ಕುಂದಾಪುರದಲ್ಲಿ ಹಾಲಾಡಿ, ಬೈಂದೂರಿನಲ್ಲಿ ಗೋಪಾಲ್ ಪೂಜಾರಿಗೆ ಜಯ


ಕುಂದಾಪುರ/ಬೈಂದೂರು: ಕುಂದಾಪುರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 25,530 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
        ಕಾಂಗ್ರೆಸ್‌, ಬಿ.ಜೆ.ಪಿ., ಜೆ.ಡಿ.(ಯು) ಹಾಗೂ ಪಕ್ಷೇತರರು ಸೇರಿದಂತೆ 6 ಅಭ್ಯರ್ಥಿಗಳು ಕಣದಲ್ಲಿದ್ದ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಹಾಲಾಡಿ ಮತ್ತು ಇತರೆ ಪಕ್ಷಗಳ ವಿರುದ್ಧ ಹಣಾಹಣಿ ಕತೂಹಲ ಮೂಡಿಸಿತ್ತು.
   ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ  28,723 ಮತಗಳಿಂದ ಜಯಭೇರಿ ಸಾಧಿಸಿದ್ದಾರೆ. 
ಬೈಂದೂರು ಪರಿಸರದಲ್ಲಿ  ಕಾಂಗ್ರೆಸ್ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.