ಉಡುಪಿ: ಪಿಯುಸಿಯಲ್ಲಿ ಪ್ರಥಮ; ಎಸ್ಸೆಸ್ಸೆಲ್ಸಿಯಲ್ಲಿ ತೃತೀಯ


ಉಡುಪಿ/ಕುಂದಾಪುರ: ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಫಟ್ಟವಾದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನದಲ್ಲಿದ್ದರೇ, ಎಸ್ಸೆಸ್ಸೆಲ್ಸಿಯಲ್ಲಿ ಫಲಿತಾಂಶದಲ್ಲಿ ತೃತೀಯ ಸ್ಥಾನಕ್ಕಿಳಿದಿದೆ. ಕುಂದಾಪುರ ತಾಲೂಕಿನ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಈ ಭಾರಿ ಉತ್ತಮ ಫಲಿತಾಂಶ ದಾಖಲಾಗಿದೆ.
   ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಳೆದ ವರ್ಷ ಎರಡನೇಯ ಸ್ಥಾನ ದೊರಕಿ ಪ್ರಥಮ ಸ್ಥಾನದ ಹ್ಯಾಟ್ರಿಕ್‌ನಿಂದ ವಂಚಿತವಾಗಿ ಸ್ವಲ್ಪ ನಿರಾಶೆ ಉಂಟಾಗಿದ್ದ ಉಡುಪಿ ಜಿಲ್ಲೆಗೆ ಈ ವರ್ಷ ಪ್ರಥಮ ಸ್ಥಾನ ಮತ್ತೆ ದೊರೆತಿದೆ. 2010, 2011ರಲ್ಲಿ ದೊರೆತ ಮೊದಲ ಸ್ಥಾನವನ್ನು 2013ರಲ್ಲಿ ಮತ್ತೆ ಪಡೆದುಕೊಂಡ ಸಂತೃಪ್ತಿಯಲ್ಲಿ ಉಡುಪಿ ಜಿಲ್ಲೆ ಇದೆ.
      2011ರಲ್ಲಿ ಜಿಲ್ಲೆಯಲ್ಲಿ ಶೇ. 87.14, 2012ರಲ್ಲಿ ಶೇ. 85.32 ಫ‌ಲಿತಾಂಶ ದಾಖಲಾಗಿತ್ತು. ಈ ಬಾರಿ ಸರಾಸರಿಯಲ್ಲಿ ಶೇ. 89.76, ಪ್ರಥಮ ಬಾರಿ ಪರೀಕ್ಷಾರ್ಥಿಗಳಲ್ಲಿ (ಫ್ರೆಶರ್) ಶೇ. 92.72 ಫ‌ಲಿತಾಂಶ ಬಂದಿದೆ. ಎರಡೂ ವಿಭಾಗಗಳಲ್ಲಿಯೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿ ನಿಂತಿದೆ.
      2006ರಿಂದ ಈವರೆಗೂ ಕರಾವಳಿ ಜಿಲ್ಲೆಗಳೊಳಗೇ ಪ್ರಥಮ ಸ್ಥಾನ ಗಿರಕಿ ಹೊಡೆಯುತ್ತಿದೆ. ಹೋದ ವರ್ಷ ಪ್ರಥಮ ಸ್ಥಾನ ಪಡೆದ ದ.ಕ. ಜಿಲ್ಲೆಗೆ ಈ ಬಾರಿ ದ್ವಿತೀಯ ಸ್ಥಾನ ಪ್ರಾಪ್ತವಾಗಿದೆ.

ವಕ್ವಾಡಿಯ ಗುರುಕುಲ ಪ.ಪೂ. ಕಾಲೇಜು - ಶೇ. 100
         ವಕ್ವಾಡಿಯ ಗುರುಕುಲ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಗಳಿಸಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಜತೆ ಮ್ಯಾನೇಜಿಂಗ್‌ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 15 ವಿದ್ಯಾರ್ಥಿಗಳು ಪ್ರಥಮ ವಿಭಾಗದಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್‌.ಎನ್‌.ಶೆಟ್ಟಿ ಪಿ.ಯು. ಕಾಲೇಜು - ಶೇ. 100
       ಕುಂದಾಪುರದ ಆರ್‌.ಎನ್‌. ಶೆಟ್ಟಿ ಪಿಯು ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 74 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 183 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ನವೀನ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

***********
        ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ವರ್ಷ ಶೇ. 89.53 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಶೇ. 87.68 ಸರಾಸರಿಯೊಂದಿಗೆ ತೃತೀಯ ಸ್ಥಾನಕ್ಕಿಳಿದಿದೆ. 

      ಪರೀಕ್ಷೆಗೆ ಹಾಜರಾಗಿದ್ದ 16,133 (ಬಾಲಕರು 8,092, ಬಾಲಕಿಯರು 8,041) ವಿದ್ಯಾರ್ಥಿಗಳಲ್ಲಿ 14,145 (ಬಾಲಕರು 6,725, ಬಾಲಕಿಯರು 7,420) ಮಂದಿ ಉತ್ತೀರ್ಣರಾಗಿದ್ದಾರೆ. ಶಾಲೆಗೆ ಹಾಜರಾದ (ರೆಗ್ಯುಲರ್ ಫ್ರೆಶ್) ವಿದ್ಯಾರ್ಥಿಗಳ ಉತ್ತೀರ್ಣತೆಯಲ್ಲಿ ಉಡುಪಿ ಜಿಲ್ಲೆಯೇ ಪ್ರಥಮ. ಪರೀಕ್ಷೆಗೆ ಹಾಜರಾದ 15,323 ಶಾಲೆ ವಿದ್ಯಾರ್ಥಿಗಳಲ್ಲಿ 14,007 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 91.41). ಖಾಸಗಿಯಾಗಿ ಪರೀಕ್ಷೆ ಬರೆದ 810 ವಿದ್ಯಾರ್ಥಿಗಳಲ್ಲಿ 138 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 17.03). 

ನಗರ/ಗ್ರಾಮೀಣ: ನಗರ ಪ್ರದೇಶದಿಂದ ಪರೀಕ್ಷೆಗೆ ಹಾಜರಾದ 3,082 ವಿದ್ಯಾರ್ಥಿಗಳಲ್ಲಿ 2,765 ಮಂದಿ (ಶೇ. 89.71) ಹಾಗೂ ಗ್ರಾಮೀಣ ಪ್ರದೇಶದ 13,051 ರಲ್ಲಿ 11,380 (ಶೇ.87.19) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರಕಾರಿ ಶಾಲೆಗಳಿಂದ ಹಾಜರಾದ 7,668 ವಿದ್ಯಾರ್ಥಿಗಳಲ್ಲಿ 6,388 ಮಂದಿ (ಶೇ.83.30), ಅನುದಾನಿತ ಶಾಲೆಗಳಿಂದ ಹಾಜರಾದ 4,727 ವಿದ್ಯಾರ್ಥಿಗಳಲ್ಲಿ 4,209 ಮಂದಿ (ಶೇ.83.30) ಹಾಗೂ ಅನುದಾನ ರಹಿತ ಶಾಲೆಗಳಿಂದ ಹಾಜರಾದ 3,738 ವಿದ್ಯಾರ್ಥಿಗಳಲ್ಲಿ 3,548 ಮಂದಿ (ಶೇ.94.92) ಉತ್ತೀರ್ಣರಾಗಿದ್ದಾರೆ. 

 ಕನ್ನಡ ಮಾಧ್ಯಮ/ಆಂಗ್ಲ ಮಾಧ್ಯಮ: ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 11,613 ವಿದ್ಯಾರ್ಥಿಗಳಲ್ಲಿ 9,779 ಮಂದಿ (ಶೇ.84.20), ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 4,504 ವಿದ್ಯಾರ್ಥಿಗಳಲ್ಲಿ 4,350 (ಶೇ. 96.58) ಮಂದಿ ಉತ್ತೀರ್ಣರಾಗಿದ್ದಾರೆ.

ಕೋಟಾ ವಿವೇಕ ಪ್ರೌಢಶಾಲೆಯ ವಿದ್ಯಾರ್ಥಿನಿ ಮಹಿಮಾ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ:
  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಮಹಿಮಾ ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 98, ತೃತೀಯ ಭಾಷೆ ಕನ್ನಡದಲ್ಲಿ 99, ಗಣಿತದಲ್ಲಿ 99, ವಿಜ್ಞಾನದಲ್ಲಿ 98, ಸಮಾಜ ವಿಜ್ಞಾನದಲ್ಲಿ 100, ಒಟ್ಟು ಅಂಕಗಳು 619ನ್ನು ಪಡೆದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಶ್ರೇಷ್ಟ ಸಾಧನೆಯನ್ನು ದಾಖಲಿಸಿರುತ್ತಾಳೆ.

ಕುಂದಾಪುರದ ಶ್ರೀ ವೆಂಕಟರಮಣ ಶಾಲೆಗೆ 100% ಫಲಿತಾಂಶ:
       ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ 127 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ 100 ಶೇಕಡಾ ಫಲಿತಾಂಶ ಗಳಿಸಿದ್ದಾರೆ.  ಇವರಲ್ಲಿ 53 ಮಂದಿ ವಿಶಿಷ್ಟ ದರ್ಜೆಯಲ್ಲಿಯೂ 60 ಪ್ರಥಮ ದರ್ಜೆಯಲ್ಲಿಯೂ   11 ಮಂದಿ ದ್ವಿತೀಯ ದರ್ಜೆಯಲ್ಲಿಯೂ 3 ಮಂದಿ ತೃತೀಯ ದರ್ಜೆಯಲ್ಲಿಯೂ ಉತ್ತೀರ್ಣರಾಗಿದ್ದಾರೆ.
       ಸುಮೇದಾ ಶೆಣೈ 615 ಅಂಕಗಳನ್ನು  ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.  609 ಅಂಕಗಳನ್ನು ಗಳಿಸಿ ಸುದೀಪ್ತಿ ಪ್ರಮೋದ್ ನಾಯಕ್  ಹಾಗೂ ಸಹನಾ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.  607 ಅಂಕಗಳನ್ನು ಗಳಿಸಿ ಚೈತ್ರಾ ಪೈ ಯವರು ತೃತೀಯ ಸ್ಥಾನಗಳಿಸಿದ್ದಾರೆ.  ಇವರೆಲ್ಲರನ್ನು ಆಡಳಿತ ಮಂಡಳಿ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

ಸೇವಾ ಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ – ಶಾಲೆಗೆ 100 % ಪಲಿತಾಂಶ
        7 ವಿದ್ಯಾರ್ಥಿಗಳು ಡಿಸ್ಟ್ರಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದು 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸುರಜ್ ಐತಾಳ್- 577, ಪ್ರಜ್ವಲಾ ಎ.ಪಿ.- 563, ಸಭ್ಯಾ- 557, ಅಶ್ವಿತಾ ಶೆಟ್ಟಿ – 551, ಕೆ. ಶ್ರೀಶಾ ಕುಮಾರ್- 549,
ಆದಿತ್ಯಾಆರ್.ಹಂದೆ- 548, ಶುಭಮ್ – 533



SSLC, PUC Results in Udupi Districct,
Kundapura schools and colleges SSLC, PUC Results announced, SSLC and PUC Results of kundapura school and colleges,