ಕುಂದಾಪುರ ಹಾಗೂ ಬೈಂದೂರು ಕ್ಷೇತ್ರದಲ್ಲಿ ಈ ತನಕ ನಾಮಪತ್ರ ಸಲ್ಲಿಸಿದವರು

ಕುಂದಾಪುರ: ವಿಧಾನಸಭಾ ಚುನಾವಣಾಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗಳ ಪೈಕಿ ಕೆಲವರು ಬೈಂದೂರು ಕ್ಷೇತ್ರದಿಂದ  ಶನಿವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭಿಸಿದ್ದರೇ,  ಕುಂದಾಪುರ ಕ್ಷೇತ್ರದಲ್ಲಿ ಸೋಮವಾರ ವಿವಿಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಕುಂದಾಪುರ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿದವರು

ಹಾಲಾಡಿ ಶ್ರೀನಿವಾಸ್ ಶೆಟ್ಟಿ ನಾಮಪತ್ರ ಸಲ್ಲಿಕೆ

  ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೋಮವಾರ ಕುಂದಾಪುರ ಉಪವಿಭಾಗಾಧಿಕಾರಿ ನಾಮಪತ್ರ ಸಲ್ಲಿಸಿದರು. ನ್ಯಾಯವಾದಿ ಟಿ.ಬಿ.ಶೆಟ್ಟಿ, ಉಮಾನಾಥ ಗಂಗೊಳ್ಳಿ, ದಿನಕರ ಶೆಟ್ಟಿ ಮೊದಲಾದವರು ಜೋತೆಗಿದ್ದರು.

 ಬಿ.ಕಿಶೋರ ಕುಮಾರ್ ನಾಮಪತ್ರ ಸಲ್ಲಿಕೆ


   ಬಿಜೆಪಿ ಅಭ್ಯರ್ಥಿ ಕಿಶೋರ ಕುಮಾರ್ ಸೋಮವಾರಸುಮಾರಿಗೆ ಕುಂದಾಪುರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕುಂದಾಪುರ ಕ್ಷೇತ್ರ ಚುನಾವಣಾಧಿಕಾರಿ ಯೋಗೇಶ್ವರ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು. ರಾಜೇಶ್ ಕಾವೇರಿ, ಮೋಹನದಾಸ್ ಶೆಣೈ, ಸತೀಶ್ ಶೆಟ್ಟಿ ಜೋತೆಗಿದ್ದರು.

 ಮಲ್ಯಾಡಿ ಶಿವರಾಮ ಶೆಟ್ಟಿ ನಾಮಪತ್ರ ಸಲ್ಲಿಕೆ

   ಕಾಂಗ್ರೆಸ್  ಅಭ್ಯರ್ಥಿ  ಮಲ್ಯಾಡಿ ಶಿವರಾಮ ಶೆಟ್ಟಿ ಸೋಮವಾರ 1 ಗಂಟೆ ಸುಮಾರಿಗೆ ಕುಂದಾಪುರ ಉಪವಿಭಾಗಾಧಿಕಾರಿ  ಕಚೇರಿಯಲ್ಲಿ ಕುಂದಾಪುರ ಕ್ಷೇತ್ರ ಚುನಾವಣಾಧಿಕಾರಿ ಯೋಗೇಶ್ವರ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು. ಕಾಂಗ್ರೆಸ್ ಮುಖಂಡರುಗಳು ಜೋತೆಗಿದ್ದರು.

ಬೈಂದೂರು ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿದವರು

 ಕಾಂಗ್ರೆಸ್  ಅಭ್ಯರ್ಥಿ  ಗೋಪಾಲ ಪೂಜಾರಿ ನಾಮಪತ್ರ ಸಲ್ಲಿಕೆ

   ಬೈಂದೂರು ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಗೋಪಾಲ ಪೂಜಾರಿ ಸೋಮವಾರ ತಾಲೂಕು ಪಂಚಾಯತ್ ಕಛೆರಿಯಲ್ಲಿ ಬೈಂದೂರು ಕ್ಷೇತ್ರದ ಚುನಾವಣಾಧಿಕಾರಿ ಡಾ.ಡಿ. ಪ್ರಭುಲಿಂಗರವರಿಗೆ ನಾಮಪತ್ರ ಸಲ್ಲಿಸಿದರು. ವಾಸುದೇವ ಯಡಿಯಾಳ್, ದಿನಕರ ಶೆಟ್ಟಿ, ಬೈಂದೂರು ಕಾಂಗ್ರೆಸ್ ದುರಿಣರು ಜೋತೆಗಿದ್ದರು

ಪಕ್ಷೇತರ ಅಭ್ಯರ್ಥಿ ಲೋಕೇಶ ವೀಠ್ಠಲ್ ನಾಮಪತ್ರ ಸಲ್ಲಿಕೆ
     ಬೈಂದೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ ವೀಠ್ಠಲ್ ಬೋರ್ಕಾರ್ ಬೈಂದೂರು  ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಾದ ಡಾ. ಡಿ. ಪ್ರಭುಲಿಂಗರವರಿಗೆ ನಾಮಪತ್ರವನ್ನು ಸಲ್ಲಿಸಿದಾರೆ.

ಪಕ್ಷೇತರ ಅಭ್ಯರ್ಥಿ ಜಿ.ಎಮ್.ಅಬ್ದುಲ್ ಅಜೀಜ್ ಗುಲ್ವಾಡಿ ನಾಮಪತ್ರ ಸಲ್ಲಿಕೆ
   ಕಳೆದ ಮೂರು ವರ್ಷಗಳ ಕಾಲ ಬೈಂದೂರು ವಲಯದ ಬಿಜೆಪಿ ಅಲ್ಪಸಂಖ್ಯಾತರ ಫಟಕದ ಅಧ್ಯಕ್ಷರಾಗಿ ಕಳೆದ ವಾರ ರಾಜೀನಾಮೆ ನೀಡಿದ್ದ ಜಿ. ಎಂ. ಮೊಹಮ್ಮದ್ ಅಜೀಬ್ ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕುಂದಾಪುರದಲ್ಲಿ  ಅಜೀಬ್ ಅವರು ಚುನಾವಣಾಧಿಕಾರಿ ಯೋಗಿಶ್ವರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಜಿ.ಎಂ ನಾಸಿರ್, ಅಶ್ರಫ್, ಯಾಸಿನ್ ಉಪಸ್ಥಿತರುದ್ದರು.