ಗಜವರ್ಣ: ಚಿಣ್ಣರ ಕುಂಚದಲ್ಲಿ ಗಣಪನ ನೂರು ಬಗೆ, ವಿಧ ವಿಧ ತೆರದಿ ಮೂಡಿಬಂದ ಸುಮುಖ

  ಗಣಪಕಲಾವಿದನ ಪರಮಾಪ್ತ ಪರಮಾತ್ಮ. ಕಲಾಕೋವಿದರಿಗೆ ಸುಮುಖ ಬಹುಬೇಗ ಒಲಿದು ಬಿಡುತ್ತಾನೆ. ಕಲಾವಿದನೂ ಅಷ್ಟೇ ಪ್ರೀತಿಯ ಪರಮಾತ್ಮನನ್ನು ತನ್ನ ಸೃಜನಶೀಲ ಸಾಮಾಥ್ರ್ಯದಿಂದ ಅಭಿವ್ಯಕ್ತಿಸುತ್ತಾನೆ. ಕಲಾವಿದರ ಭಾವನೆಗಳಿಗೆ ತಕ್ಕಂತೆ ಗಣೇಶ ಆಕಾರ ಪಡೆಯುತ್ತಾನೆ. ಕಲಾವಿದರ ಭಾವನೆಗಳ ಕುಂಚದಲ್ಲಿ ಗಣೇಶ ರೂಪು ಗೊಳ್ಳುವ ವಿಧಾನವೇ ಭಿನ್ನ, ವಿನೂತನ.
ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಗಣೇಶನ ಬಗೆ ಬಗೆಯ ಪ್ರತಿಮೆಗಳು ಮೃತಿಕೆಯಿಂದ ಗಮನ ಸಳೆದರೆ ಅಲ್ಲಿ ಕಲಾವಿದನ ಕೃತುತ್ವ ಶಕ್ತಿಯನ್ನು ಯಾರೂ ಕೂಡಾ ಗಮನಕ್ಕೆ ತಂದುಕೊಳ್ಳುದಿಲ್ಲ.ಗಣೇಶನ ಚಿತ್ರ ಬಿಡಿಸುವುದೆಂದರೆ ಸಣ್ಣ ಮಕ್ಕಳಿಂದ ಹಿರಿಯ ಕಲಾವಿದರ ತನಕ ಅಚ್ಚು ಮೆಚ್ಚು. ಪೆನ್ಸಿಲ್, ಪೆನ್ನು, ಬಳಪದಿಂದ ಆರಂಭ ದುಬಾರಿಯ ಬಣ್ಣ, ಕ್ವಾನ್ವಾಸ್, ಆಕ್ರ್ಯಾಲಿಕ್, ಜಲವರ್ಣ, ತೈಲವರ್ಣದ ತನಕ ಚಿತ್ರಗಳನ್ನು ಬಿಡಿಸುವುದು ಕಾಣುತ್ತೇವೆ. ಈ ಗಣೇಶನ ಸ್ಪೂರ್ತಿಯನ್ನು ಬಾಲ ಕಲಾವಿದರಿಗೆ ಕೊಟ್ಟು, ಅವರ ಕುಂಚಕ್ಕೆ ವಿಷಯ ಕೊಟ್ಟು, ಸೂಪ್ತ ಪ್ರತಿಭೆಯ ಅನಾವರಣಕ್ಕೆ ಮುಂದಾಗಿದ್ದು ಕುಂದಾಪುರದ ಸಾಧನ ಸಂಗಮ ಸಂಸ್ಥೆ. ಈ ಸಂಸ್ಥೆ ಕುಂದಾಪುರದಲ್ಲಿ ಒಂದು ಸಂಚಲನವನ್ನೇ ಮಾಡಿದ್ದು ಕಳೆದ ನಾಲ್ಕು ವರ್ಷಗಳಿಂದ ಗಣೇಶ ಚೌತಿ ಸಂದರ್ಭದಲ್ಲಿ ಗಜವರ್ಣ ಎನ್ನುವ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತ ಬರುತ್ತಿದೆ. ಈ ವರ್ಷ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಕುಂದಾಪುರದ ಜ್ಯೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಆಯೋಜಿಸಿತ್ತು. ಜಿಲ್ಲೆಯ ಸುಮಾರು 326 ಸ್ಪರ್ಧಿಗಳು ಭಾಗವಹಿಸುವ ಮೂಲಕ ತಮ್ಮ ಚಿತ್ರಕಲಾ ಸಾಮಾಥ್ರ್ಯವನ್ನು ಓರೆಗೆ ಹಚ್ಚಿದರು.
ಸಭಾಂಗಣದ ತುಂಬಾ ಸ್ಫರ್ದಿಗಳೇ ತುಂಬಿದರು. ವಿವಿಧ ವಿನ್ಯಾಸ, ವಿಧ ವಿಧ ಬಗೆಯಲ್ಲಿ ಮಕ್ಕಳ ಚಿತ್ತ, ಸಾಮಾಥ್ರ್ಯಕ್ಕೆ ಹೊಂದಿದಂತೆ ಚಿತ್ರಗಳು ಮೂಡಿದವು. ಒಬ್ಬರಿಗಿಂತ ಒಬ್ಬರ ಚಿತ್ರ ಭಿನ್ನ. ವಿಶಿಷ್ಠ. ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಹಿರಿಯ ಕಲಾವಿದರುಗಳುಕೂಡಾ ಸ್ಫರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಸ್ಪರ್ಧಾ ಕಾರ್ಯಕ್ರಮವನ್ನು ಕಲಾವಿದ ಬೋಜು ಹಾಂಡ ಉದ್ಘಾಟಿಸಿ,‘ಕಲೆ ನಿತ್ಯ ಜೀವನದಲ್ಲಿ ಅಗತ್ಯ. ಕಲೆ ಮನಸ್ಸನ್ನು ಚೇತನಶಾಲಿಯನ್ನಾಗಿಸುತ್ತದೆ. ಅಂತರ್ಗತ ಕಲೆಯನ್ನು ಸ್ಪರ್ಧೆಗೆ ತೆರೆದಿಡುವಾಗ ಸೋಲು ಗೆಲುವಿನತ್ತ ಲಕ್ಷ್ಯ ಇಡದೇ ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿ, ಕಲಾಭಿವ್ಯಕ್ತಿಗೆ ಒಂದು ವೇದಿಕೆ’ ಎಂದರು. ದಾರದ ಸಹಾಯದಿಂದಲೇ ಅವರು ಗಣೇಶನ ಚಿತ್ರ ಬಿಡಿಸುವ ಮೂಲಕ ಉತ್ತಮ ಚಾಲನೆ ನೀಡಿದರು. ಯುವ ನೇತಾರ ಕಿಶೋರ್ ಕುಮಾರ್, ಪತ್ರಕರ್ತ ಯು.ಎಸ್.ಶೆಣೈ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಸಾಧನಾ ಸಂಗಮದ ಟ್ರಸ್ಟಿ ನಾರಾಯಣ ಐತಾಳ್, ಸುಧೀಂದ್ರ ಉಪಸ್ಥಿತರಿದ್ದರು.

ಫಲಿತಾಂಶ:
ವಿಭಾಗ 1: ಪ್ರ. ದಿವ್ಯ -1ನೇ ತರಗತಿ, ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ದ್ವಿ. ಅಲಿಶಾ ನಾಯಕ್, ಸೈಂಟ್ ಸಿಸಿಲಿಸ್, ಉಡುಪಿ, ತೃ. ಸ್ಕಂದ ಕೆ ಎನ್, ವಿಶ್ವವಿನಾಯಕ ಶಾಲೆ, ತೆಕ್ಕಟ್ಟೆ, ಸಮಾಧಾನಕರ ಬಹುಮಾನ - ಶಕ್ತಿ, ಮಾತಾ ಮೊಂಟೆಸ್ಸರಿ, ಕೋಣಿ, ವೈಷ್ಣವಿ, ಲಿಟ್ಲ ರಾಕ್ ಸ್ಕೂಲ್, ಬ್ರಹ್ಮಾವರ, ಸಾತ್ವಿಕ್-ಸಂದೀಪನ ಆಂಗ್ಲಮಾಧ್ಯಮ ಶಾಲೆ, ನಾಗೂರು

ವಿಭಾಗ2: ಪ್ರ. ರಕ್ಷಣ್, ಗುರುಕುಲ ಪಬ್ಲಿಕ್ ಸ್ಕೂಲ್, ವಕ್ವಾಡಿ, ದ್ವಿ: ಆದರ್ಶ ಎನ್.  ಎಮ್, 3ನೇ ತರಗತಿ, ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ತೃ: ವಿನೀತ್-ಲಿಟ್ಲ ರಾಕ್ ಸ್ಕೂಲ್, ಬ್ರಹ್ಮಾವರ, ಸಮಾಧಾನಕರ ಬಹುಮಾನ -   ಅನುಶ್ರೀ-ಶ್ರೀ ಸಿದ್ಧಿವಿನಾಯಕ ಶಾಲೆ, ಹಟ್ಟಿಯಂಗಡಿ,ಆದಿತ್ಯ – 4ನೇ ತರಗತಿ, ಸಂಜನಾ  2ನೇ ತರಗತಿ-ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ

ವಿಭಾಗ3: ಪ್ರಥಮ- ಕಾರ್ತಿಕ್ ಎಸ್-ಶ್ರೀ ಸಿದ್ಧಿವಿನಾಯಕ ಶಾಲೆ, ಹಟ್ಟಿಯಂಗಡಿ, ದ್ವಿತೀಯ-ಕೆ. ಆರ್. ಆದಿತ್ಯ-ಲಿಟ್ಲ ಸ್ಟಾರ್, ಗುಡ್ಡೆಯಂಗಡಿ, ತೃತೀಯ - ನಂದಿತಾ-ಸಂದೀಪನ ಆಂಗ್ಲಮಾಧ್ಯಮ ಶಾಲೆ, ನಾಗೂರು, ಸಮಾಧಾನಕರ ಬಹುಮಾನ -ವಿಜೇತಾ, ಸಂದೀಪನ ಆಂಗ್ಲಮಾಧ್ಯಮ ಶಾಲೆ, ನಾಗೂರು, ನಿಧಿಶ್ರೀ  7ನೇತರಗತಿ- ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ಸ್ಮಿತಾ- 7ನೇ ತರಗತಿ -ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ

ವಿಭಾಗ4: ಪ್ರಥಮ - ಸಂದೀಪ-ಸರಕಾರಿ ಪ್ರೌಢಶಾಲೆ, ಆಲೂರು, ದ್ವಿತೀಯ -ಪವನ-ಸರಕಾರಿ ಪ್ರೌಢಶಾಲೆ, ಆಲೂರು, ತೃತೀಯ -ಐಶ್ವರ್ಯ ಕೆ. ಆರ್-ಸರಕಾರಿ ಪದವಿ ಪೂರ್ವ ಕಾಲೇಜ್, ಕೋಟೇಶ್ವರ, ಸಮಾಧಾನಕರ ಬಹುಮಾನ - ನಾಗೇಂದ್ರ – 8ನೇ ತರಗತಿ-ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ, ವಿನ್ಮಯ್
- ಶ್ರೀ ಸಿದ್ಧಿವಿನಾಯಕ ಶಾಲೆ, ಹಟ್ಟಿಯಂಗಡಿ, ಪುರುಷೋತ್ತಮ್- 9ನೇತರಗತಿ -ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆ, ಕುಂದಾಪುರ

ವಿಭಾಗ 5: ಪ್ರಥಮ - ಉಮೇಶ ಪ್ರಭು, ದ್ವಿತೀಯ -ಪ್ರಿಯಾಂಕ ನಾಯಕ್, ತೃತೀಯ –ಕಿರಣ ಕುಮಾರ್ ಬಿ, ಸಮಾಧಾನಕರ ಬಹುಮಾನ - ಚೈತ್ರ ಕೆ-ಸಾಧನಾ ಸಂಗಮ ಟ್ರಸ್ಟ್, ಮೋಹಿನಿ ಜಿ. ಡಿ, ಅವ್ಯಕ್ತ -ಸಾಧನಾ ಸಂಗಮ ಟ್ರಸ್ಟ್.

ಚಿತ್ರ ಬರಹ-ನಾಗರಾಜ್ ವಂಡ್ಸೆ






ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com