ಸುದ್ದಿ ಸಂಕ್ಷೀಪ್ತ: ಆಗಸ್ಷ್ 10 ರಿಂದ 18ರ ವರೆಗೆ ಮಾಸ್ಕೋದಲ್ಲಿ ನಡೆಯುವ ವಿಶ್ವ ಅತ್ಲೆಟಿಕ್ ಚಾಂಪಿಯನ್ ಶಿಪ್ ಗೆ ಭಾಗವಹಿಸಲಿರುವ 15 ಜನರ ರಾಷ್ಟ್ರೀಯ ತಂಡದಲ್ಲಿ ಚಿನ್ನದ ಚಿಗರೆ ಕುಂದಾಪುರದ ತಾಲೂಕಿನ ಅಶ್ವಿನಿ ಅಕ್ಕುಂಜೆ ಸ್ಥಾನ ಪಡೆದಿದ್ದಾರೆ.
ವನಿತೆಯರ 4x400 ವೀ. ರಿಲೇಯಲ್ಲಿ ಅಶ್ವಿನಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಉದ್ದೀಪನ ಮದ್ದು ಸೇವನೆಯ ಪ್ರಕರಣದಲ್ಲಿ 2 ವರ್ಷಗಳ ಕಾಲ ಟ್ರ್ಯಾಕ್ ನಿಂದ ದೂರ ಉಳಿದಿದ್ದ ಅಶ್ವಿನಿ ಮತ್ತೆ ಪದಕ ಬೇಟೆ ಆರಂಭಿಸಿದ್ದಾರೆ.