ ರೂಮಿಗೆ ಎಂಟರ್ ಆಗುತ್ತಲೇ ನಿನ್ನ ಕಣ್ಣು ನನ್ನ ಮೇಲೆ ಬೀಳುತ್ತದೆ. ಯಾಕೆಂದರೆ,
ಎ. ಪ್ರೀತಿಯಿಂದ
ಬಿ. ನನ್ನ ನೋಡದಿರಲು ಸಾಧ್ಯವಾಗದೆ..
ಸಿ. ನಿಜಕ್ಕೂ...ನಾನು ಹಾಗೆ ಮಾಡ್ತೇನೆ..

2. ಪ್ರೊಫೆಸರ್ ಏನಾದರೂ ಜೋಕ್ ಮಾಡಿದ್ರೆ ನೀನು ನಗ್ತೀಯ ಹಾಗೆ ನನ್ನ ಕಡೆ ನೋಡ್ತಿಯ. ಯಾಕೆಂದರೆ...
ಎ. ನಾನು ನಗ್ತಾ ಇರೋದನ್ನು ನೋಡೋಕೆ ನಿಂಗಿಷ್ಟ.
ಬಿ. ನಂಗೆ ಜೋಕ್ ಇಷ್ಟಾನಾ ಅಂತ ಚೆಕ್ ಮಾಡೋಕೆ.
ಸಿ. ನನ್ನ ನಗು ನಿನ್ನನ್ನು ಆಕಷರ್ಿಸುತ್ತೆ.

3. ನೀನು ಕ್ಲಾಸಲ್ಲಿ ಹಾಡ್ತಾ ಇರ್ತಿಯಾ.. ನಾನೂ ಬಂದ ಕೂಡಲೇ ಸ್ಟಾಪ್ ಮಾಡ್ತಿಯಾ. ಯಾಕೆಂದರೆ,
ಎ. ನಿನಗೆ ನನ್ನ ಎದುರು ಹಾಡೋಕೆ ನಾಚಿಕೆ.
ಬಿ. ನನ್ನ ಉಪಸ್ಥಿತಿ ನಿನ್ನ ಮೇಲೆ ಪ್ರಭಾವ ಬೀರುತ್ತೆ.
ಸಿ. ನಂಗೆ ನಿನ್ನ ಹಾಡು ಇಷ್ಟ ಆಗುತ್ತೋ, ಇಲ್ವೋ ಅನ್ನೊ ಭಯ.

4. ನಿನ್ನ ಬಾಲ್ಯದ ಫೋಟೋವನ್ನು ನಾನು ಕೇಳಿದ್ರೆ ಕೊಡಲ್ಲ ಯಾಕೆಂದರೆ,
ಎ. ನಿನಗೆ ನಾಚಿಕೆ ಆಗುತ್ತೆ..
ಬಿ. ಎನೋ ಒಚಿಥರಾ ಅವಿಶ್ರಾಂತಿ ಆಗುತ್ತೆ..
ಸಿ. ಎನಾಗುತ್ತೆ ಅಂತ ಗೊತ್ತೇ ಇಲ್ಲ.

5. ನಾವು ಟ್ರೆಕಿಂಗ್ಗೆ ಹೋದಾಗ ಹತ್ತೋ ವೇಳೆ ನಾನೂ ನನ್ನ ಫ್ರೆಂಡ್ ಕೈ
ಚಾಚಿದರೆ ನೀನು ಅವನ ಕೈ ಹಿಡಿದೆ ಯಾಕೆಂದರೆ,
ಎ. ನನ್ನ ನಿರಾಸೆಯಲ್ಲಿ ನಿನಗೆ ಖುಷಿಯಾಗುತ್ತೆ,
ಬಿ. ಒಮ್ಮೆ ಕೈಹಿಡಿದರೆ ಬಿಡಲಾಗದು ಎಂಬ ಭಯ..
ಸಿ. ನಿನಗೆ ಗೊತ್ತಿಲ್ಲ.

6. ನಿನ್ನೆ ನೀನು ಬಸ್ಗೆ ವೈಟ್ ಮಾಡ್ತಿದ್ದೆ ಆದರೆ, ಬಸ್ಸಿಗೆ ಹತ್ತಲಿಲ್ಲ...
ಎ. ನೀನು ನನಗಾಗಿ ಕಾಯ್ತಾ ಇದ್ದೆ..

ಬಿ. ನನ್ನ ಬಗ್ಗೆ ಕನಸು ಕಾಣ್ತಾ ಇದ್ದೆ.. ಬಸ್ ಬಂದು ಹೋಗಿದ್ದೇ ಗೊತ್ತಾಗಲಿಲ್ಲ.
ಸಿ. ಬಸ್ ತುಂಬ ಜನ ಇತ್ತು.

7. ನಿನ್ನ ಅಪ್ಪ-ಅಮ್ಮ ಕಾಲೇಜಿಗೆ ಬಂದಾಗ ನನ್ನನ್ನು ಇಂಟ್ರೊಡ್ಯೂಸ್
ಮಾಡಿಸಿದ್ದು.
ಎ. ನಾನು ನಿನ್ನ ವರನಾಗುತ್ತೇನೆ ಅಂತ.
ಬಿ. ನಿನ್ನ ಅಪ್ಪ-ಅಮ್ಮ ನನ್ನ ಬಗ್ಗೆ ತಿಳಿದುಕೊಳ್ಳಲಿ ಅಂತ
ಸಿ. ಪರಿಚಯ ಮಾಡಿಸ್ಬೇಕು ಅನಿಸಿತು ಅದಕ್ಕೆ.

8. ಗುಲಾಬಿ ಇಟ್ಕೊಂಡ ಹುಡುಗೀರು ಇಷ್ಟ ಅಂದೆ ಮರುದಿನವೇ
ಹೂವಿಟ್ಟುಕೊಂಡು ಬಂದೆ..
ಎ. ನನ್ನ ಆಸೆ ಈಡೇರಿಸೋಕೆ..
ಬಿ. ನಿನಗೆ ಗುಲಾಬಿ ಇಷ್ಟ ಅದಕ್ಕೆ..
ಸಿ. ಚಾನ್ಸಲ್ಲಿ ನಿನಗೆ ಅದು ಸಿಕ್ಕಿತು.

9. ಆವತ್ತು ನನ್ನ ಹುಟ್ಟುಹಬ್ಬವಾಗಿತ್ತು. ನೀನು ಕೂಡಾ ಬೆಳಿಗ್ಗೆ ಆರು ಗಂಟೆಗೆ
ದೇವಸ್ಥಾನಕ್ಕೆ ಬಂದಿದ್ದೆ..
ಎ. ನನ್ನೊಂದಿಗೆ ಪ್ರಾರ್ಥನೆ ಮಾಡೋಕೆ..
ಬಿ. ಹುಟ್ಟುಹಬ್ಬದ ದಿನ ಬೇರೆ ಯಾರೂ ಮೀಟ್ ಆಗೋಕೆ ಮೊದಲು ನನ್ನನ್ನು
ಮೀಟ್ ಮಾಡೋ ಬಯಕೆ.
ಸಿ. ದೇವಸ್ಥಾನದಂತ ಪವಿತ್ರ ಜಾಗದಲ್ಲಿ ವಿಷ್ ಮಾಡಬೇಕು ಅಂತ.

ಅಯ್ಕೆಗಳು: ಎ-10 ಅಂಕಗಳು, ಬಿ-5 ಅಂಕಗಳು, ಸಿ-3 ಅಂಕಗಳು.

ಈ ಪ್ರಶ್ನೆಗಳಿಗೆ ಬರೆದ ಉತ್ತರಕ್ಕೆ ಒಟ್ಟು 40ಕ್ಕಿಂತ ಹೆಚ್ಚು ಅಂಕ ಬಂದರೆ, ನೀನು ನನ್ನನ್ನು ಲವ್ ಮಾಡ್ತಾ ಇದ್ದೀಯಾ.
ಅದನ್ನು ಹೇಳ್ಕೊಳ್ಳೋಕೆ ಡಿಲೇ ಮಾಡ್ಬೇಡ..

30 ರಿಂದ 40 ಬಂದರೆ ನಿನ್ನ ಹ್ರದಯದಲ್ಲಿ ಪ್ರೀತಿ ಅರಳ್ತಾ ಇದೆ.

30ಕ್ಕಿಂತ ಕಡಿಮೆ ಬಂದರೆ ಪ್ರೀತಿಸ್ಬೇಕಾ, ಬೇಡವಾ ಎನ್ನುವ ಗೊಂದಲವಿದೆ..
ಹೇಳು ಹುಡುಗಿ ನಿನ್ನ ಮಾರ್ಕ್ಸ ಎಷ್ಟು?
-ನಿನ್ನ ಪ್ರೀತಿಯ ಹುಡುಗ.

------------------------------------------------------

ಈ ಪ್ರಶ್ನೆಗಳಿಗೆ ಹುಡುಗಿ ಉತ್ತರಿಸಿದಳು.

ಹುಡುಗ, ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸು. ಹೌದು ಅಥವಾ ಇಲ್ಲ ಎಂದರೆ ಸಾಕು.

1.ಯಾರಾದರೂ ಮೊದಲ ಬೆಂಚಿನಲ್ಲಿ ಕುಳಿತರೆ, ಪ್ರವೇಶ ಮಾಡೋರು ಅವರನ್ನು ನೋಡ್ತಾರೆ. ಹೌದಾ? ಅಲ್ವಾ?

2. ಒಬ್ಬ ಹುಡುಗಿ ನಕ್ಕರೆ, ನೋಡಿದ್ರೆ ಅದು ಪ್ರೀತಿನಾ?
ಹೌದು? ಅಲ್ವಾ?

3.ಹಾಡುವಾಗ, ಒಂದು ಲೈನ್ ಮಿಸ್ಸಾದ್ರೆ. ಹಾಡು ನಿಲ್ಲಿಸಲೇಬೇಕು.
ಹೌದು? ಅಲ್ವಾ?

4. ನಾನು ನನ್ನ ಎಲ್ಲಾ ಗೆಳತಿಯರಿಗೆ ಪೋಟೋ ತೋರಿಸ್ತಿದ್ದೆ. ನೀನು ಮೂಗು ಮುರಿದೆ ಹೌದಾ? ಅಲ್ವಾ?

5.ಟ್ರೇಕಿಂಗ್ ವೇಳೆ ನಿನ್ನ ಕೈಯನ್ನು ನೆರವನ್ನು ಅವಾಯ್ಡ ಮಾಡಿದೆ. ಅರ್ಥ ಆಗ್ಲಿಲ್ವಾ?

6.ನಾನು ನನ್ನ ಬೆಸ್ಟ ಫ್ರೆಂಡ್ (ಅಂಜಲಿ)ಗಾಗಿ ಬಸ್ ಸ್ಟಾಂಡ್ ನಲ್ಲಿ ಕಾಯಾಬಾರದಾ?

7. ನಿನ್ನನು ಒಬ್ಬ ಫ್ರೆಂಡಾಗಿ ಹೆತ್ತವರಿಗೆ ಇಚಿಟ್ರೊಡ್ಯೂಸ್ ಮಾಡಿಕೊಡಬಾರದಾ?

8.ನೀನು ತಾವರೆ, ಕಾಲಿಫ್ಲವರ್, ಬಾಳೆ ಹೂ ಕೂಡ ಇಷ್ಟ ಅಂದಿದ್ದೆ. ನೆನಪಿಲ್ವಾ?

9.ನಿನ್ನ ಹುಟ್ಟುಹಬ್ಬದ ದಿನ ಮಾತ್ರವಲ್ಲ, ಪ್ರತೀ ದಿನವೂ ದೇವಸ್ಥಾನಕ್ಕೆ ಬತರ್ೆನೆ. ನಿಂಗೆ ಗೊತ್ತಿಲ್ವಾ?

ಈ ಪ್ರಶ್ನೆಗಳಲ್ಲಿ ಯಾವ ಪ್ರಶ್ನೆಗೂ ನೀನು ಹೌದು ಎಂದು ಉತ್ತರ ಕೊಟ್ಟರೆ ನಾನು ನಿನ್ನನ್ನು ಲವ್ ಮಾಡೋಲ್ಲ.
ಇಲ್ಲ ಎಂಬ ಉತ್ತರ ಕೊಟ್ಟರೆ ನಿನಗೆ ಪ್ರೀತಿಯ ಅರ್ಥವೇ ಗೊತ್ತಿಲ್ಲ ಎಂದು ಅರ್ಥ. ಈಗ ಎಲ್ಲವೂ ಕ್ಲಿಯರ್ ಆಯ್ತಲ್ಲ.