
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜು, ರೋಟರಿ ಕ್ಲಬ್ ಮತ್ತು ಅಕಾಡೆಮಿ ಆಫ್ ಪರ್ಸನಾಲಿಟಿ ಎಕ್ಸಲೆನ್ಷ್ ಟ್ರೈನಿಂಗ್ (ರಿ) ಇವರ ಸಹಯೋಗದಲ್ಲಿ ನಡೆದ ‘ಹಾವು ಮತ್ತು ನಾವು’ ಹಾವುಗಳ ಪ್ರಭೇದಗಳ ಕುರಿತ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ನಿಸರ್ಗದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ಪ್ರತಿಯೊಂದು ಪ್ರಾಣಿಪಕ್ಷಿ ಮತ್ತು ಸಸ್ಯಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಅದರಂತೆ ಹಾವುಗಳು ನಿಸರ್ಗದ ಸಮತೋಲನದಲ್ಲಿ ಬರುವ ಅತ್ಯಂತ ಪ್ರಮುಖವಾದ ಪ್ರಾಣಿ. ಆದರೆ ನಾವು ಯಾವಿದೇ ನಿಸರ್ಗದ ಅಂಶಗಳಾಗಲಿ ಮನುಷ್ಯನ ಸ್ವಾರ್ಥಕ್ಕೆ ಬಳಕೆಯಾಗುತ್ತಿವೆ. ಅವುಗಳ ಕುರಿತ ಜಾಗೃತಿ ಯುವಸಮುದಾಯದಿಂದ ಆಗಬೇಕು. ಅದು ಕೇವಲ ನಮ್ಮ ಇಂದಿನ ಶಿಕ್ಷಣ ಪದ್ಧತಿಯಾದ ತರಗತಿಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಕುಳಿತು ಕಲಿಯಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳು ನಿಸರ್ಗದ ಕುರಿತು ತಿಳಿಯಲು ಸಾಧ್ಯವಾಗುತ್ತದೆ. ಸಂಸ್ಥೆಗಳಲ್ಲಿರುವ ಪರಿಸರ ಪೂರಕ ಇಕೋಕ್ಲಬ್‍ಗಳು ಕೇವಲ ಉಧ್ಘಾಟನೆಗೆ ಸೀಮಿತವಾಗದೇ ಪರಿಸರ ಕುರಿತ ಕಾಳಜಿ ಬೀರುವ ಕಾರ್ಯಕ್ರಮಗಳನ್ನು ರೂಪಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ಉರಗ ತಜ್ಞ ಗುರುರಾಜ್ ಸನಿಲ್ ಅವರಿಂದ ನಡೆದ ಹಾವುಗಳ ಪ್ರಭೇದಗಳ ಕುರಿತ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯಲ್ಲಿ ಅವರು ಹಾವುಗಳ ಕುರಿತು ವಿಶೇಷ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಛಾತ್ರ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ರೋಟರಿ ಕ್ಲಬ್‍ನ ಕಾರ್ಯದಶಗಳಾದ ಹೆಚ್.ಎಸ್. ಹತ್ವಾರ್ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ಸ್ವಾಗತಿಸಿದರು. ರೋಟರಿ ಕ್ಲಬ್‍ನ ಅಧ್ಯಕ್ಷರಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹಾವುಗಳಿಂದ ನಮಗೆ ತೊಂದರೆಯಾಗಬಾರದು. ನಮ್ಮಿಂದ ಹಾವಿಗೆ ತೊಂದರೆ ಆಗಬಾರದು. ಹಾವುಗಳ ಅನಿವಾರ್ಯತೆ ಪ್ರಪಂಚಕ್ಕಿದೆ. ಪ್ರಕೃತಿಯ ಸಮಾತೋಲನ ಕಾಪಾಡುವಲ್ಲಿ ಅವುಗಳ ಪಾತ್ರವಿದೆ ಎಂದರು. ಉಪನ್ಯಾಸಕಿ ಸರೋಜ ಎಂ. ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಆಫ್ ಪರ್ಸನಾಲಿಟಿ ಎಕ್ಸಲೆನ್ಸಿ ಟ್ರೈನಿಂಗ್ (ರಿ) ಇದರ ನಿರ್ದೇಶಕರಾದ ಹುಸೇನ್ ಹೈಕಾಡಿ ವಂದಿಸಿದರು.