ಆಧಾರ್- ನಿಮ್ಮ ಅತೀ ಮುಖ್ಯ ದಾಖಲೆಗಳಲ್ಲೊಂದು.

         ಆಧಾರ್ ಕಾರ್ಡ್ ನೊಂದಣಿ ಪ್ರಕ್ರಿಯೆ ಮತ್ತೆ ಆರಂಭಗೊಂಡು ಕೆಲ ದಿನಗಳೇ ಕಳೆದಿವೆ. ಈ ಗುರುತಿನ ಚೀಟಿಗೆ ಮಹತ್ವವೇ ಇಲ್ಲ. ಅದನ್ನೆಲ್ಲಾ ಏಕೆ ಮಾಡಿಸಬೇಕು ಅಂತ ಕಾಲಹರಣ ಮಾಡಬೇಡಿ. ಬೇಗನೆ ಆಧಾರ್ ಕಾರ್ಡ್ ಮಾಡಿಸಿಟ್ಟುಕೊಳ್ಳುವುದು ಓಳ್ಳೆಯದು. ಇದರಲ್ಲಿನ ವಿಳಾಸವನ್ನು ಇನ್ನು ಮುಂದೆ ಅಡ್ರೆಸ್ ಪ್ರೂಫ್/ಗುರುತಿನ ಚೀಟಿಯಾಗಿ ಬಳಸಬಹುದು. ಮಾತ್ರವಲ್ಲ, ಮನೆಗೆ ವಿತರಣೆಯಾಗುವ ಅಡುಗೆ ಸಿಲಿಂಡರ್ ಸಬ್ಸಿಡಿಯನ್ನು ಪಡೆಯುವುದರಿಂದ ಹಿಡಿದು ಬ್ಯಾಂಕ್ ಹಾಗೂ ಸರಕಾರದ ಇನ್ನೂ ಕೆಲ ಸೌಲಭ್ಯಗಳ ಫಲಾನುಭವಿಯಾಗಲು ಈ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಹಾಗಾಗಿ ಇಂದೇ ಆಧಾರ್ ಕಾರ್ಡ್ ಮಾಡಿಸಿಟ್ಟುಕೊಳ್ಳಿ. ದೇಶದ ನೂರು ಕೋಟಿಗೂ ಹೆಚ್ಚು ಮಂದಿಗೆ ಆಧಾರ್ ಕಾರ್ಡ್ ಅನ್ನು ವಿತರಿಸುವ ಹೊಣೆಹೊತ್ತಿರುವ Unique Identification Authority of India (UIDAI) ಪ್ರಾಧಿಕಾರವೇ ಇದನ್ನು ಸ್ಪಷ್ಟಪಡಿಸಿದೆ. Information Technology Act-2000 ಅನುಸಾರ ವಿದ್ಯುನ್ಮಾನ ದಾಖಲಾತಿಗಳನ್ನು ಕಾನೂನಿನಡಿ ಗುರುತಿಸಲು ಅವಕಾಶವಿರುದರಿಂದ ಆಧಾರ್ ಕಾರ್ಡಿಗೂ ಈ ಮಾನ್ಯತೆ ಪ್ರಾಪ್ತಿಯಾಗಿದೆ. 

ಆಧಾರ್  ಆನ್ ಲೈನ್ ನೋಂದಣಿ ಮಾಡಿಸುವುದು ಹೇಗೆ?
      ಆಧಾರ್ ಕಾರ್ಡ್ ನೋಂದಣಿ ಮಾಡಿಸುವುದು ಉಚಿತ. ಯಾವುದೇ ನೋಂದಣಿ ಕೇಂದ್ರಕ್ಕೆ ಹೋಗಿ ಹಾಲಿ ಗುರುತು ಪತ್ರ ಮತ್ತು ವಿಳಾಸ ದಾಖಲೆಯನ್ನು  ಒದಗಿಸಿದರೆ ಸಾಕು. UID ಒಟ್ಟು 18 ಅಧಿಕೃತ ಗುರುತು ಪತ್ರಗಳನ್ನು (Proof of Identity) ಮತ್ತು 33 ವಿಳಾಸ ದಾಖಲೆಗಳನ್ನು (Proof of Address) ಪರಿಗಣಿಸುತ್ತದೆ. ಯಾವುದಪ್ಪಾ ಈ 18 + 33 
ದಾಖಲೆಗಳು ಎನ್ನುವವರು ಸೀದಾ http://uidai.gov.in/how-to-enrol-for-aadhaar.html ವೆಬ್ಬಾಗಿಲನ್ನು ತಟ್ಟಬಹುದು. ಅಲ್ಲಿಗೂ ಕೆಲವನ್ನ ಉದಾಹರಣೆಗೆ ಹೇಳುವುದಾದರೆ ಸಾಮಾನ್ಯವಾಗಿ ಚುನಾವಣೆ ಫೋಟೋ ಗುರುತಿನ ಪತ್ರ, ರೇಶನ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್, ಸರಕಾರದ ಯಾವುದೇ ಐಡಿ ಕಾರ್ಡ್ ಮುಂತಾದವು. ಹಾಗೆಯೇ ವಿಳಾಸ ದಾಖಲೆಹೆ ಪರಿಗಣಿತವಾಗುವುದು ಯಾವುದೆಂದರೆ ನೀರಿನ ಬಿಲ್, ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಮುಂತಾದವು. ಆಯ್ತಪ್ಪಾ ಇವುಗಳ ಪೈಕಿ ನನ್ನ ಬಳಿ ಯಾವುದೂ ಇಲ್ಲ ಎನ್ನುವಿರಾದರೆ ನಿಮ್ಮ ಈ ಸಮಸ್ಯೆಗೆ http://uidai.gov.in/how-to-enrol-for-aadhaar.html ಪರಿಹಾರ ನೀಡುತ್ತದೆ. 
        ಈ ನೋಂದಣಿಯನ್ನು ಒಮ್ಮೆ ಮಾತ್ರ ಮಾಡಿಸಿದರೆ ಸಾಕು. ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ ನೋಂದಣಿಗೆ ಸಾಮಾನ್ಯವಾಗಿ 60-90 ದಿನ ಕಾಲಾವಧಿ ಬೇಕಾಗುತ್ತದೆ. ಅಂಚೆ ಇಲಾಖೆಗೆ ಆಧಾರ್ ಕಾರ್ಡ್ ಮುದ್ರಣ ಮತ್ತು ವಿತರಣೆ ಜವಾಬ್ದಾರಿ ವಹಿಸಲಾಗಿದೆ. ನೀವು ನೋಂದಣಿ ಮಾಡಿಸಿದ ದಿನದಂದು ಒಂದು ಸಂಖ್ಯೆ ನೀಡಲಾಗುತ್ತದೆ ಅದು 14 ಅಂಕಿಗಳ ನೋಂದಣಿ ಸಂಖ್ಯೆ ಮತ್ತು ದಿನಾಂಕ ಹಾಗೂ ಸಮಯನ್ನೊಳಗೊಂಡ 14 ಅಂಕಿಗಳ ಸಂಖ್ಯೆಯನ್ನೊಳಗೊಂಡ ಒಂದೇ ಸಂಖ್ಯೆ. ಹೀಗೆ ಒಟ್ಟು 28 ಅಂಕಿಗಳ ಈ ತಾತ್ಕಾಲಿಕ ಸಂಖ್ಯೆಯ ಮೂಲಕ ನಿಮ್ಮ ಆಧಾರ್ ಕಾರ್ಡ್ ನೋಂದಣಿ ಯಾವ ಹಂತದಲ್ಲಿ ಎಂಬುದನ್ನು ತಿಳಿದುಕೊಳ್ಳಬಹುದು. 
  
     ದೇಶದ ಪ್ರತಿಯೊಬ್ಬ ಪ್ರಜೆಗೂ ಶೀಘ್ರವಾಗಿ ಆಧಾರ್ ಕಾರ್ಡ್ ತಲುಪಿಸಲು ಶ್ರಮಿಸುತ್ತಿರುವ ಭಾರತದ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಮೂರು ಹೊಸ ಆನ್‌ಲೈನ್ ಗುರುತು ಪ್ರಮಾಣೀಕರಣ ಸೇವೆ ಬಿಡುಗಡೆ ಮಾಡಿದೆ. ನೂತನವಾಗಿ ಇ - ಕೆವೈಸಿ, ಒಟಿಪಿ (ಒನ್ ಟೈಂ ಪಿನ್), ಐರಿಸ್ ಪ್ರಮಾಣೀಕರಣ ಎಂಬ ಮೂರು ಹೊಸ ಯೋಜನೆಗಳನ್ನು ಗುರುತು ಪ್ರಮಾಣೀಕರಣ ಸೇವೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
  ಇ - ಕೆವೈಸಿ : ಸೇವಾದಾರರರಿಗೆ ಗುರುತು ಮತ್ತು ವಿಳಾಸದ ಎಲೆಕ್ಟ್ರಾನಿಕ್ ಪ್ರತಿ ಪಡೆಯಲು ಈ ನೂತನ ಸೇವೆ ನೆರವು ನೀಡಲಿದೆ. ಇ - ಕೆವೈಸಿ ಸೇವೆ ವಿವಿಧ ಸಂಸ್ಥೆಗಳಲ್ಲಿ ಇ - ಕೆವೈಸಿ ಸೇವೆ ಆಳವಡಿಸಲಾಗುತ್ತದೆ. ಬಳಸುವ ವ್ಯಕ್ತಿಯೊಬ್ಬನ ಮನೆ ಗುರುತು ಮತ್ತು ವಿಳಾಸ ಪರಿಶೀಲಿಸಲು ಬಳಸಲಾಗುತ್ತದೆ. ಕಾರ್ಡ್ ಗೊಂದಿರುವ ವ್ಯಕ್ತಿಗಳ  ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಫೋಟೋ ಮತ್ತು ಮೊಬೈಲ್ ನಂಬರ್ ಗಳನ್ನು ಪರಿಶೀಲಿಸಬಹುದು. ಗುರುತಿನ ವಿವರಗಳು ದುರುಪಯೋಗಬಾರದು ಎಂಬ ಕಾರಣಕ್ಕಾಗಿ ಇದು ಆನ್‌ಲೈನ್‌ನಲ್ಲಿ ಕೆಲವೇ ಸೆಕೆಂಡುಗಳ ವರೆಗೆ ಮಾತ್ರ ಪ್ರದರ್ಶಿತವಾಗುವಂತೆ ತಂತ್ರಜ್ಞಾನ ರೂಪಿಸಲಾಗಿದೆ.
ಒಟಿಪಿ : ಒಟಿಪಿ ಎಂಬುದರ ಪೂರ್ಣರೂಪ ಒನ್ ಟೈಂ ಪಿನ್ ಎಂದಾಗುತ್ತದೆ. ಮೊಬೈಲ್ ಬಳಸಿ ಗುರುತು ಸಾಬೀತು ಪಡಿಸುವ ಸೇವೆ ಇದಾಗಿದೆ. ಇದಕ್ಕಾಗಿ ಯಾವುದೇ ಬಯೋಮೆಟ್ರಿಕ್ ಪ್ರಮಾಣೀಕರಣ ಸಾಧನಗಳೂ ಅಗತ್ಯವಿಲ್ಲ.
 ಐರಿಸ್ ಪುರಾವೆ : ಆಧಾರ್ ಸಂಖ್ಯೆ ಮತ್ತು ಐರಿಸ್ ಭಾವಚಿತ್ರ ಪ್ರದರ್ಶಿಸಿ ಈ ಸೇವೆ ಮೂಲಕ ಗುರುತನ್ನು ಪ್ರಮಾಣೀಕರಣ ಮಾಡಲಾಗುವುದು. ಇಲ್ಲಿ ಜನಸಂಖ್ಯಾ ವಿವರಗಳನ್ನು ಹಂಚಿಕೊಳ್ಳಲಾಗುವುದಿಲ್ಲ. ನಿವಾಸಿಯ ಗುರುತನ್ನು ಪ್ರಮಾಣೀಕರಿಸಿ ಹೌದು ಅಥವಾ ಇಲ್ಲ ಎನ್ನುವ ಆಯ್ಕೆಯನ್ನು ಮಾತ್ರ ನೀಡಲಾಗಿರುತ್ತದೆ. 

ಆನ್ ಲೈನ್ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಹೇಗೆ?
    ಈಗಾಗಲೇ ಆಧಾರ್ ಕಾರ್ಡ್ ಗುರುತಿನ ಚೀಟಿ ಪಡೆದಿರುವವರು ಅದರಲ್ಲೊಂದಿಷ್ಟು ಬದಲಾವಣೆಗಳನ್ನು ಮಾಡಬಯಸುವುದು ಖಚಿತ. ಏಕೆಂದರೆ ಹರಿಬರಿನಲ್ಲಿ ಸಧ್ಯ ಕಾರ್ಡ್ ಸಿಕ್ಕಿದದರೆ ಸಾಕಪ್ಪಾ ಎಂದು ಯಾವುದೋ ಒಂದು ತಪ್ಪು ಮಾಹಿತಿ ನೀಡುತ್ತಾರೆ. ಹಾಗಾಗಿ ಅಂತಹವರು ಸ್ಪಷ್ಟ/ನಿಖರ ಮಾಹಿತಿ ಒದಗಿಸಿ ತಮ್ಮ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ ಡೇಟ್ ಮಾಡಿಕೊಳ್ಳಬಹುದು. ಕಾರ್ಡ್ ಮಾಡಿಸುವುದಕ್ಕೇ ಒಂದೆರಡು ದಿನ ರಜೆ ಹಾಕಿ ಓಡಾಡಿದ್ದೆವು. ಈಗ ಮತ್ತೆ ಯಾವೋನು ಹೋಗಿ ಸ್ವಾಮಿ ಎಂದು ಅಸಡ್ಡೆ ತೋರಬೇಡಿ. ರಜೆ ಪಡೆಯದೇ ಕಚೇರಿಯಲ್ಲೇ ಇಂಟರ್ ನೆಟ್ ಸೌಲಭ್ಯವಿದ್ದರೆ ಈ ಬದಲಾವಣೆಗಳನ್ನು ಕೇವಲ ಐದೇ ನಿಮಿಷದಲ್ಲಿ ಮಾಡಿ ಮುಗಿಸಬಹುದು. 
    ಆಧಾರ್ ಮಾಹಿತಿ ಬದಲಾವಣೆ ಮೊಬೈಲ್ ನಂಬರ್ ಚೇಂಜ್ ಮಾಡಿಸಿಕೊಳ್ಳುವುದು/ ವಿಳಾಸ ಬದಲಾಯಿಸಿಕೊಳ್ಳುವುದು/ ಜನ್ಮ ದಿನಾಂಕ ಸರಿಪಡಿಸಿಕೊಳ್ಳುವುದು/ಅಥವಾ ತಪ್ಪಾಗಿ ಮುದ್ರಿತವಾಗಿರುವ ಪುರುಷ/ಗಂಡು ಕಾಲಂ ಅನ್ನು ಸರಿತಿದ್ದಿಕೊಳ್ಳಬಹುದು. ಇದನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಆಧಾರ್ ವಿತರಣೆ ಕೇಂದ್ರಕ್ಕೆ ಹೋಗಿ ಮಾಡಿಸಿಕೊಳ್ಳಬಹುದು. ಆದರೆ ಇಲ್ಲಿ ಹೇಳಹೊರಟಿರುವುದು ಆನ್ ಲೈನ್ ಸೇವೆ ಮೂಲಕ. ಹಾಗಾಗಿ ವಿವರ ಇಲ್ಲಿದೆ.

* Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಮೂರು ಮುಖ್ಯ ಹಂತಗಳು ಹೀಗಿವೆ. ಮೊದಲು UIDAI Aadhaar Card ವೆಬ್ ಸೈಟನ್ನು ತೆರೆದಿಟ್ಟುಕೊಳ್ಳಿ. (ಲಿಂಕ್- https://portal.uidai.gov.in/ResidentPortal/statusLink)
* ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ನಿಮ್ಮ ಮೊಬೈಲ್ ನಂಬರ್ ದಾಖಲಿಸಿ, PIN ನಂಬರ್ ಪಡೆದುಕೊಳ್ಳಿ. ಮುಂದೆ ಸದರಿ ಆನ್ ಲೈನ್ ಅರ್ಜಿಯಲ್ಲಿ ಮಾಹಿತಿಯನ್ನು ದಾಖಲಿಸಲು ಪಾಸ್ ವರ್ಡ್ ಅಗತ್ಯವಿರುತ್ತದೆ. ಅದು ನೀವು ನೀಡುವ ಮೊಬೈಲ್ ಗೆ SMS ರೂಪದಲ್ಲಿ ಕೆಲವೇ ಕ್ಷಣಗಳಲ್ಲಿ ಬರುತ್ತದೆ. ಹಾಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿರಿ.
* ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ನಂತರ ಅಗತ್ಯ ಬದಲಾವಣೆಗಳನ್ನು ದಾಖಲಿಸಿಕೊಳ್ಳಿ. ಆದರೆ ಹಾಗೆ ಮಾಹಿತಿಯನ್ನು ಮಾರ್ಪಾಡು ಮಾಡಲು ಪೂರಕ ದಾಖಲೆಗಳು ಅತ್ಯವಶ್ಯಕ. ಅದನ್ನು ಮೊದಲೇ ನಿಮ್ಮ ಕಂಪ್ಯೂಟರಿನಲ್ಲಿ ಫೋಟೋ (JPG) ರೂಪದಲ್ಲಿ Save ಮಾಡಿಟ್ಟುಕೊಂಡಿರಿ. ಆ ಫೋಟೋ ರೂಪದ ದಾಖಲೆಯನ್ನು upload ಮಾಡಿ, ಬದಲಾವಣೆ ಕೋರಿ, ಅರ್ಜಿಯನ್ನು Submit ಮಾಡಿ. ಅಲ್ಲಿಗೆ ನಿಮ್ಮ ಕೆಸಲ ಮುಗಿಯುತ್ತದೆ.
     Onlineನಲ್ಲಿ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಮುಂದಿನದು Aadhaar Card ವಿತರಕರ ಕೆಲಸ. ಅವರು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾರ್ಪಾಡುಗಳನ್ನು ಮಾಡಿ, ಹೊಸ Aadhaar Card ಅನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತಾರೆ.

ಮಹತ್ವದ ಇ-ಆಧಾರ್ ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ 
          ಈಗಾಗಲೇ ಅರ್ಜಿ ನೊಂದಾಯಿಸಿಕೊಂಡಾಗಿದೆ ಆದರೆ ಎಷ್ಟು ದಿನಗಳಾದರೂ ನಮಗೆ ಕಾರ್ಡ್ ಬಂದಿಲ್ಲ ಎನ್ನುತ್ತಿದ್ದಾರೆ. ಅದಕ್ಕೊಂದು ತಾತ್ಕಾಲಿಕ ಪರಿಹಾರ ಇಲ್ಲಿದೆ. Aadhaar cardಗಾಗಿ ಈಗಾಗಲೇ ನೋಂದಣಿ ಮಾಡಿಸಿದ್ದರೆ UIDAI websiteನಲ್ಲಿ ಆ ನೋಂದಣಿಯ ಸಂಖ್ಯೆಯನ್ನು ನಮೂದಿಸಿ, ನಿಮ್ಮ Aadhaar Number ಇರುವ e-Aadhaar ಪ್ರತಿಯನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿ. ಏಕೆಂದರೆ ತಾತ್ಕಾಲಿಕವಾಗಿ ಇದೇ Aadhaar card ಪ್ರತಿಯನ್ನು ಅಧಿಕೃತವಾಗಿ ನೀವು ಅಗತ್ಯವಿರುವ ಕಡೆ ಚಲಾಯಿಸಬಹುದು. UID ಉಪ ನಿರ್ದೇಶಕ ಅಶೋಕ್ ದಳವಾಯಿ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಲಕ್ಷಾಂತರ ಮಂದಿ ಕಾರ್ಡಿಗಾಗಿ ಬೇಡಿಕೆಯಿಟ್ಟು ಅರ್ಜಿ ಗುಜರಾಯಿಸುತ್ತಿದ್ದಾರೆ. ಇಡೀ ದೇಶದಲ್ಲಿ ಶತಕೋಟಿ ಮಂದಿಗೆ ಕಾರ್ಡು ವಿತರಿಸಬೇಕು. ಈ ಅಗಾಧ ಕಸರತ್ತು ನಡೆಸುವಾಗ ಒಂದಷ್ಟು ವಿಳಂಬಗಳಾಗುವುದು ಸಹಜ. ಆದರೂ ಹೆಚ್ಚು ವ್ಯತ್ಯಯ/ ಲೋಪವಾಗಬಾರದೆಂದು UID ಈ ಪೂರಕ ವ್ಯವಸ್ಥೆಗೆ ಶರಣಾಗಿದೆ.  ನಿಮ್ಮ  ಆಧಾರ್ ಆಗಿರದಿದ್ದರೆ ಬೇಗನೆ ಮಾಡಿಸಿಕೊಳ್ಳಿ