ಪುರಸಭಾ ಚುನಾವಣೆ: ಬಿಜೆಪಿ ತೆಕ್ಕೆಗೆ ಕುಂದಾಪುರ | ವಿಜಯೋತ್ಸವ | ಅಭಿವೃದ್ಧಿ ಕಾರ್ಯಗಳ ಫಲ: ಸಚಿವ ಪೂಜಾರಿ

ಕುಂದಾಪುರ: ಕುಂದಾಪುರ ಪುರಸಭಾ ಚುನಾವಣಾ ಪಲಿತಾಂಶ ಹೊರಬಂದಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಜಿದ್ದಾಜಿದ್ದಿಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಗೆಲುವು ಸಾಧಿಸಿದ್ದು,  ಒಟ್ಟು 23 ಸ್ಥಾನಗಳ ಪೈಕಿ ಬಿಜೆಪಿ 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದಂತೆ ಕಾಂಗ್ರೆಸ್ 9 ಹಾಗೂ ಸಿಪಿಐ(ಎಂ) 2 ಸ್ಥಾನಗಳನ್ನು ಪಡೆದಿದೆ.  ಕುಂದಾಪುರದ ಭಂಡಾರ್‌ರ್ಕಾರ್ಸ್ ಕಾಲೇಜಿನಲ್ಲಿ ಇಂದು ಮತ ಏಣಿಕೆ ನಡೆಯಿತು.

       ಕಳೆದ ಚುನಾವಣೆಯಲ್ಲಿ 15 ಸ್ಥಾನ ಪಡೆದಿದ್ದ  ಬಿಜೆಪಿ ಈ ಬಾರಿ 12 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದರೆ, ಕಳೆದ ಭಾರಿ ಹಿನಾಯ ಸೋಲು ಕಂಡಿದ್ದ ಕಾಂಗ್ರೆಸ್ ಈ ಭಾರಿ ಹೆಚ್ಚವರಿ 5 ಸ್ಥಾನಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಸಿಪಿ‌ಐ(ಎಂ) ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದರೆ, ಜೆಡಿಎಸ್ ಹೇಳಹೆಸರಿಲ್ಲದಂತಾಗಿದೆ. 
ಬಿಜೆಪಿ ನಗರದಲ್ಲಿ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ 
ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಕಳೆದ ಅವಧಿಯಲ್ಲಿ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ  ನಡೆದ ಬಿಜೆಪಿಯ ಅಭಿವೃದ್ಧಿ ಕಾರ್ಯಗಳ ಫಲವಾಗಿ ಈ ಜಯ ದೊರೆತಿದೆ.  ಇದು ಮುಂಬರುವ ವಿಧಾನಸಭಾ ಚನಾವಣೆಗೆ ನೆರವಾಗಲಿದೆ ಎಂದರು.
ಕಾಂಗ್ರೇಸ್ ಹಾಗೂ ಸಿಪಿಐ(ಎಂ) ನಗರದಲ್ಲಿ ವಿಜಯೊತ್ಸವ ಆಚರಿಸುತ್ತದೆ.

                      ವಿಜೇತ ಅಭ್ಯರ್ಥಿಗಳು                  ಸೋತ ಅಭ್ಯರ್ಥಿಗಳು                          ಗೆಲವಿನ ಅಂತರ

ಪೆರಿರಸ್ತೆ ವಾರ್ಡ್: ಕೆ.ಪುಷ್ಪಶೆಟ್ಟಿ (ಕಾಂಗ್ರೆಸ್)-222, ಆಶಾಲತಾ ನಾಯಕ್ (ಬಿಜೆಪಿ)-145, ಅಂತರ-77

2.ಮದ್ದುಗುಡ್ಡೆ ವಾರ್ಡ್:ಸುರೇಶ ನಾಯಕ್(ಬಿಜೆಪಿ)-339, ನಾರಾಯಣ ಖಾರ್ವಿ ಮೂಡುಗುಡ್ಡೆ (ಕಾಂಗ್ರೆಸ್)-269, ಅಂತರ-70

ಈಸ್ಟ್‌ಬ್ಲಾಕ್ ವಾರ್ಡ್: ರವಿರಾಜ (ಬಿಜೆಪಿ)-277, ದಿನೇಶ (ಕಾಂಗ್ರೆಸ್)- 273, ಅಂತರ-4

ಖಾರ್ವಿಕೆರೆ ವಾರ್ಡ್: ವಸಂತಿ ಮೋಹನ್ ಸರಾಂಗ (ಕಾಂಗ್ರೆಸ್)-524 ಮಾಲಿನಿ ಕೆ. (ಬಿಜೆಪಿ)-318, ಅಂತರ-206

ಬಹಾದ್ದೂರು ಶಾ ರಸ್ತೆ ವಾರ್ಡ್: ಚಂದ್ರಶೇಖರ ಖಾರ್ವಿ (ಕಾಂಗ್ರೆಸ್)-465, ಸುಭಾಷ್ ಖಾರ್ವಿ (ಬಿಜೆಪಿ)-227, ಅಂತರ-238

ಚಿಕ್ಕನ್‌ಸಾಲ್ ರಸ್ತೆ ವಾರ್ಡ್: ಶಕುಂತಲಾ ಪ್ರಕಾಶ್ ಗುಲ್ವಾಡಿ(ಕಾಂಗ್ರೆಸ್)-353, ವೀಣಾ ಪ್ರಕಾಶ್ (ಬಿಜೆಪಿ)-338, ಅಂತರ-15

ಮೀನು ಮಾರ್ಕೆಟ್ ವಾರ್ಡ್: ಶ್ರೀಧರ ಶೇರಿಗಾರ್ (ಕಾಂಗ್ರೆಸ್)-400, ಅರುಣ್ ಕುಮಾರ ಬನ (ಬಿಜೆಪಿ)-247, ಅಂತರ-153

ಚಿಕ್ಕನ್‌ಸಾಲ್ ರಸ್ತೆ: ವಿಠಲ್ ಕೆ.ಕುಂದರ್ (ಬಿಜೆಪಿ)-456, ಕೆ.ಜಿ.ನಿತ್ಯಾನಂದ(ಕಾಂಗ್ರೆಸ್)-450, ಅಂತರ-6

ಸರ್ಕಾರಿ ಆಸ್ಪತ್ರೆ ವಾರ್ಡ್: ಸತೀಶ್ ಶೆಟ್ಟಿ (ಬಿ)-276, ವಿನೋದ ಕ್ರಾಸ್ತಾ(ಕಾಂಗ್ರೆಸ್)-232, ಅಂತರ-44

ಚರ್ಚ್ ರಸ್ತೆ ವಾರ್ಡ್: ರಾಜೇಶ್ ಖಾರ್ವಿ (ಬಿಜೆಪಿ)-281, ಉದಯ್ ಶೇರಿಗಾರ್ (ಕಾಂಗ್ರೆಸ್)-138, ಅಂತರ-143

ಸೆಂಟ್ರಲ್ ವಾರ್ಡ್: ಮೋಹನ್ ದಾಸ್ ಶೆಣೈ (ಬಿಜೆಪಿ)-257, ಗೌತ್ಛಜಜ ಸಿ.ಎಂ. (ಕಾಂಗ್ರೆಸ್)-130, ಅಂತರ-127

ಟೈಲ್ ಫ್ಯಾಕ್ಟರಿ ರಸ್ತೆ ವಾರ್ಡ್: ನಾಗರಾಜ (ಬಿಜೆಪಿ)-408, ಧರ್ಮಪ್ರಕಾಶ್ (ಕಾಂಗ್ರೆಸ್)-259, ಅಂತರ-149

ಕೋಡಿ ದಕ್ಷಿಣ ವಾರ್ಡ್: ವಿಜಯ ಎಸ್. ಪೂಜಾರಿ (ಬಿಜೆಪಿ)-424, ಸುಧಾಕರ ಕಾಂಚನ್ (ಸಿಪಿಎಂ)-219, ಅಂತರ-205

ಕೋಡಿ ಮಧ್ಯಬಾಗ ವಾರ್ಡ್:ಜ್ಯೋತಿ ಗಣೇಶ್ ಮೊಗವೀರ(ಕಾಂಗ್ರೆಸ್)-434. ರುಕ್ಕು ಪೂಜಾರ್ತಿ(ಜೆಡಿಎಸ್)-94, ಅಂತರ-340

ಕೋಟಿ ಉತ್ತರ ವಾರ್ಡ್: ಪ್ರಕಾಶ್ ಕೋಡಿ (ಕಾ)-345, ಮಂಜುನಾಥ (ಬಿಜೆಪಿ)-310, ಅಂತರ-35

ಟಿ.ಟಿ.ರಸ್ತೆ ವಾರ್ಡ್: ಸಂದೀಪ್ ಎ. ಪೂಜಾರಿ (ಕಾಂಗ್ರೆಸ್)-457, ಸುಧಾಕರ (ಬಿ)-277, ಅಂತರ-180

ನಾನಾ ಸಾಹೇಬ್ ರಸ್ತೆ ವಾರ್ಡ್: ರವಿಕಲಾ ಗಣೇಶ್ ಸೇರಿಗಾರ್ (ಕಾಂಗ್ರೆಸ್) -430, ಲತಾ (ಬಿಜೆಪಿ)-349, ಅಂತರ-81

ಜೆ.ಎಲ್.ಬಿ.ರಸ್ತೆ ವಾರ್ಡ್: ಉದಯ ಮೆಂಡನ್ (ಬಿಜೆಪಿ)-423, ಶಿವಕುಮಾರ್ ಮೆಂಡನ್ (ಸಿಪಿಎಂ) 325, ಅಂತರ-98

ಕುಂದೇಶ್ವರ ವಾರ್ಡ್: ಕಲಾವತಿ ಯು.ಎಸ್. (ಸಿಪಿಎಂ)-408, ನೂತನ್ (ಬಿ)-389, ಅಂತರ-19

ಹುಂಚಾರ್ ರಸ್ತೆ ವಾರ್ಡ್: ಗೀತಾ (ಬಿಜೆಪಿ)-375, ವಿ. ಮೀನಾಕ್ಷಿ (ಸಿಪಿಎಂ)-372, ಅಂತರ-3

ಶಾಂತಿನಿಕೇತನ ವಾರ್ಡ್: ಗುಣರತ್ನ (ಸಿಪಿಎಂ)-408, ಶಕುಂತಲಾ (ಬಿಜೆಪಿ)- 404, ಅಂತರ-4

ಕಲ್ಲಾಗರ ವಾರ್ಡ್: ರಾಘವೇಂದ್ರ ದೇವಾಡಿಗ (ಬಿಜೆಪಿ)-491, ರಾಜು ದೇವಾಡಿಗ (ಸಿಪಿಎಂ)-283, ಅಂತರ-208

ವೆಸ್ಟ್ ಬ್ಲಾಕ್ ವಾರ್ಡ್: ಸಿಸಿಲಿ ಸಿ. ಕೋಟ್ಯಾನ್ (ಬಿಜೆಪಿ)-385, ಜ್ಯೋತಿ ಮೇರಿ (ಸಿಪಿಎಂ)-371, ಅಂತರ-14

ಈ ಬಾರಿ ಆಯ್ಕೆಯಾಗಿರುವ ಆಭ್ಯರ್ಥಿಗಳಲ್ಲಿ ಮಾಜಿ ಪುರಸಭಾ ಅಧ್ಯಕ್ಷತಾಗಿದ್ದ ಮೋಹನ್‌ದಾಸ ಶೆಣೈ ಹಾಗೂ ಗುಣರತ್ನ ನಾಲ್ಕನೆಯ ಬಾರಿ ಹಾಗೂ  ಸತೀಶ್ ಶೆಟ್ಟಿ ಮೂರನೇಯ ಬಾರಿ ಜಯ ಸಾಧಿಸಿದ್ದಾರೆ. ಕಳೆದ ಪುರಸಭಾ ಅವಧಿಯಲ್ಲಿನ ಸದಸ್ಯರಾಗಿದ್ದ ರಾಜೇಶ್, ನಾಗರಾಜ ರಾವ್, ವಸಂತಿ ಸಾರಂಗ, ಪುಷ್ಪಾ ಶೇಟ್, ವಿಠ್ಠಲ್ ಕುಂದರ್, ಉದಯ್ ಮೆಂಡನ್, ರಾಘವೇಂದ್ರ ದೇವಾಡಿಗ, ರವಿಕಲಾ ಗಣೇಶ್, ವಿಜಯ್ ಎಸ್ ಪೂಜಾರಿ, ರವಿರಾಜ್ ಖಾರ್ವಿ, ಸಿಸಿಲಿಯಾ ಕೋಟ್ಯಾನ್, ಕಲಾವತಿ, ಹಾಗೂ ಗೀತಾ ಪುನರಾಯ್ಕೆಯಾಗಿದ್ದಾರೆ. ಹಿಂದಿನ ಪುರಸಭೆಯಲ್ಲಿ ಸದಸ್ಯರಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ವೀಣಾ ಪ್ರಕಾಶ್ ಅವರನ್ನು ಹೊರತು ಪಡಿಸಿ ಉಳಿದವರು ಪುನರಾಯ್ಕೆಯಾಗಿದ್ದಾರೆ