ಬಾಳೆಬರೆ: ಪ್ರವಾಸಿಗರ ಸ್ವರ್ಗ

        ಮೂಗಿಗಿಂತ ಮೂಗುತಿ ದೊಡ್ಡದು ಎನ್ನುವ ಹಾಗೆ. ಪುಟ್ಟ ಪ್ರದೇಶದಲ್ಲಿ ಬೆಟ್ಟದಷ್ಟು ಪ್ರಕೃತಿ ಸೋಬಗು. ಎತ್ತ ನೋಡಿದರತ್ತ ಕಣ್ಣು ಕುಕ್ಕಿಸುವ ಹಚ್ಚ ಹಸಿರು. ನಾಮುಂದು ತಾಮುಂದು ಎಂಬಂತೆ ಮುಗಿಲಿನತ್ತಾ ಮುಖ ಮಾಡಿ ನಿಂತ ಮರಗಿಡಗಳು. ಗಗನಕ್ಕೆ ಚುಂಬಿಸಿದಂತೆ ಭಾಸವಾಗುವ ಹಸಿರು ಬೆಟ್ಟಗಳ ಮೇಲೆ ಮೋಡಗಳ ಆಟದ ಸೊಬಗು. ಹಿತವಾಗಿ ಬೀಸುವ ತಂಗಾಳಿ. ಹಕ್ಕಿಪಕ್ಷಿ ಗಳ ಜಿಳಿ ಇಂಚಲಿ ಪಿರ. ಜುಳು -ಜುಳು ನಾದ ದೊಂದಿಗೆ ದುಮ್ಮಿಕ್ಕುವ ಜಲಧಾರೆ, ಭಕ್ತಿಯ ಸಿಂಚನ ಇಂಥಹ ಅಪೂರೂಪದ ಅಪೂರ್ವ ರಮ್ಯತೆಗೆ ಸಾಕ್ಷಿಯದದ್ದು  “ಬಾಳೆಬರೆಯ” ಪ್ರಕ್ರತಿ ಮಡಿಲು.
   ಕುಂದಾಪುರ ದಿಂದ ಸಿದ್ದಾಪುರ ಮಾರ್ಗವಾಗಿ ಶಿವಮೊಗ್ಗಕ್ಕೆ  ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ, ಹೊಸಂಗಡಿ ಯಿಂದ ಸುಮಾರು 9 ಕೀಮೀ ದೂರದಲ್ಲಿರುವ ಪ್ರದೇಶ ಬಾಳೆಬರೆ.  ಇಲ್ಲಿ ಪುರಾಣ ಪ್ರಸಿದ್ಧ ಉದ್ಭವಿತ ಶಕ್ತಿಶಾಲಿ  ಶ್ರೀ ಚಂಡಿಕಾಂಬೆ ದೇವಸ್ಥಾನವಿದ್ದೂ, ಅನೂದಿನವೂ ಪೂಜಾ ಕಾರ್ಯ ನಡೆಯುತ್ತದೆ. ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಯಲ್ಲಿರುವ ದೇವಾಲಯಕ್ಕೆ ಸಹಸ್ರ ಭಕ್ತವೃಂದವಿದೆ. ಇಲ್ಲಿಂದ ಕೂಗಳತೆಯ ದೂರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನವಿದೆ. ಸುಮಾರು 160 ಕ್ಕಿಂತಲೂ ಅಧಿಕ ಮೆಟ್ಟಿಲುಗಳನ್ನು ಸ್ಪರ್ಶಿಸಿ ಶ್ರೀ ಸಿದ್ದಿವಿನಾಯಕನ ದರುಶನ ಪಡೆಯುವ ಭಾಗ್ಯ ಅನನ್ಯ ಅನುಕರಣಿಯ. 
        ಎಲ್ಲಾಕ್ಕಿಂತ ಹೆಚ್ಚಾಗಿ ನಿಸರ್ಗದ ಸೊಬಗಿನಲ್ಲಿ ಕಾನನದ ಕೊರಳೊಳಗಿಂದ ಹಾಲು ನೊರೆಯಂತೆ ಧುಮ್ಮಿಕ್ಕಿ ಹರಿಯುವಜಲಧಾರೆಯನ್ನು ಕಣ್ತುಂಬಿಕೊಳ್ಳಲು ಅದೃಷ್ಟವೇ ಬೇಕು. ಸುಮಾರು 300 ಅಡಿಗಿಂತಲೂ ಅಧಿಕ ಎತ್ತರದಿಂದ ಹರಿಯುವ ಜಲಧಾರೆ ಸಿಂಚನವನ್ನು ಕಂಡು 'ವರದಹಳ್ಳಿ ಶ್ರೀ ಶ್ರೀಧರಸ್ವಾಮಿಜಿ' ಯವರು ಒಮ್ಮೆ ಇಲ್ಲಿಗೆ ಬೇಟಿ ಸಂಧರ್ಭದಲ್ಲಿ ಇದನ್ನು "ಪವಿತ್ರ ತೀರ್ಥ " ಎಂದು ಮಹತ್ವವನ್ನು ಅರಿತು ಬಣ್ಣಿಸಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಿಗರೂ ಬಂದಿಳಿದು ನೀರಿನ ಅಬಿಷೇಕ ಪಡೆದು ಮುಂದಿನ ಸಂಚಾರವನ್ನು ಕೈ ಕೊಳ್ಳುತ್ತಾರೆ .  
         ಸಂಜೆ ಹೊತ್ತಿನಲ್ಲಿ ಪ್ರಶಾಂತ ಮಾನವಾದ ಸೂರ್ಯಾಸ್ತದ ಸುಂದರ ದೃಶ್ಯ ಮೈಮನ ಪುಳಕಿತಗೊಳ್ಳುತ್ತದೆ. ಕಣ್ಣರಳಿದಷ್ಟು ಚೆಲುವಿನ ಬುತ್ತಿ ಯೊಂದಿಗೆ ಪ್ರಕ್ರತಿ ಪ್ರೀಯರಿಗೆ ಸ್ವರ್ಗದಂತಿರುವ ಈ ಪ್ರದೇಶವನ್ನು ಉಳಿಸಿ ಬೆಳೆಸಿಕೊಂದು ಹೋಗಲು ಪ್ರವಾಸೋದ್ಯಮ ಇಲಾಖೆ  ಆಲೋಚಿಸಬೇಕಾಗಿದೆ . 

ಚಿತ್ರ-ಲೇಖನ:ಶಿವಕುಮಾರ್ ಹೊಸಂಗಡಿ
ಲೇಖಕರು ಉದಯೋನ್ಮುಖ ಬರಹಗಾರರು