ಅಣಬೆ: ಮಳೆಗಾಲದ ಪ್ರಕೃತಿ ಕೊಡುಗೆ


      ವರ್ಷಕ್ಕೆ ಒಮ್ಮೆಯಾದರೂ ಅಣಬೆ ತಿನ್ನಬೇಕು ಎನ್ನುವ ಲೋಕ ರೂಢಿ ಗ್ರಾಮೀಣ ಪ್ರದೇಶದಲ್ಲಿದೆ. ಹೌದು ಪ್ರಕೃತಿಯ ಮಳೆಗಾಲದ ಕೊಡುಗೆಯಾಗಿರುವ ಅಣಬೆ ಒಂದಷ್ಟು ದಿನಗಳ ಕಾಲ ಕಾಡು-ಮೇಡುಗಳಲ್ಲಿ ಕಾಣಸಿಗುತ್ತದೆ. ಇದರ ಶಿಕಾರಿಯ ಭಕ್ಷ ಬೋಜನ ಗ್ರಾಮೀಣ ಪ್ರದೇಶಗಳ ಮನ-ಮನೆಗಳಲ್ಲಿ ಕಲರವ ಕನಿಕರಿಸುತ್ತರಿರುವ ದಿನಗಳಿವು.
      ಕನ್ನಡದಲ್ಲಿ ಅಣಬೆ, ಇಂಗ್ಲಿಷನಲ್ಲಿ ಮಶ್ರೂಂ  ಹಿಂದಿಯಲ್ಲಿ ಕುಕ್ಕರ್ಮುತ್ತ,ಕುಂದಕನ್ನಡದಲ್ಲಿ ಅಣಬು, ತುಳುವಿನಲ್ಲಿ ಇಂಬು ಎಂದು ಕರೆಸಿಕೊಳ್ಳುವ ಈ ಚೀಜ್ ಗೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ಪುರಾತನ, ಆಯರ್ವೆದಿಕ ಕಾಲದಿಂದಲೂ ಮನೆಮಾತಾಗಿರುವ ಇದು ಶಿಲಿಂಧ್ರ ಜಾತಿಗೆ ಸೇರಿದ ಸಸ್ಯ. ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪ್ರೋಟಿನ್, ವಿಟಮಿನ್, ಮಿನಿರಲ್, ಅಮಿನೋ ಆಸಿಡ್ ಎಂಬ ಅಂಶವನ್ನು ಇದು ಹೊಂದಿದ್ದು, ರೋಗ ನಿರೋಧಕ ಶಕ್ತಿ ಹೊಂದಲು ಇದು ಪೂರಕವಾದ ಆಹಾರವಾಗಿದೆ. ಹಲವಾರು ಖಾಯಲೆ ಗಳಿಗೆ ರಾಮಬಾಣ ಕೂಡ ಹೌದು. ಇದನ್ನು ಕೆಲವೆಡೆ ಇದನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ಅಣಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ, ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ  ಪ್ರಕಾರದ ಅಣಬೆಗಳು ಹೇರಳವಾಗಿ ದೊರೆತರೂ, ಈ ಮಳೆಗಾಲದ ಸಮಯದಲ್ಲಿ ಕಾಡಿನಲ್ಲಿ ಸಿಗುವ ನೈಸರ್ಗಿಕ ಅಣಬೆಗೆ ಎಲ್ಲಿಲ್ಲದ ಬೇಡಿಕೆ. ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಬರುವ ಗುಡುಗಿನ ಶಬ್ದಕ್ಕೆ ನೆಲದಿಂದ ಹೊರಗೆ ಏಳುತ್ತದೆ. ಬೇಸಿಗೆಯಲ್ಲಿ ಬಿದ್ದ ಮರದ ತರಗಿಲೆಗಳು ಮಳೆಯ ಹೊಡೆತಕ್ಕೆ ಸಿಕ್ಕಿ ಕೊಳೆತು ಈ ಅಣಬೆಗಳು ಬೆಳೆದು ಒಂದೇ ದಿನದಲ್ಲಿ ನಶಿಸುತ್ತವೆ. ಕೆಲವಂದು ಅಣಬೆಗಳು ಒತ್ತೊತ್ತಾಗಿ ಕಣ್ಣಿಗೆ ಗೊಚರಿಸಿದರೆ ಇನ್ನು ಕೆಲವು ಅಲ್ಲಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಹಲವಾರು ಬಗೆಗಳಿವೆ. ಗ್ರಾಮೀಣ ಆಡು ಭಾಷೆಯಲ್ಲಿ 'ಹೆಗ್ಗೋಲಿ ಅಣ೦ಬು' ,'ಏಣ್ ಅಣ೦ಬು', 'ದೂಪದ ಅಣ೦ಬು', 'ಬೋಗಿ ಅಣ೦ಬು', 'ನುಚ್ಚ್ ಅಣ೦ಬು', 'ಕಲ್ಲ್ ಅಣ೦ಬು' ಹೀಗೆ ಪಟ್ಟಿ ಬೆಳೆಯುತ್ತಾಹೋಗುತ್ತದೆ. ಇವುಗಳ ಮಧ್ಯೆ ಕೆಲವಂದು ವಿಷಪೂರಿತ ಅಣಬೆಗಳೂ ಬೆಳೆಯುದುಂಟು. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ವಿಷಯುಕ್ತ ಹಾವುಗಳು ದಾಟಿದರೆ ಅಣಬೆ ವಿಷಕಾರಿಯಾಗುತ್ತವೆ ಎಂಬ ಮಾತೂ ಇವೆ. ನೈಸರ್ಗಿಕ ಅಣಬೆ ಎಷ್ಟು ದೇಹಕ್ಕೆ ಒಳ್ಳೇದೋ ಅಷ್ಟೇ ಅಪಾಯವೂ ಇದೆ. ಅಣಬೆ ಒಂದು ಬಗೆಯ ಸಸ್ಯ ಆಗಿದ್ದರೂ ಅದನ್ನು ಮಾಂಸಾಹಾರದ ಗುಂಪಿಗೆ ಸೇರಿಸಲಾಗಿದೆ ಆದ್ದರಿಂದ ತುಂಬಾ ಜನರು ಇದನ್ನು ತಿನ್ನುವುದಿಲ್ಲ.

ಪ್ರಯೋಜನಗಳು
  •  ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತೆ: ಪ್ರತಿದಿನ ಒಂದು ಔನ್ಸ್ ನಷ್ಟು ಅಣಬೆ ಸೇವಿಸಿದರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 64 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇಂತಹದೇ ಇನ್ನೊಂದು ಅಧ್ಯಯನ, ಸ್ತನ ಕ್ಯಾನ್ಸರ್ ತಗುಲುವ ಸಾಧ್ಯತೆಯನ್ನು ಅಣಬೆ ಶೇಕಡಾ 90 ರಷ್ಟು ಕಡಿಮೆಗೊಳಿಸುತ್ತದೆ ಎಂದೂ ವರದಿ ಮಾಡಿದೆ. 
  •  ವಿಟಮನ್ ಬಿ2: ಶಕ್ತಿಯನ್ನು ನೀಡಲು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ತುಂಬಾ ಅಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇರುವುದರಿಂದ ದೇಹಕ್ಕೆ ಇದು ತುಂಬಾ ಒಳ್ಳೆಯದು.
  • ಕೊಲೆಸ್ಟ್ರಾಲ್ ಕರಗಿಸುತ್ತೆ: ಅಣಬೆಯಲ್ಲಿ ಬೊಜ್ಜಿನ ಅಂಶವಿಲ್ಲ ಮತ್ತು ಕಡಿಮೆ ಕಾರ್ಬೊ ಹೈಡ್ರೇಡ್ ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೊಜ್ಜು ಕರಗಿಸುವುದು ಸುಲಭ. ಇದರಲ್ಲಿನ ಕೆಲವು ಎಂಜೈಮು ದೇಹದಲ್ಲಿ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.
  •  ಮಧುಮೇಹ: ಇದು ದೇಹದಲ್ಲಿರುವ ಅಧಿಕ ಸಕ್ಕರೆಯಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹಿ ಈ ಆಹಾರವನ್ನು ತಿನ್ನುವುದು ಒಳ್ಳೆಯದು.
  •  ರೋಗನಿರೋಧಕ ಶಕ್ತಿ: ಇದು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ. ಇದರಲ್ಲಿನ antibiotic ಅಂಶ ದೇಹ ಇನ್ನಿತರ ಸೋಂಕುಗಳಿಗೆ ತುತ್ತಾಗುವುದನ್ನು ತಡೆಯುತ್ತದೆ. 6. ರಕ್ತಹೀನತೆ: ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಅಷ್ಟೇ ಅಲ್ಲ, ಅಣಬೆಯಲ್ಲಿ ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುವ ಪೊಟಾಶಿಯಂ ಪೂರಕವಾಗಿದೆ.  
  -ಶಿವಕುಮಾರ್ ಹೊಸಂಗಡಿ
ಲೇಖಕರು ಉದಯೋನ್ಮುಖ ಬರಹಗಾರರು.



ನಿಮ್ಮ ಪ್ರತಿಕ್ರಿಯೆ ಬರೆಯಿರಿ