ಹೋಯ್ಕ್...ಬರ್ಕ್....

   ಕುಂದಾಪುರ ಜನ್ರ ಭಾಷಿ ಗಡಿಬಿಡಿ ಭಾಷಿ ಕಾಣಿ. ನಮ್ ಜನ್ರ್ ಪುರಸೋತ್ತಿಲ್ಲದೇ ಕನ್ನಡ ಭಾಷಿನ ಅರ್ಧಬಂರರ್ಧ, ತುಂಡ್ ತುಂಡ್ ಮಾಡಿ, ಅನ್ಕೂಲ ಆಪಂಗೆ ಬದಲಾಯಿಸ್ಕ್ಂಡಿಪ್ಪೊ ಭಾಷಿ ಅದ್ರದ್ದೇ ಆದ್ ಒಂದ್ ಜಾಗೂ ಮಾಡ್ಕಂಡೀತ್
     ಕಾಣಿ ಕುಂದಾಪುರ್ ದರ್ ಗುರ್ತಾ ಎಲ್ ಹೋರೂ ಜನಕ್ ಸಿಕ್ಕೂದ್ ಅವ್ರಾಡೂ ಭಾಷಿಂದಾಯಿ. ಎಷ್ಟೇ ಸಂಭವಿತ್ರ ಹೋರೂ, ಶುದ್ದ್ ಕನ್ನಡ್‍ದಾಗೆ ಮಾತಾಡೂಕ್ ಹೋರೂ ಒಂಚೂರಾರೂ ಅವರಾಡೂ ಮಾತ್ನಾಂಗೆ ಕುಂದಾಪ್ರ ಕನ್ನಡಾ ಇಣ್ಕಿಯೇ ಇಣ್ಕತ್. ಅದ್ರಾಗೂ ಈ ಹೋಯ್ಕ್.... ಬರ್ಕ್..... ಅಂಬೂ ಶಬ್ದಾ ಅಂತೂ ಬಂದೇ ಬತ್ತ್ ಕಾಣೀ.
   ಶುದ್ದಾ ಕನ್ನಡದಾಂಗೆ ‘ಹೋಗಬೇಕು, ಬರಬೇಕು’ ಅಂಬುದನ್ನೇ ಸಣ್ಣದ್ ಮಾಡಿ, ಹೋಯ್ಕ್.... ಬರ್ಕ್..... ಮಾಡೀರ. ಕುಂದಾಪುರ್‍ದಾರ್ ಮಾತ್ ಶುರು ಆಪೂದೇ ‘ಹೋಯ್...’ ಅಂಬೂ ಶಬ್ದದಿಂದ ‘ಹೋಯ್, ಇವತ್ತ್ ಶನಿವಾರು ಸಂತೀಗ್ ಹೋಯ್ಕ್ ಮಾರ್ರೆ, ಬಪ್ಪತೀಗ್ ಒಂದ್ ವಾರಕ್ಕಾಪೂ ಸಾಮಾನೆಲ್ಲಾ ತೆಕಂಡ್ ಬರ್ಕ್...’ ಅಂದ್ಹೇಳಿ ಜನಾ ಮಾತಾಕ್ಕಂತ್ರ್. ಶಾಲಿ ಹೋಪೂ ಮಕ್ಕಳ್ ಮಾತಾಡುದ್, ‘ಮಾಷ್ಟ್ರ ಹೇಳೀರ್ ಗಡ, ಆ ಪಾಠಾ ಬರ್ಕ್‍ಂಬರ್ಕ್ ಅಂಬ್ರು’ 
     ಹೀಗೆ, ಈ ಹೋಯ್ಕ್.... ಬರ್ಕ್..... ತರದ ನೂರಾರು ಪದುಗಳ್ ಕುಂದಾಪ್ರ್ ಕನ್ನಡಕ್ಕ್ ಒಂಥರಾ ಚಂದೂ ತಂದ್ ಕೊಟ್ಟೀತ್ ಅಲ್ದಾ...
ಜಯಶೀಲಾ ಕೆ. ಕಾಮತ್, ಕುಂಭಾಶಿ