ನನ್ ಉಳ್ಸಕಂಬಕ್ಕಾತ್ತಾ ...

         ರಣ್ರಿ..... ಆರಾಮೇನ್ರಿ? ದೂರ ಹೊಂಟಿರಿ? .... ಆಹಾ ಎನ್ ಜನ ಮರ್ರೆ ನೀವ್? ಈ ಭಾಷೆ ಧಾರವಾಡ, ಬಯಲ್ಸೀಮೆ ಬದಿದ್ ಅಂತ್ ಬೇಗ್ ಕಂಡ ಹಿಡುಕಾತ್, ಈ ಭಾಷೇಂಗೆ ಮಾತಾಡ್ರೆ ಕೇಂಬಕೆ ಖುಷಿ ಆತ್ ಅಲ್ದ? ಆರೆ ನನ್ ಬಳಸುದ್ ಕೇಂಡ್ ಕೂಡ್ಲೆ ನಗ್ತ್ರಿ. ನೀವ್ ಹೀಂಗ್ ನಗಾಡಿ ನನ್ ಬದಕ್ಕನೇ ಹಾಳ್ ಮಾಡಿ ಬಿಟ್ಟೀರಿ ಅಲ್ದ? ನಮ್ ಜನ ನನ್ ಮಾತಾಡೋದ್ನೆ ಬಿಟ್ಟೀರ್...... ಹೀಂಗೆ ಆರೆ ನಾನ್ ಬದ್ದುಕೆ ಕಷ್ಟ ಆತ್ ಗೊತಿತಾ? ನಿಮ್ಗೆ ಅದ್ರ್ ಬಗ್ಗೆ ಯೋಚನೆಯೇ ಇಲ್ಲ ಅಲ್ದ....? 
       ನಾನ್ ಸ್ವಲ್ಪಾರೂ ನೆನ್‍ಪ್ಪಿತ್ ಅನ್ಕಂತೆ...... ನಾನ್ ಹುಟ್ಟಿ ಬೆಳೆದ್ ಎಲ್ಲಾ ಕುಂದಾಪುರದಂಗೆ.... ಆಗಳ್ ನಾನ್ ಎಲ್ಲಾ ಮನಿಯಾಂಗೆ ಚಣ್ಣ ಮಕ್ಕಳಿಂದ್ ಹಲ್ಲಿಲ್ದವರ್ ಬಾಯಲ್ ಎಷ್ಟ್ ಲಾಯ್ಕ ಆಡ್ಕಂಡಿದೆ ಗೊತ್ತಿತಾ? ನನ್ ಬಿಟ್ ಅವ್ರ ಬೇರೆ ಯಾವ್ ಭಾಷೆಂಗಾ ಮಾತಾಡ್ತಿರ್ಲ. ಹೊಗ್ಳುಕು ನಾನೆ ಬೈಯುಕು ನಾನೆ ಆಯ್ದೆ..... ನನ್ ಭಾಷೆಂಗೆ ಎಷ್ಟ್ ಲಾಯ್ಕ ಮಾಡಿ ಹಾಡಿ ಹಾಡ್ತಿದ್ರು ಕೇಂಬುಕೆ ಎಯ್ಡ್ ಕಿಮಿ ಸಾಲ್ದ್. ನಂಗೆ ವಯಸ್ಕಾತಾ ಬಂದಿತ್ ಹಾಂಗಾಯಿ ನಂಗೆ ಸಮಾ ನೆನಪಿಲ್ದೆ ನಮ್ಮ್ ಮನಿ ಮಕ್ಳ ಎಷ್ಟ್ ಲಾಯ್ಕ್ ಮಾಡಿ ಹಾಡ್ತೋ ಗೋತಿತಾ? ಇನ್ ನನ್ ಮಕ್ಳಿಗೆ ಇಲ್ಲಿ ಕೆಲ್ಸ ಇಲ್ದೆ ನಾವ್ ಯಾರ್‍ಗೂ ಬೇಡ ಅಂದ್ ಮೇಲೆ ನಾವ್ ಇಪ್ಪ್ದು ದಂಡ ಅಲ್ದ? ಹೊಸ ನೀರ್ ಬಂದಾಗ್ಳಿಕೆ ಹಳೆ ನೀರ್  ಮರೆತ್ರ್ ಅಂದೇಳಿ ಒಂದ್ ಗಾದೆ ಇತ್ತ್ ಕೇಂಡೀರಿಯಾ? ಹಾಂಗೆ ಆಯ್ತ್ ನಮ್ಮ್ ಕಥೆ. ನಮ್ ಜನಕ್ಕೆ ನನ್ ಬಳ್ಸುಕೆ ನಾಚಿಕೆ ಆತ್ತಂಬ್ರು. ಹಂಗಾರೆ ಉಳ್ದ್ ಭಾಷೆಯಂಗೆ ನಾನ್ ಸೇರ್ತೆ  ಅಲ್ದ? 

ನಾಚ್ಕೆ ಎಂತಾಕೆ?  
       ಮೊನ್ನೆ ಮೊನ್ನೆ ನೆಡದ್ ಒಂದ್ ಘಟನೆ ಹೇಳ್ತೆ ಕೇಣಿ. ನಾನ್ ಹೀಂಗೆ ಒಂದ್ ಮನೆ ಮುಂದೆ ಹಾದ್ ಹೋಪ್ ಹೊತಿಗೆ ಒಂದ್ ಮನೇಂಗೆ ಜೋರ್ ಶಬ್ದ ಕೇಂತ್. ಎಂಥ ಕಾಂಬ ಅಂದೇಳಿ ಹತ್ರ ಹೋದ್ನೆ. ಮನೆ ಮಂದಿ ಎಲ್ರು ಟಿ.ವಿ. ಕಾಂತ್ ಕೂತಿದ್ರ್. ಶಬ್ದ ಕೊಟ್ಟಿದ್ ಕೇಂಡ್ರೆ ಯಾರಿಗ್ ಕಿಮಿ ಕೇಂತಿಲಪ್ಪ ಅಂತ್ ಅಂದ್ಕ್ಣಕ್. ಅಷ್ಟ ಗಟ್ಟಿ ಶಬ್ದ ಕೊಟ್ಟೀರ್. ಹಂಗಾರೆ ಒಳ್ಳೆ ಕಾಮಿಡಿ ಚಿತ್ರ ಹಾಕಿರ್ಕ್ ಅಂತ ಅನ್ಕಂಡ್ ಅಲ್ಲಿಂದ ಹೊರಟ್ನೆ. ಅಷ್ಟ್ ಹೊತ್ಗೆ ಯಾರೋ ಧಾರಾವಾಡ ಭಾಷೇಂಗೆ ಮಾತಾಡ್‍ತ್ತಿದ್‍ದ್ ಕೇಂತ್. ಅದೇ ಭಾಷೇಂಗೆ ಕಥೆ ಹೇಳಿ ನಗ್ಸ್‍ತಿದ್ದ. ಅದ್ನಕೇಂಡ್ ಮನೆ ಮಂದಿಯೆಲ್ಲಾ ಬಿದ್ ಬಿದ್ ನಗ್ತಿದ್ರ್. ಆಗ್ ನಾನ್ ಅನ್ಕಂಡೆ. ನನ್ ಹಿಂಗೆ ಬಳ್ಸಿರೆ ನಾನ್ ಬೇರೆ ಭಾಷೆಗಿಂತ ಪ್ರಸಿದ್ದಿಯಾಗ್ತಿದ್ದೆ. ಆರೆ ನನ್ ಉಳ್ಸೋ ಜನಕ್ಕೆ ನಾನ್ ಬೇಡ್ವಾಯಿಪ್ ಹೊತ್ಗೆ ಎಂಥ ಮಾಡ್ಕಾತ್ತ್ ಅಲ್ದ? 
ನಮ್ಮ್ ಜನ್ಗಳ್ಗೆ ಹೊಸ ಭಾಷೆ ಕಲುಕಾತಂಬ್ರು. ದುಡ್ಡ್ ಕೊಟ್ಟ್ ಬೇರೆ ಭಾಷೆ ಕಲಿಯುಕೆ, ಸೇರುಕಾತಂಬ್ರು. ಆರೆ ಅವ್ರ್ ಹತ್ರ್ ಇಷ್ಟೋ ನಾನ್ ಬೇಡ ಅಂತಿದ್ರು. ಹೊಸ ಭಾಷೆ ಕಲಿಯು ಗೌಜಂಗೆ ನನ್ ಮರ್ತೆ ಬಿಟ್ಟಿರ್. ಹೀಂಗೆ ಆರೆ ಮುಂದಿನ್ ದಿನದಂಗೆ ಎಯ್ಡ್ ಪದ ಬಳ್ಸುಕ್ಕಾತ್ತಾ ಕಾಣಿ. ಏನಂತ್ರಿ?
ನನ್ ಬದ್ಕ್ ನಿಮ್ಮ್ ಕೈಯಂಗಿಟ್ಟಿದೆ. ಇನ್ ನಿಗಳಿಗೆ ಬಿಟ್ಟಿದ್. ಆದಷ್ಟು ನನ್ ಉಳ್ಸಕಂಬ ಪ್ರಯತ್ನ ಮಾಡಿ. ಆಗ್ದ.....? ನೀವ್ ಮನ್ಸ್ ಮಾಡ್ರೆ ಏನ್ ಬೇಕಾರ್ ಮಾಡುಕ್ಕಾತ್ ಅಲ್ದ......? 
- ಆಶ್ರಿತಾ. ಜಿ        

Kundapura Kannada, Kannada, Kundapra Kannada, Special language in Udupi District, Kundapura kannada News, Kundapura Kannada Website, Kundapura Portal, Kundapurians Portal, Kundapurians, Portal for the People of Kundapura, Kundapura Kannada, News Kundapura, Portal, Kundapura on wikipedia, go
anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura kannada, kundapura kannada anaka, kundapura kannada remix
 anaka, anakavaadu, ಅಣಕ, ಅಣಕವಾಡು, ಕನ್ನಡ ರಿಮಿಕ್ಸ್, ಕುಂದಾಪುರ, ಕುಂದಾಪುರ ಕನ್ನಡ, ಕುಂದಾಪುರ ಕನ್ನಡ ಅಣಕ, ಕುಂದಾಪುರ ಚುನಾವಣೆ 2013, ಕುಂದಾಪ್ರ, ಕುಂದಾಪ್ರ ಕನ್ನಡ, ಕುಂದಾಪ್ರ ಕನ್ನಡ ಅಣಕ, ಕುಂದಾಪ್ರ ಕನ್ನಡ ರಿಮಿಕ್ಸ್, ಗಮ್ಮತ್ ಇತ್ತ್ ಕಾಣಿ..., ಹಾಲಾಡಿ ಶ್ರೀನಿವಾಸ ಶೆಟ್ಟಿ, drama kannada film, halady srinivas shetty, kannada remix, kundaapra kannada, kundaapra kannada anaka, kundapra, kundapra kannada, kundapur, kundapur kannada, kundapura, kundapura eleogle, bing search