ಏಪ್ರಿ ಪೂಲ್, ಬೆಟ್ರಿ ಶಲ್ಲ್

   ಹೊಸ ವರುಷು ಕಣ್ಣಂಗೆ ಏಪ್ರಿಲ್ ತಿಂಗ್ಳು ಲಾಯಕೇ. ಹೊಸ ವರ್ಷದ್ ದಿನು ಕೇಕ್-ಪಾಕ್ ಕಟ್ ಮಾಡಿ ಗಮ್ಮತ್ ಮಾಡ್ರೆ, ಏಪ್ರಿಲ್ ಒಂದು ದಿನು ಎಲ್ರರನೂ ಮುರ್ಖರನ್ನಾಯ್ ಮಾಡುದ್. ಚಣ್ಣಕಿಪ್ಪೋತ್ತಿಗೆ ಒಂಥರ ಪೂಲ್ ಮಾಡ್ರೆ, ಈಗ ಬಿಡಿ ಇನ್ನೊಂತರ. ಚಣ್ಣಕಿಪ್ಪೊತ್ತಿಗೆ ಕಾಲಡಿ ಹಾವಿತ್ತ ಕಾಣ್, ತಲಿ ಮೇಲ್  ಹುಲ್ಲಿತ್ತ್ ಕಾಣ್ ಅಂದೇಳುವುದು. ಕಡಿಕೆ ಅವರ್ ಎಲ್ಲಾರು ಕಾಲಡಿ ಕಂಡ್ರೆ, ತಲೆ ಮುಟ್ಟಿ ಕಂಡ್ರೆ ಎಪ್ರಿ ಪೂಲ್ ಬೆಟ್ರಿ ಶಲ್ಲ್ ಅಂಬುದ್. ಅಜ್ಜಿ ಹತ್ರ ಹೋಯ್, ಅಜ್ಜಯ್ಯ ಕರೀತ್ರ ಕಾಣಿ ಅಂಬುದ್. ಅಜ್ಜಿ ಹೋಯ್ ಅಜ್ಜನ್ ಹತ್ರ, ಹೋಯ್ ಎಂತಕ್ ಕರದ್ದೇ ಕೇಂಡ್ರೆ ಅಜ್ಜಯ್ಯ ನಾನ್ ಕರೀಲ್ಯೆ ಅಂತ್ರ. ಅಷ್ಟೊತ್ತಿಗ್ ನಾವ್ ಅಜ್ಜಿ ಹತ್ರ ಏಪ್ರಿ ಪೂಲ್ ಏಪ್ರಿ ಪೂಲ್ ಅಂಬುದ್. ಅಜ್ಜಿ ಎನ್ ಸುಮ್ಮನೀರ್ತಾರಾ, ಮಕ್ಕಳಿಗೆ ಅಬ್ಬಿ ಕೊಂಗಾಟ ಜಾಸ್ತಿ ಆಯ್ತು ಅಂದೇಳಿ ಬೈಯ್ಯುದ್. ಅಮ್ಮಾ, ಅಪ್ಪಾ, ಅಕ್ಕಾ, ಅಣ್ಣಾ, ಆಚಿ, ಈಚಿ ಮನೆಯರನೆಲ್ಲಾ ಪೂಲ್ ಮಾಡುದ್, ಅವ್ರಿಗೆ ಪೂಲ್ ಮಾಡುಕ್ ಹೋಯಿ ನಾವೇ ಪೂಲ್ ಆಪುದು ಇರತ್ತ್ ಬಿಡಿ.
     ಶಾಲಿಗ್ ಹೋಯಿ ಅಲ್ಲೂ ನಮ್ಮ ಫ್ರೆಂಡ್‍ಗಳನಲ್ಲಾ ಪೂಲ್ ಮಾಡುದ್. ಈಗ ಬಿಡಿ ಮಾರ್ರೆ ಮೊಬೈಲ್ ಬಂದೀತಲಾ, ಪೂಲ್ ಮಾಡುದ್ ನಮ್ಮನ್ನು ಯಾರಾರು ಪೂಲ್ ಮಾಡ್ರೆ, ಅವರ್‍ನಾ ಪೂಲ್ ಮಾಡುವರಿಗೆ ಬಿಡೋದೇ ಇಲ್ಲಾ. ಯಾರಾನಾರೂ ಪೂಲ್ ಮಾಡಿ, ಏಪ್ರಿ ಪೂಲ್ ಬೆಟ್ರಿ ಶಲ್ಲ್ ಅಂದೇಳಿ ಕೊಣುಕ್ ಎಷ್ಟ್ ಲಾಯಕ್ ಆತ್ತೆ. ಇದ್ ಒಂಥರಾ ಹಬ್ಬ ಇದ್ದಂಗೆ. ಈ ಸಲ ನೀವ್ ಎಷ್ಟ್ ಜನೀನ ಪೂಲ್ ಮಾಡ್ತ್ರಿ? ಎಷ್ಟ ಜನ ನಿಮ್ಮನ್ನು ಪೂಲ್ ಮಾಡ್ತ್ರ  ಕಾಂಬಾ ಅಲ್ದಾ... 
ರೂಪಾ ಶೆಟ್ಟಿ, ಶಂಕರನಾರಾಯಣ