ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರ: ಎಲ್ಲೆಡೆ ಕದನ ಕೌತುಕ


ಕುಂದಾಪುರ: 2013ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರ, ಪರಸ್ಪರ ವಾಗ್ದಾಳಿಗಳು ಗರಿಗೆದರಿವೆ. ಒಂದೆಡೆ ಹೊಸ ಪ್ರಾದೇಶಿಕ ಪಕ್ಷಗಳು ಉದಯಗೊಂಡು ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ಅಣಿಯಾಗುತ್ತಿದ್ದರೇ, ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಹವಣಿಸುತ್ತದ್ದಾರೆ. ಈ ಎಲ್ಲದರ ನಡುವೆ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಾದಾದ್ಯಂತ ವಿವಿಧ ಪಕ್ಷಗಳಿಂದ ಮತದಾರನ ಮನವಲಿಸುವ ಕಾರ್ಯ ಮುಂದುವರಿದಿದೆ. 

ಕುಂದಾಪುರ ವಿಧಾನಸಭಾ ಕ್ಷೇತ್ರ:
     2008ರ ಚುನಾವಣೆಯ ಸಂದರ್ಭದಲ್ಲಿ ಕುಂದಾಪುರ ತಾಲೂಕು ಕ್ಷೇತ್ರದ ಪುನರ್‌ವಿಂಗಡನೆಯಿಂದಾಗಿ ಕುಂದಾಪುರ ಕ್ಷೇತ್ರದಿಂದ ಬ್ರಹ್ಮಾವರ ಬೇರ್ಪಟ್ಟು ಕೋಟ ಹೋಬಳಿಯ 31 ಗ್ರಾಮಗಳು ಕುಂದಾಪುರದ ಪಾಲಾಗಿ, ಕುಂದಾಪುರ ಕ್ಷೇತ್ರದ 26 ಗ್ರಾಮಗಳು ಬೈಂದೂರು ಕ್ಷೇತ್ರ ಸೇರಿತ್ತು. ಅತ್ಯಂತ ಕುತೂಹಲ ಮೂಡಿಸಿದ ಈ ವಿದ್ಯಮಾನದಲ್ಲಿ ಕಾಂಗ್ರೆಸನ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಇವರಿಬ್ಬರ ನಡುವೆ ಭಾರಿ ಹಣಾಹಣಿ ನಡೆದು ಅಂತಿಮವಾಗಿ  ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಜಯ ಸಾಧಿಸಿ ಮೂರನೇ ಭಾರಿಗೆ ಶಾಸಕ ಸ್ಥಾನ ಅಲಂಕರಿಸಿದ್ದರು.

      ಈ ಬಾರಿ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಬಿ. ಕಿಶೋರ್ ಕುಮಾರ್, ಕಾಂಗ್ರೆಸ್ ನಿಂದ ಶಿವರಾಮ್ ಶೆಟ್ಟಿ, ಪಕ್ಷೇತರ ಅಭ್ಯರ್ಥಿಯಾಗಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ವರ್ಧಿಸುವುದು ನಿಶ್ಚಿತವಾಗಿದ್ದು ಒಂದೆರಡು ದಿನದಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ನಡುವೆ ಸಿಪಿಐ(ಎಂ) ಯಾರಿಗೆ ಬೆಂಬಲ ನೀಡಲಿದೆ, ಕೆಜೆಪಿ ಹಾಗೂ ಬಿಎಸ್.ಆರ್ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕುಂದಾಪುರ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆಯೇ, ಉಳಿದ ಪಕ್ಷೇತರ ಅಭ್ಯರ್ಥಿಗಳು ಯಾರ್ಯರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಕುಂದಾಪುರ ಕ್ಷೇತ್ರದಲ್ಲಿ ಈ ತನಕ ಗೆದ್ದವರು-ಸೋತವರ ವಿವರ ಇಂತಿದೆ:

1952: ಕುಂದಾಪುರ ತಾಲೂಕು ಕ್ಷೇತ್ರ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಗ್ರೆಸ್‌ನಿಂದ ಅವಿರೋಧ ಆಯ್ಕೆ 

1957: ಬೈಂದೂರು ಹಾಗೂ ಕುಂದಾಪುರ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದು ಕುಂದಾಪುರದಲ್ಲಿ ವಕ್ವಾಡಿ ಶ್ರೀನಿವಾಸ ಶೆಟ್ಟಿಗೆ   ಗೆಲುವು (ಪಿಎಸ್‌ಪಿ), ಕಕ್ಕುಂಜೆ ಸೂರ್ಯನಾರಾಯಣ ಅಡಿಗರಿಗೆ ಸೋಲು (ಕಾಂಗ್ರೆಸ್‌).)|)

1962: ಎಸ್.ಎಸ್.ಕೊಳ್ಕೆಬೆಲು ಅವರಿಗೆ ಗೆಲುವು (ಕಾಂಗ್ರೆಸ್‌|)   ವಕ್ವಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸೋಲು (ಪಿಎಸ್‌ಪಿ-ಪ್ರಜಾ ಸೋಶಿಯಲಿಸ್ಟ್ ಪಾರ್ಟಿ).

1967: ವಿನ್ನಿಫ್ರೆಡ್ ಫರ್ನಾಂಡಿಸ್‌ಗೆ ಗೆಲುವು (ಪ್ರಜಾ ಸೋಶಿಯಲಿಸ್ಟ್ ಪಾರ್ಟಿ), ಎಂ.ಎಂ.ಹೆಗ್ಡೆಗೆ ಸೋಲು (ಕಾಂಗ್ರೆಸ್‌|)

1972: ವಿನ್ನಿಫ್ರೆಡ್ ಫರ್ನಾಂಡೀಸ್‌ಗೆ ಗೆಲುವು (ಅಂದು ಪಿಎಸ್‌ಪಿ ಕಾಂಗ್ರೆಸ್‌ನೊಂದಿಗೆ ವಿಲೀನ), ಕಾಪು ಸಂಜೀವ ಶೆಟ್ಟಿಯವರಿಗೆ ಸೋಲು (ಜನತಾ ಪಕ್ಷ).

1978: ಕಾಪು ಸಂಜೀವ ಶೆಟ್ಟಿ ಗೆಲುವು (ಜನತಾ ಪಕ್ಷ),  ಮಾಣಿಗೋಪಾಲ್‌ಗೆ ಸೋಲು (ಕಾಂಗ್ರೆಸ್‌).|)

1983: ಕೆ.ಪ್ರತಾಪಚಂದ್ರ ಶೆಟ್ಟಿಗೆ ಗೆಲುವು (ಕಾಂಗ್ರೆಸ್‌]|) ಮಾಣಿಗೋಪಾಲ್‌ಗೆ ಸೋಲು (ಜನತಾ ಪಕ್ಷ).

1985: (ವಿಧಾನಸಭೆ ವಿಸರ್ಜನೆ. ಮರುಚುನಾವಣೆ)  ಕೆ.ಪ್ರತಾಪಚಂದ್ರ ಶೆಟ್ಟಿಗೆ ಗೆಲುವು (ಕಾಂಗ್ರೆಸ್‌|). ಬಿ.ಅಪ್ಪಣ್ಣ ಹೆಗ್ಡೆಗೆ ಸೋಲು (ಜನತಾದಳ). 

1987: ಕೆ.ಪ್ರತಾಪಚಂದ್ರ ಶೆಟ್ಟಿಗೆ ಗೆಲುವು (ಕಾಂಗ್ರೆಸ್‌|) ಗೋವರ್ಧನ್‌ಗೆ ಸೋಲು. (ಜನತಾದಳ)

1994: ಕೆ.ಪ್ರತಾಪಚಂದ್ರ ಶೆಟ್ಟಿಗೆ ಗೆಲುವು (ಕಾಂಗ್ರೆಸ್‌|). ಎ.ಜಿ.ಕೊಡ್ಗಿಗೆ ಸೋಲು (ಬಿಜೆಪಿ).

1999: ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಗೆಲುವು (ಬಿಜೆಪಿ), ಪ್ರತಾಪಚಂದ್ರ ಶೆಟ್ಟಿಯವರಿಗೆ ಸೋಲು (ಕಾಂಗ್ರೆಸ್). 

2004:. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಗೆಲುವು (ಬಿಜೆಪಿ) ಅಶೋಕಕುಮಾರ ಹೆಗ್ಡೆಯವರಿಗೆ ಸೋಲು (ಕಾಂಗ್ರೆಸ್). 

2008: ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಗೆಲುವು (ಬಿಜೆಪಿ). ಕೆ.ಜಯಪ್ರಕಾಶ್ ಹೆಗ್ಡೆಗೆ ಸೋಲು (ಕಾಂಗ್ರೆಸ್‌|)

ಈ ಭಾರಿ ಕುಂದಾಪುರ ಕ್ಷೇತ್ರದಲ್ಲಿ 1,81,817 ಮತದಾರರಿದ್ದು 83,839 ಪುರುಷ ಹಾಗೂ 93,871 ಮಹಿಳೆಯರಿದ್ದು, ಒಟ್ಟು 211 ಮತಗಟ್ಟೆಗಳಿವೆ,

ಬೈಂದೂರು ವಿಧಾನಸಭಾ ಕ್ಷೇತ್ರ:
       ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಧಿಕ ಮತದಾರರನ್ನು ಹೊಂದಿರುವ ಬೈಂದೂರು ಕ್ಷೇತ್ರದಲ್ಲಿ  ತಾಲೂಕು ಎಂದು ಫೋಷಣೆಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ತೀವ್ರ ಕತೂಹಲ ಕೆರಳಿಸಿದೆ. 2008ರಲ್ಲಿ ನಡೆದ ಕ್ಷೇತ್ರ ವಿಭಜನೆಯಿಂದಾಗಿ ಕುಂದಾಪುರ ಕ್ಷೇತ್ರದ ಪ್ರಮುಖ ಗ್ರಾಮಗಳಾದ ಶಂಕರನಾರಾಯಣ, ಸಿದ್ಧಾಪುರ, ಹೊಸಂಗಡಿ, ಹಳ್ಳಿಹೊಳೆ, ಕೊಲ್ಲೂರು, ಜಡ್ಕಲ್, ಗೋಳಿಹೊಳೆ, ಬೈಂದೂರು, ಶಿರೂರು, ಗಂಗೊಳ್ಳಿ, ತಲ್ಲೂರು, ಹಟ್ಟಿಯಂಗಡಿ, ನೇರಳಕಟ್ಟೆ, ಕುರ್ಕುಂಜೆ, ಆಜ್ರಿ ಮುಂತಾದವು ಬೈಂದೂರು ಕ್ಷೇತ್ರವನ್ನು ಸೇರಿತ್ತು. ಅದಾಗಲೇ ಮೂರು ಬಾರಿ ಜಯ ಸಾಧಿಸಿದ್ದ ಕಾಂಗ್ರೆಸನ ಕೆ. ಗೋಪಾಲ್ ಪೂಜಾರಿ ಹಾಗೂ ಬಿಜೆಪಿಯ ಲಕ್ಷ್ಮೀನಾರಾಯಣ ನಡುವೆ ನೇರ ಹಣಾಹಣಿ ನಡೆದು ಬಿಜೆಪಿಯ ಲಕ್ಷ್ಮೀನಾರಾಯಣ 7970 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 

     ಈ ಭಾರಿ ಮತ್ತೆ ಕಾಂಗ್ರೆಸ್‌ ಪಕ್ಷದಿಂದ ಕೆ. ಗೋಪಾಲ ಪೂಜಾರಿ ಸ್ಫರ್ಧಿಸಲಿದ್ದು, ಬಿ.ಜೆ.ಪಿ. ಯಿಂದ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಬಿ.ಎಮ್. ಸುಕುಮಾರ್‌ ಶೆಟ್ಟಿ ಸ್ವರ್ಧಿಸಲಿದ್ದಾರೆ. ಜೆ.ಡಿ.ಎಸ್‌.ನಿಂದ ಬೋಜರಾಜ್‌ ಶೆಟ್ಟಿ, ಸಿಪಿಐ(ಎಂ)ನಿಂದ ಕೆ.ಶಂಕರ್ ಸ್ಫರ್ಧಿಸಲಿದ್ದು ಇತರ ಪಕ್ಷಗಳಿಂದ ಇನ್ನಷ್ಟೆ ಅಭ್ಯರ್ಥಿಗಳ ಪಟ್ಟಿ ಹೊರಬರಬೇಕಾಗಿದೆ. ಒಟ್ಟಿನಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಿ.ಜೆ.ಪಿ ಹಾಗೂ ಕಾಂಗ್ರೆಸ್‌ ಪಕ್ಷದ ನಡುವೆ ನೇರ ಹಣಾಹಣಿ ನಡೆಯಲಿದೆ. 

ಬೈಂದೂರು ಕ್ಷೇತ್ರದಲ್ಲಿ ಈ ತನಕ ಗೆದ್ದವರು-ಸೋತವರ ವಿವರ ಇಂತಿದೆ:

1952: ಕುಂದಾಪುರ ತಾಲೂಕು ಕ್ಷೇತ್ರ ಯಡ್ತರೆ ಮಂಜಯ್ಯ ಶೆಟ್ಟಿ ಕಾಂಗ್ರೆಸ್‌ನಿಂದ ಅವಿರೋಧ ಆಯ್ಕೆ

1957: ಬೈಂದೂರು ಹಾಗೂ ಕುಂದಾಪುರ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದು ಯಡ್ತರೆ ಮಂಜಯ್ಯ ಶೆಟ್ಟಿ ಗೆಲುವು  (ಕಾಂಗ್ರೆಸ್‌ ). ಹಲ್ಸನಾಡು ಸುಬ್ಬರಾವ್ ಅವರಿಗೆ ಸೋಲು (ಪ್ರಜಾ ಸೋಶಿಯಲಿಸ್ಟ್ ಪಾರ್ಟಿ).

1962: ಯಡ್ತರೆ ಮಂಜಯ್ಯ ಶೆಟ್ಟಿ ಗೆಲುವು (ಕಾಂಗ್ರೆಸ್‌ ). ಹಲ್ಸನಾಡು ಸುಬ್ಬರಾವ್ ಅವರಿಗೆ ಸೋಲು (ಪ್ರಜಾ ಸೋಶಿಯಲಿಸ್ಟ್ ಪಾರ್ಟಿ)

1967: ಹಲ್ಸನಾಡು ಸುಬ್ಬರಾವ್‌ಗೆ ಗೆಲುವು (ಪಿಎಸ್‌ಪಿ ), ಎ.ಜಿ.ಕೊಡ್ಗಿಗೆ ಸೋಲು (ಕಾಂಗ್ರೆಸ್‌).

1972: ಎ.ಜಿ.ಕೊಡ್ಗಿಗೆ ಗೆಲುವು (ಕಾಂಗ್ರೆಸ್), ಎಸ್.ವಿ.ಪೆ ಅವರಿಗೆ ಸೋಲು (ಜನಸಂಘ),

1978: ಎ.ಜಿ.ಕೊಡ್ಗಿಯವರಿಗೆ ಗೆಲುವು ( ಕಾಂಗ್ರೆಸ್), ಎಡ್ವಿನ್‌ಕ್ರಾಸ್ತಾ ಸೋಲು (ಜನತಾ ಪಕ್ಷ).

1983: ಬಿ.ಅಪ್ಪಣ್ಣ ಹೆಗ್ಡೆಗೆ ಗೆಲುವು (ಜನತಾ ಪಕ್ಷ).  ಜಿ.ಎಸ್.ಆಚಾರ್‌ಗೆ ಸೋಲು (ಕಾಂಗ್ರೆಸ್),

1985: (ವಿಧಾನಸಭೆ ವಿಸರ್ಜನೆ. ಮರುಚುನಾವಣೆ)  ಜಿ.ಎಸ್.ಆಚಾರ್‌ಗೆ ಗೆಲುವು (ಕಾಂಗ್ರೆಸ್‌), ಮಾಣಿಗೋಪಾಲ್‌ಗೆ ಸೋಲು (ಜನತಾದಳ).

1987:  ಜಿ.ಎಸ್.ಆಚಾರ್‌ಗೆ ಗೆಲುವು (ಕಾಂಗ್ರೆಸ್‌),  ಮಾಣಿಗೋಪಾಲ್‌ಗೆ ಸೋಲು (ಜನತಾದಳ).

1994: ಐ.ಎಂ.ಜಯರಾಮ ಶೆಟ್ಟಿ ಗೆಲುವು (ಬಿಜೆಪಿ), ಮಾಣಿಗೋಪಾಲ ಸೋಲು (ಕಾಂಗ್ರೆಸ್),

1999: ಕೆ.ಗೋಪಾಲ ಪೂಜಾರಿ ಗೆಲುವು (ಕಾಂಗ್ರೆಸ್), ಕೆ.ಲಕ್ಷ್ಮೀನಾರಾಯಣರಿಗೆ ಸೋಲು (ಬಿಜೆಪಿ),

2004: ಕೆ.ಗೋಪಾಲ ಪೂಜಾರಿ ಗೆಲುವು  (ಕಾಂಗ್ರೆಸ್), ಕೆ.ಲಕ್ಷ್ಮೀನಾರಾಯಣರಿಗೆ ಸೋಲು (ಬಿಜೆಪಿ),

2008: ಕೆ.ಲಕ್ಷ್ಮೀ ನಾರಾಯಣ (ಬಿಜೆಪಿ), ಕಾಂಗ್ರೆಸ್‌ನ ಕೆ.ಗೋಪಾಲ ಪೂಜಾರಿಗೆ ಸೋಲು (ಕಾಂಗ್ರೆಸ್),

ಈ ಭಾರಿ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 1,90,937 ಮತದಾರರಿದ್ದು 89,162 ಪುರುಷ ಹಾಗೂ 1,01,775 ಮಹಿಳೆಯರಿದ್ದಾರೆ. 39 ಹೋಬಳಿ, 65 ಗ್ರಾಮ ಸೇರಿದಂತೆ ಒಟ್ಟು 240 ಮತಗಟ್ಟೆಗಳಿವೆ.


To Get Latest Election Updates LIKE us on Facebook .