ಕುಂದಾಪುರ ತಾಲೂಕಿನಲ್ಲಿ ಒಟ್ಟು 23 ಮುಂದಿ ನಾಮಪತ್ರ ಸಲ್ಲಿಕೆ


ಕುಂದಾಪುರ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಕುಂದಾಪುರ ತಾಲೂಕಿನಲ್ಲಿ 14 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. 
    ಬೈಂದೂರು ಕ್ಷೇತ್ರದ ಬಿ.ಎಂ. ಸುಕುಮಾರ ಶೆಟ್ಟಿ (ಬಿಜೆಪಿ), ನವೀನ್‌ಚಂದ್ರ (ಕೆಜೆಪಿ), ಸುರಯ್ಯ ಭಾನು (ಜೆಡಿಎಸ್) ಎಚ್. ಸುರೇಶ್ ಪೂಜಾರಿ (ಪಕ್ಷೇತರ), ಮಂಜುನಾಥ ಕೆ. (ಜೆಡಿಯು), ದಿವಾಕರ ಕೋಟ್ಯಾನ್ (ಪಕ್ಷೇತರ) ಮತ್ತು ಅಬ್ದುಲ್ ಅಜೀಜ್ (ಪಕ್ಷೇತರ) ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬೈಂದೂರಿನಲ್ಲಿ ಈವರೆಗೆ 14 ಅಭ್ಯರ್ಥಿಗಳು 29 ನಾಮಪತ್ರ ಸಲ್ಲಿಸಿದ್ದಾರೆ. 
      ಕುಂದಾಪುರ ಕ್ಷೇತ್ರದ ಇಬ್ರಾಹಿಂ (ಬಿಎಸ್‌ಆರ್‌ಪಿ), ಕೃಷ್ಣ ಭರತ್‌ಕಲ್(ಜೆಡಿಯು), ಕಿಶೋರ್ (ಬಿಜೆಪಿ), ಹಿರಿಯಣ್ಣ (ಪಕ್ಷೇತರ), ವಿಶ್ವನಾಥ್ (ಪಕ್ಷೇತರ), ಶ್ರೀನಿವಾಸ ಹರಿಜನ (ಪಕ್ಷೇತರ), ಮಂಜುನಾಥ್ (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ. ಕುಂದಾಪುರದಲ್ಲಿ 9 ಮಂದಿ 19 ನಾಮಪತ್ರ ಸಲ್ಲಿಸಿದ್ದಾರೆ. 
     ಏ. 18ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏ. 20ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ.