ಅಮರವಾದ ಕ್ರಾಂತಿಯ ಕಿಚ್ಚು ಭಗತ್ ಸಿಂಗ್

           ಇಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಕ್ರಾಂತಿವೀರ,
ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ ಜನ್ಮದಿನ. ಭಗತ್‌ ಸಿಂಗ್‌ 1907 ಸೆ.28ರಂದು ಪಂಜಾಬ್‌ನ ಜರ್ನ್ ವಾಲಾ ತಾಲೂಜಿನಲ್ಲಿ ಜನನ. 12ನೇ ವಯಸ್ಸಿನಲ್ಲಿರುವಾಗ ನಡೆದ ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ, ಸ್ವಾತಂತ್ರ್ಯ ಚಳವಳಿ ಸೇರ್ಪಡೆಗೆ ಪ್ರೇರಣೆಯಾಯಿತು. ಗಾಂಧಿಯವರ ಸತ್ಯಾಗ್ರಹಗಳಲ್ಲಿ ಭಾಗಿಯಾಗಿದ್ದರೂ, ತೀವ್ರಗಾಮಿ ಚಟುವಟಿಕೆ ಇಷ್ಟವಾಯಿತು. ಭಗತ್ ಸಿಂಗ್ ಯ‌ೂರೋಪಿಯನ್ ಕ್ರಾಂತಿ ಚಳವಳಿಯನ್ನು ಅದ್ಯಯನ ಮಾಡಿ, ಸಮಾಜವಾದದ ಬಗ್ಗೆ ಪ್ರಭಾವಿತನಾಗಿದ್ದನು.ಭಾರತದಲ್ಲಿ ಕ್ರಾಂತಿಕಾರಿ ಆಂದೋಳನಕ್ಕೆ ಹೊಸ ದಿಕ್ಕನ್ನು ಭಗತ್ ಸಿಂಗ್ ನೀಡಿದ್ದ. ಅಂದಿನ ಕ್ರಾಂತಿಕಾರಿ ಯುವಕರು ಬ್ರಿಟನ್ ಸಾಮ್ರಾಜ್ಯವನ್ನು ನಾಶ ಮಾಡುವ ಒಂದೇ ಗುರಿ ಇಟ್ಟುಕೊಂಡಿದ್ದರೇ ಹೊರತು ರಾಜಕೀಯ ಪರ್ಯಾಯದ ಬಗ್ಗೆ ಚಿಂತಿಸಿರಲಿಲ್ಲ. ಇತಿಹಾಸದ ಬಗ್ಗೆ ಸ್ಪಷ್ಟ ಅರಿವು ಹೊಂದಿದ್ದ ಭಗತ್ ಸಿಂಗ್ ಕ್ರಾಂತಿಕಾರಿ ಆಂದೋಲನಕ್ಕೆ ಸ್ಪಷ್ಟ ರೂಪುರೇಷೆ ನೀಡಿದ.
      ಜಲಿಯನ್‌ವಾಲಾ ಭಾಗ್ ದುರಂತ ಸಂಭವಿಸಿದಾಗ ಭಗತ್ ಸಿಂಗ್ 12 ವರ್ಷ ಪ್ರಾಯದ ಬಾಲಕ. ಈ ಹತ್ಯಾಕಾಂಡ ಭಗತ್ ಸಿಂಗ್ ಮನಸ್ಸಿನ ಮೇಲೆ ಆಳವಾದ ಗಾಯವುಂಟುಮಾಡಿತು. ಹತ್ಯಾಕಾಂಡ ನಡೆದ ಮರುದಿನವೇ ಜಲಿಯನ್‌ವಾಲಾ ಭಾಗ್‌ಗೆ ತೆರಳಿ ಅಲ್ಲಿನ ಮಣ್ಣನ್ನು ತಂದು ಸ್ಮಾರಕವಾಗಿ ತನ್ನ ಜೀವನಪೂರ್ತಿ ಇರಿಸಿಕೊಂಡ. ಈ ಹತ್ಯಾಕಾಂಡವು ಬ್ರಿಟಿಷರನ್ನು ಹೊರಗಟ್ಟುವ ಅವನ ಸಂಕಲ್ಪವನ್ನು ಗಟ್ಟಿಗೊಳಿಸಿತು. ಭಗತ್ ಸಿಂಗ್ ಹೆಸರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ. ಲಾಲಾ ಲಜಪತ್‌ ರಾಯ್‌ ಅವರ ಸಾವಿನ ವಿರುದ್ಧ ಜಾನ್‌ ಸಾಂಡೆರ್‌ ಪೊಲೀಸ್‌ ಅಧಿಕಾರಿ ಹತ್ಯೆಯಲ್ಲಿ ಆರೋಪಿಯಾಗಿದ್ದರು. ಇದರೊಂದಿಗೆ 1929ರಲ್ಲಿ ಸಂಸತ್ತಿನ ಮೇಲೆ ಬಾಂಬ್‌ ದಾಳಿ ನಡೆಸಿದ್ದರು. ಈ ಪ್ರಕರಣಗಳ ಸಂಬಂಧ ಬ್ರಿಟಿಷ್‌ ಸರ್ಕಾರ 1931 ಮಾ.23ರಂದು ರಾಜಗುರು, ಸುಖದೇವ್‌ ಅವರೊಂದಿಗೆ ಗಲ್ಲು ಶಿಕ್ಷೆ ವಿಧಿಸಿತು. ಭಗತ್‌ ವೀರಮರಣವನ್ನಪ್ಪಿದರು.