ಉನ್ನತ ಶಿಕ್ಷಣದಲ್ಲಿ `ಹೊಸ ಹೆಜ್ಜೆ' ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸದ ಬುಗ್ಗೆ


ಕುಂದಾಪುರ: ದೇಶದಲ್ಲಿ ಸುಮಾರು ಶೇ.70 ರಷ್ಟು ಜನರು ಹಳ್ಳಿಗಾಡಿನಲ್ಲಿ ವಾಸವಾಗಿದ್ದು, ಉತ್ತಮ ಗುಣಪಟ್ಟದ ಶಿಕ್ಷಣಕ್ಕಾಗಿ ಪರದಾಡಬೇಕಾಗಿದೆ. ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಿದರೂ ಕೆಲವೊಂದು ತೊಡಕುಗಳನ್ನು ಬಗೆಹರಿಸಲಾಗದೇ ಇಕ್ಕಟ್ಟಿಗೆ ಸಿಲುಕುವಂತಾಯಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರತಿಭಾವಂತರಾದರೂ ಪೇಟೆಯ ಮಕ್ಕಳೊಂದಿಗೆ ಸ್ಪರ್ಧಿಸಲು ಆಂಗ್ಲ ಭಾಷೆಯ ಕೊರತೆ, ಸಭಾಕಂಪನದಿಂದ ತಮ್ಮ ಸಾಮಥ್ಯವನ್ನು ಅಭಿವ್ಯಕ್ತ ಪಡಿಸುವಲ್ಲಿ ವಿಫಲರಾಗಿದ್ದಾರೆ.
       ಪ್ರತಿ ವರ್ಷ ದೇಶದಲ್ಲಿ 30 ಲಕ್ಷದಷ್ಟು ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಮುಗಿಸಿದರೆ. ಬೆರಳಣಿಕೆಯಷ್ಟು  ಯುವಕರು ಮಾತ್ರ ಸಾಂಸ್ಥಿತ ವಲಯದಲ್ಲಿ ಉದ್ಯೋಗ ಪಡೆಯುತ್ತಿರುವುದು ವಿಷಾದನೀಯ ಸಂಗತಿ.  ಇತ್ತೀಚೆಗೆ ಹಳ್ಳಿ ಪ್ರದೇಶದ ವಿದ್ಯಾರ್ಥಿಗಳಲ್ಲಿ ಎಲ್ಲಾ ಸಾಮರ್ಥಗಳಿದ್ದರೂ  ಕೀಳರಿಮೆಯಿಂದಾಗಿ ಖನ್ನತೆಗೆ ಒಳಗಾಗಿ ನಾಗರಿಕ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆಯನ್ನು ಮರೆತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಅರಿತು ಪ್ರಸ್ತುತ ಬದಲಾಗುತ್ತಿರುವ ಸ್ಪರ್ಧಾ ಜಗತ್ತಿಗೆ ಹೊಂದಿಕೊಳ್ಳಲು ಬೇಕಾದ ಪೂರಕ ವಾತಾವರಣವನ್ನು ಸೃಷ್ಠಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜ್ಞಾನ ಆಯೋಗವನ್ನು ರಚಿಸಿ  ಅದರ ಅಡಿಯಲ್ಲಿ  ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಇಲಾಖೆಯು ಜ್ಞಾನ ಆಯೋಗವನ್ನು ರಚಿಸಿ ಅದರ ಅಡಿಯಲ್ಲಿ  `ಹೊಸ ಹೆಜ್ಜೆ’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಇದರ ಮೂಲಕ ವಿದ್ಯಾರ್ಥಿಗಳ ಸಂಹನ ಕೌಶಲ್ಯತೆಯನ್ನು ಹೆಚ್ಚಿಸಲು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ತರಬೇತಿ ನೀಡುತ್ತಿದೆ.ಮಾನವೀಯ ಮೌಲ್ಯ, ಉತ್ತಮ ನಾಗರಿಕ ಪ್ರಜ್ಷೆಯನ್ನು ಮೂಡಿಸಲು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ `ವಿಕಸನ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾಂಸ್ಥಿಕ ವಲಯದಲ್ಲಿ ಕೆಲಸ ನಿರ್ವಹಿಸಲು ಬೇಕಾದ ಕೈಚಳಕ ಹಾಗೂ ಬುದ್ದಿವಂತಿಕೆಯ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಫಲರಾಗುತ್ತಾ ಬಂದಿದ್ದಾರೆ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಹಯೋಗ ಎಂಬ ವೃತ್ತಿ ಶಿಕ್ಷಣವನ್ನು ಆರಂಬಿಸಿದೆ. ವೃತ್ತಿ ಶಿಕ್ಷಣ ಹಾಗೂ ಹೊಸ ಹೆಜ್ಜೆ ಕಾರ್ಯಕ್ರಮ ಇಂದಿನ ಪದವಿ ಪಠ್ಯಕ್ರಮದಲ್ಲಿ ಉದ್ಯೋಗ ಆಧಾರಿತ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಎಂಬ ಬುಗ್ಗೆಯನ್ನು ತುಂಬಿದೆ.

 ಅಂಧ ಉಪನ್ಯಾಸಕನ ವಿಶೇಷ ಕಾಳಜಿ 
         ಸರ್ಕಾರ ಉನ್ನತ ಶಿಕ್ಷಣ ಇಲಾಖೆಯಿಂದ ಅದರಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಕೋಟೇಶ್ವರದ ಶ್ರೀ ಕಾಳಾವರ ವರದರಾಜ.ಎಂ.ಶೆಟ್ಟಿ ಸರಕಾರಿ ಪದವಿ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಅನುಷ್ಠಾನಗೊಂಡು ಸಾಕಷ್ಟು ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಾಂಸ್ಥಿಕ ವಲಯದಲ್ಲಿ ಉತ್ತಮ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇದೇ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಬೈಂದೂರಿನ ಹಳ್ಳಿಯಲ್ಲಿ  ಕಷ್ಟ ಪಟ್ಟು ವಿದ್ಯಾಬ್ಯಾಸ ಮಾಡಿದ ಅಂದ ಅರ್ಥಶಾಸ್ತ್ರ ಉಪನ್ಯಾಸಕ  ಸುಬ್ರಹ್ಮಣ್ಯ ಬೈಂದೂರು ಅವರ ವಿಶೇಷವಾದ ಕಾಳಜಿಯಿಂದ  ಕಾಲೇಜಿನ ರಜಾ ಅವದಿಯಲ್ಲಿ ಈ ಕಾರ್ಯಕ್ರಮದ  ಪ್ರಯೋಜನವನ್ನು  ಪ್ರಸ್ತುತ ಸಾಲಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.
         ಲಾರೆಸ್, ಎಜ್ಯುಟೆಕ್, ಲ್ಯಾಂಡ್ ಮಾರ್ಕ್ ಕಂಪೆನಿಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಸಹಯೋಗ ವೃತ್ತಿ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತಿದ್ದು, ರಾಷ್ಟ್ರೀಯ ಮಟ್ಟದ ತರಬೇತುದಾರರಾದ ಮನಶಾಸ್ತ್ರಜ್ಞೆ ಜಯಶ್ರೀ ಭಟ್, ಶ್ಯಾಮ್ ಡೊನಾಲ್ಡ್, ಯೋಗ ಗುರು ಸ್ವಾಮಿ ನಿರವ ಸಂಕೇತ ಈ ಶಿಬಿರಕ್ಕೆ ಆಗಮಿಸಿ ಕೇವಲ ಭೋದನೆ ನೀಡುವುದಲ್ಲದೆ,  ವಿವಿದ ತರದ ಆಟಿಕೆ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಆರ್ಥಿಕ ಸಂಪನ್ಮೂಲಗಳನ್ನು ಹೇಗೆ ಸಮರ್ಪಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾದ್ಯವಾಗುತ್ತದೆ ಎನ್ನುವ ಅರಿವನ್ನು ಮೂಡಿಸಲು ಯತ್ನಿಸುತ್ತಿದ್ದಾರೆ.
         ಪ್ರಪಂಚ ಎಷ್ಟೇ ಮುಂದುವರಿದರೂ ಜನರು ತಮ್ಮತನದ ಅರಿವನ್ನು ಬಿಟ್ಟು ಇತರರ ಬಗ್ಗೆ ಮಾತನಾಡಿ ದೂಷಣೆ ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಆತನ ಸಾಮಥ್ರ್ಯ ಮಾಪನ ಮಾಡುವ ಶಕ್ತಿ ಸೃಷ್ಠಿಸುದು., ಯೋಚನೆ-ಯೋಜನೆ ಮೂಲಕ ಗುರಿಯನ್ನು ನಿಗದಿ ಪಡಿಸುವುದು, ಶಿಕ್ಷಣ,ಉದ್ಯೋಗ ಹಾಗೂ ಜೀವನದಲ್ಲಿ ಸಂಭವಿಸುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು, ಅನೇಕ ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತಮ ನಿರ್ಣಯವನ್ನು ತೆಗೆದುಕೊಳ್ಳುವುದು, ಅಭೀಕ್ಷಮತೆ , ಸೃಜನಶೀಲತೆ ಮಾನವೀಯ ಮೌಲ್ಯದ ಮೂಲಕ ನಾಗರಿಕ ಹಾಗೂ ಪರಿಸರ ಪ್ರಜ್ಷೆ ಮೂಡಿಸುವುದು, ತಂಡದಲ್ಲಿ ಕೆಲಸ ಸಾಮಥ್ರ್ಯ ಸೃಷ್ಠಿಸುವುದು, ಉತ್ತಮ ನಾಯಕತ್ವ ಗುಣಗಳನ್ನು ಗಳಿಸುವುದು, ಒತ್ತಡವನ್ನು ಸಮರ್ಥವಾಗಿ ಕಡಿಮೆ ಮಾಡುವುದು, ಸಮಯವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಸಾಧನೆಯನ್ನು ಮಾಡುವುದು ಹಾಗೂ ವ್ಯಕ್ತಿತ್ವದ ಬೆಳವಣಿಗೆಗಾಗಿ ನಾನಾ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿ ಸಮ್ಮುಖದಲ್ಲಿ ತರಬೇತಿದಾರರೆ ಮಾಡಿತೋರಿಸುತ್ತಾರೆ. ಇವೆಲ್ಲವೂ ಸ್ಪರ್ಧಾ ಜಗತ್ತಿನಲ್ಲಿ ಉದ್ಯೋಗ ಪಡೆದುಕೊಂಡು ಉತ್ತಮ ನಾಗರಿಕ ಜೀವನ ನಡೆಸಿಕೊಂಡು ಹೋಗಲು ಸಹಕಾರಿಯಾಗಿದೆ.
        ವಿದ್ಯಾರ್ಥಿಗಳಲ್ಲಿ ಹೊಸ ಹೆಜ್ಜೆ ಕಾರ್ಯಕ್ರಮದ ಮೂಲಕ  ಆತ್ಮವಿಶ್ವಾಸ ತುಂಬಿ ಉದ್ಯೋಗದೊಂದಿಗೆ ಉತ್ತಮ ನಾಗರಿಕ ಜೀವನ ನಡೆಸಲು ಪೂರಕ ವಾತಾವರಣವನ್ನು ಸೃಷ್ಠಿಸುವ ಮೂಲಕ ಯುವಕರಲ್ಲಿ ಉಧ್ಘವಿಸಬಹುದಾದ ಖನ್ನತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಅದರಿಂದ ಉಧ್ಭವಿಸಬಹುದಾದ ಎಲ್ಲಾ ಸಮಸ್ಯೆಗಳಿಗೆ ಪೂರ್ಣವಿರಾಮ ಮಾಡುತ್ತದೆ.


ಕುಂದಾಪ್ರ ಡಾಟ್ ಕಾಂ- editor@kundapra.com