ಕುಂದಾಪ್ರ ಡಾಟ್ ಕಾಂ ಸಮೀಕ್ಷೆ: ಕುಂದಾಪುರದಲ್ಲಿ ಆಟೋ ಏರಿ, ಬೈಂದೂರಿನಲ್ಲಿ ಕೈಗೆ ಜೈ ಹೇಳಿರುವ ಮತದಾರ


ಕುಂದಾಪುರ: ವಿಧಾನಸಭಾ ಮಹಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು ಮತದಾರರು ಓಟಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾರಿಗೆ ಎಷ್ಟು ಓಟು ಬಿದ್ದಿರಬಹುದು, ಯಾರು ಎಷ್ಟು ಅಂತರದಿಂದ ಗೆಲ್ಲಬಹುದು, ಮತದಾರ ಪ್ರಭು ಯಾರಿಗೆ ಓಲಿದಿದ್ದಾನೆ ಎಂಬುದರ ಕುರಿತು ಬಿಸಿ ಬಿಸಿ ಚರ್ಚೆ, ಬೆಟ್ಟಿಂಗ್ ಭರಾಟೆ ತಾಲೂಕಿನಲ್ಲಿ ಜೋರಾಗಿಯೇ ನಡಿಯುತ್ತಿದೆ.
     ಕಳೆದ ಭಾರಿ ಬಿಜೆಪಿಯ ತೆಕ್ಕೆಯಲ್ಲಿದ್ದ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಈ ಭಾರಿ ಯಾರ ಪಾಲಾಗಲಿದೆ ಎಂಬ ಕುತೂಹಲ ಮನೆಮಾಡಿದ್ದು ಕ್ಷೇತ್ರದ ಮತದಾರರು ಫಲಿತಾಂಶಕ್ಕಾಗಿ ಕಾತರರಾಗಿದ್ದಾರೆ.

ಕುಂದಾಪ್ರ ಡಾಟ್ ಕಾಂ ಸಮೀಕ್ಷೆ
       ಈ ಭಾರಿ ಯಾರು ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದರ ಕುರಿತು ಕುಂದಾಪ್ರ ಡಾಟ್ ಕಾಂ ಸಾಮಾಜಿಕ ತಾಣಗಳು ಹಾಗೂ ಮೌಕಿಕ ಸಂದರ್ಶನದ ಮೂಲಕ ಸಮೀಕ್ಷೆಯೊಂದನ್ನು ನಡೆಸಿತ್ತು.
           ಚುನಾವಣಾ ಪೂರ್ವ 48 ಗಂಟೆಗೂ ಮೊದಲು ಹಾಗೂ ಚುನಾವಣೋತ್ತರ ನಡೆದ ಸಮೀಕ್ಷೆಯಲ್ಲಿ ಮತದಾರ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕದೇ ಮಾಜಿ ಶಾಸಕರುಗಳನ್ನೇ ಆಯ್ಕೆ ಮಾಡುವತ್ತ ಒಲವು ತೋರಿದ್ದು ಕಂಡುಬಂದಿತ್ತು.

ಕುಂದಾಪುರ ವಿಧಾನಸಭಾ ಕ್ಷೇತ್ರ:
       ಜಿಲ್ಲೆಯಲ್ಲಿ ಗಮನ ಸೆಳೆದಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕುಂದಾಪ್ರ ಡಾಟ್ ಕಾಂ ನಡೆಸಿದ ಸಮೀಕ್ಷೆಯಲ್ಲಿ ಮತದಾರರು ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿಯ ಪರ ಸ್ವಷ್ಟ ಒಲವು ತೋರಿದ್ದು, ಹಾಲಾಡಿ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ.
                 ಸಮೀಕ್ಷೆ: ಶೇಕಡವಾರು ಲೆಕ್ಕಾಚಾರ 
                                   ಅಭ್ಯರ್ಥಿ               ಗಳಿಸಬಹುದಾದ ಮತಗಳು
ಹಾಲಾಡಿ ಶ್ರೀನಿವಾಸ ಶೆಟ್ಟಿ        49
ಕಿಶೋರ್ ಕುಮಾರ್                 25
ಮಲ್ಯಾಡಿ ಶಿವರಾಮ ಶೆಟ್ಟಿ         19
ಇತರೆ                                    7

ಬೈಂದೂರು ವಿಧಾನಸಭಾ ಕ್ಷೇತ್ರ:
ಭಾರಿ ಜಿದ್ದಾ-ಜಿದ್ದಿಯ ಸೆಣಸಾಟವಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮತದಾರರು ಕಾಂಗ್ರೇಸ ಅಭ್ಯರ್ಥಿ ಕೆ. ಗೋಪಾಲ್ ಪೂಜಾರಿ ಪರ ಹೆಚ್ಚಿನ ಒಲವು ತೋರಿದ್ದು ಕಂಡು ಬಂತಾದರೂ  ಫಲಿತಾಂಶದ ಬಳಿಕವಷ್ಡೇ ಮತದಾರ ಯಾರಿಗೆ ಜೈ ಅಂದಿದ್ದಾನೆ ಎಂಬುದು ತಿಳಿಯಲಿದೆ.
            ಸಮೀಕ್ಷೆ: ಶೇಕಡವಾರು ಲೆಕ್ಕಾಚಾರ 
                                 ಅಭ್ಯರ್ಥಿ                 ಗಳಿಸಬಹುದಾದ ಮತಗಳು
ಕೆ. ಗೋಪಾಲ್ ಪೂಜಾರಿ                50 
ಬಿ. ಎಂ. ಸುಕುಮಾರ್ ಶೆಟ್ಟಿ            41
ಇತರೆ                                          9

Disclaimer: These are all the approximate numbers give in percentage. this may varied and might be different from original data. Counting will be made on 8th of may