“ನಗು”! ಎಂದೆಂದಿಗೂ ದಿವ್ಯ ಔಷಧ

     ಮಾನವರಲ್ಲಿ ‘ನಗು’ ಎಂಬ ಪದವ ಅರಿಯದವರಿಲ್ಲಾ ಹಾಗೆಯೇ ಜೀವನದಲ್ಲಿ ನಗದೇ ಬಾಳಿ-ಮಡಿದವರು ಇಲ್ಲವೆ ಇಲ್ಲಾ ಮಾನವನ ವರ್ತನೆಗಳಲ್ಲಿ ನಗುವೊಂದು, ಸಹಜಕ್ರಿಯೇ ಇದೊಂದು ಅಂತಯೇಶಕ್ತಿ ಈ ನಗುವೆಂಬ ಶಕ್ತಿ ಮಾನವನ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕತೆಯ ಚೈತನ್ಯಕ್ಕೊಂದು ಉತ್ತಮ ಔಷಧಿ.
     ನಕ್ಕು ನಗಿಸಿ ಆರೋಗ್ಯದಿಂದಿರಿ ಎಂದು ಜ್ಞಾನಿಗಳು ಹೇಳಿರುವ ಮಾತುಗಳನ್ನು ವೈದ್ಯಕೀಯ ಶಾಸ್ತ್ರ ಹಾಗೂ ವೈಜ್ಞಾನಿಕ ಶಾಸ್ತ್ರಗಳು ಸಿದ್ಧಾಂತ ಮಾಡಿ ಉಪ್ಪಿಕೊಂಡಿವೆ. ಜೀವನದಲ್ಲಿ ಬರಬಹುದಾದ ಅಡ್ಡಿ ಆತಂಕಗಳ ದೈಹಿಕ, ಮಾನಸಿಕ ಉದ್ವೇಗಗಳ ಉಪಶಮನಕ್ಕೆ ನಗು ಮನೋರಂಜಕ ಔಷಧಿ. ನಗದಿರುವವರನ್ನು ವೈದ್ಯಕೀಯಶಾಸ್ತ್ರ ಸಂಶಯ ವೃಷ್ಟಿಯಿಂದದಿಟ್ಟಿಸುತ್ತದೆ. ಅಂಥಹ ವ್ಯಕ್ತಿಗಳು ಯಾವುದೋ ದೊಡ್ಡರೋಗವೊಂದ ವ್ಯೂಹದಲ್ಲಿ ಸಿಲುಕಿಕೊಂಡಿರಬಹುದೇ ಎಂದು ಸಂಕಿಸಲಾಗುತ್ತದೆ. ಸಮಾಜ ಸಂಘ ಸಂಸ್ಥೆಗಳಲ್ಲಿ ನಗದೆ ಇರುವ ಪುರುಷನಾಗಲಿ ಅಥವಾ ಸ್ತ್ರೀಯರಾಗಲಿ ಸದಸ್ಯನಾಗಿರುವುದು ಅಪರೂಪ.
     “ನಗವು ಶಕ್ತಿವರ್ಧಕ ಭಾವನಾತ್ಮಕಗಳನ್ನು ನರವ್ಯೂಹದ ಮಧ್ಯಮದ ಮೂಲಕ ಉಂಟು ಮಾಡಿ, ನರಗಳಿಗೆ ಸಡಿಲತೆಯನ್ನು ಮತ್ತು ವ್ಯ್ಕತಿಯ ಶಾರೀರಿಕ ಪ್ರಕ್ರಿಯೆಗಳಲ್ಲಿ ಬದಲಾವಣೆಗೆ ತರುತ್ತದೆ. ಇವರು ಜನರ ಗುಂಪೊಂದಕ್ಕೆ ಹಾಸ್ಯಪಾಠಗಳನ್ನು ಒಂದುವಾರ ನಡೆಸಿ. ಅವರನ್ನು ಸತತವಾಗಿ ನಗಿಸಿ ಅವರ ಮೇಲೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಲ್ಲಿ ಉನ್ನತ ಮಟ್ಟದ ಉಸಿರಿಟದ ಕ್ರಮ ಮತ್ತು ಭಾವನಾತ್ಮಕತೆಗಳು ಕಂಡುಬಂದವು ಎಂದು ಹೇಳಿದ್ದಾರೆ.”
    ಶಾರೀರಿಕ ದೃಷ್ಟಿಯಿಂದ ಮಾತ್ರ ನೋಡುವುದಾದರೂ ಒಂದು ಒಳ್ಳೆ ನಗು ಆಶ್ಚರ್ಯಕರ ರೀತಿಯಲ್ಲಿ ಇಡೀ ದೇಹದ ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುತ್ತದೆ. ಅದರಲ್ಲೂ ಮುಖ್ಯವಾಗಿ ಎದೆ ಮತ್ತು ಹೊಟ್ಟೆಯೊಳಗಿನ ಸ್ನಾಯುಗಳು ಆಳವಾದ ಉಸಿರಾಟದೊಂದಿಗೆ ನಗುವು ಸೇರಿ ವಪೆಯಲ್ಲಿ ಹೆಚ್ಚಿನ ಸಡಿಲತೆಯನ್ನುಂಟು ಮಾಡುತ್ತದೆ. ನಗುವು ಅಳವಾದ ಉಸಿರಾಟಕ್ಕೆ ಅನುವು ಮಾಡಿ ಹೆಚ್ಚಿನ ಆಮ್ಲಜನಕ ರಕ್ತದೊಂದಿಗೆ ಸೇರಿ ದೇಹದ ಎಲ್ಲಾ ಭಾಗಗಳಿಗೆ ದೊರೆಯುವಂತೆ ಮಾಡುತ್ತದೆ. ನಗು ಧ್ವನಿ ಪೆಟ್ಟಿಗೆಯಿಂದ ಹಿಡಿದು ಅಂಗಾಲು ಸ್ನಾಯುಗಳಿವರೆಗೆ ಉಂಟು ಮಾಡುವ ಸಡಿಲತೆಯಿಂದ ನಮಗೆ ಚೈತನ್ಯ ಬಂದಾಂತಾಗುತ್ತದೆ. ಆದ್ದರಿಂದಲೆ ಮರ್ಕಟ್ಸಾಯನ್‍ರವರು “ನಗುವಿನ ದಾಳಿಯು ಮುಂದೆಯಾವುದು ನಿಲ್ಲದು” ಎಂದು ಹೇಳಿದ್ದಾರೆ. ಒಂದು ಮುತ್ತಂಥ ಮುಗ್ಳುನೆಗೆ ಮೈನರನಾಡಿಗೆಲ್ಲಾ ಚೈತನ್ಯ ಸ್ವರೂಪ” ನಕ್ಕು-ಆರೋಗ್ಯದಿಂದರಿ” ಎನ್ನುವ ಜ್ಞಾನಿಗಳಲ್ಲೊಬ್ಬರಾದ ಡಾ. ರಾಜಿಲಿಯಾನ್ ತುಂಟತನದಿಂದ ನುಡಿಯುತ್ತಾರೆ.” ಈ ವಯಸ್ಸು ಕೆಟ್ಟಹೊಟ್ಟೆಯನ್ನೆಂದಿಗೆ ನಗುವಿನಿಂದ ಅದನ್ನು ಶುದ್ಧಮಾಡಿ.
    ಗಟ್ಟಿಯಾಗಿ ನಗುವಾ ಅಥವಾ ಕಿಸಕಿಸನೆ ನಗುವಾಗ ದೊಡ್ಡವರ ಆಕ್ಷೇಪಣೆ ಸಾಮಾನ್ಯ ಆದರೆ ಇದಕ್ಕೆ ವೈದ್ಯಕೀಯ ಕಾರಣಗಳಿಲ್ಲ. ಕೆಲವರು ಜೋರಾಗಿ ನಗುವುದು ಅಥವಾ ಗಟ್ಟಿಯಾಗಿ ನಗುವುದು ತಮ್ಮ ಗೌರವಕ್ಕೆ ಕುಂದು ಎಂದು ತಿಳಿಯುತ್ತಾರೆ ಮತ್ತೆ ಕೆಲವರು ಅಸದ್ಯತನ ಎನ್ನುತ್ತಾರೆ. ಜೋರಾಗಿ ನಗುವುದು ಕೆಲವರಿಗೆ ಇಷ್ಟ ಅದೇ ಸಂದರ್ಭದಲ್ಲಿ ಕೆಲವರಿಗೆ ಜೋರಾಗಿ ನಗುವುದನ್ನು ಆಲಿಸುವುದಕ್ಕೆ ಇಷ್ಟ.
ಪ್ರಪಂಚದಲ್ಲಿ ನಗುವೊಂದು ಅಂಟುರೋಗ ಇದರ ಮೊದಲ ಅವಶ್ಯಕತೆ ಆಲಿಸುವಿಕೆ
ಡಾ. ಜೆಮ್ಸ್ ಜೆ.ವಾಲ್ಸ್‍ರವರು ಹೇಳುತ್ತಾರೆ. “ಎಲ್ಲರೂ ಸ್ವಲ್ಪ ಅಥವಾ ಹೆಚ್ಚು ನಗುತ್ತಾರೆ. ಆದರೆ ಯಾರು ಹೆಚ್ಚು ನಗುತ್ತಾರೋ ಅವರು ಅದರ ಉತ್ತಮ ಫಲಿತಾಂಶಗಳನ್ನು ಅನುಭವಿಸಿ ದೀರ್ಘಯುಷಿ ಗಳಾಗುತ್ತಾರೆ. ನಗುವು ಭಯವನ್ನು ಹೋಗಲಾಡಿಸಿ ದಿಗಿಲನ್ನು ದೂರಮಾಡಿ ಮಾನಸಿಕ ವೇದನೆಗಳನ್ನು ಕಡಿಮೆ ಮಾಡುತ್ತದೆ”
ಚಿಂತೆಯ ಪರಮ ವೈರಿ ನಗು, ಹೆಚ್ಚಿನ ಜನರ ಸತ್ಯದ ಅನುಭವದ ಮೇಲೆ ಬಹುಶಃ ಹೆಚ್ಚು ಚಿಂತೆಗಳಿದ್ದಷ್ಟು ನಗುವಿಕೆಗೆ ಹೆಚ್ಚು ಸಾಮಾಧ್ರ್ಯ ಬರುತ್ತದೆ ಎಂದು ಹೇಳಬಹುದು. ಒಬ್ಬನ ಯುದ್ಧಕಾಲದ ಹಾಸ್ಯ ಸ್ಮರಣೆಯನ್ನು ನಗುವು ಹೊರಗೆಡುಹುತ್ತದೆ. ಬ್ರಿಟಿಷೆ ಅಂತರರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಘವು ಇತ್ತೀಚಿನ ಪ್ರಸಕ್ತವೊಂದರಲ್ಲಿ ಈ ರೀತಿ ಹೇಳಿದೆ.
ಶಾರೀರಿಕ ದೃಷ್ಟಿಯಿಂದ ಮಾತ್ರ ನೋಡುವುದಾದರೂ ಒಂದು ಒಳ್ಳೆ ನಗು ಆಶ್ಚರ್ಯಕರ ರೀತಿಯಲ್ಲಿ ಇಡೀ ದೇಹದ ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುತ್ತದೆ.
ನಗುವೆ ಚಿಂತೆಯ ಪರಮ ಮೈರಿ ಯಾರು ತಮ್ಮಷ್ಟಕ್ಕೆ ನಗುವುದಿಲ್ಲವೂ ಅವರು ತಮ್ಮನ್ನು ತಾವೇ ಗಂಭೀರವಾಗಿಸಿಕೊಳ್ಳುತ್ತರೆ. ಅಥವಾ ನಗುವುದು ಮೂರ್ಖನ ಹಾಗೂ ಯಾವುದೋ ತಪ್ಪು ಮಾಡುತ್ತಿದ್ದೇವೆ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಹಾಸ್ಯಶೀಲ ಪ್ರವೃತ್ತಿ ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡುತ್ತದೆ ಆದರೆ ಒಂದು ರೀತಿಯ ಅಸಂಬದ್ಧ ಚಿಂತೆ ನರರೋಗಿಗಳಲ್ಲಿ ಸಾಮಾನ್ಯ.
ಒಂದು ಒಳ್ಳೆ ನಗು ನಗುವವನ ಶ್ವಾಸವನ್ನು ಶುದ್ಧ ಮಾಡುತ್ತದೆ ನಗುವವರೆಲೆಲ್ಲಾ ಇದು ಸಾಮಾನ್ಯ ಅವರ ನರಗಳ ಬಿಗಿತವನ್ನು ಸಡಿಲಗೊಳಿಸಿ ಮಾನಸಿಕ ಉದ್ವೇಗಗಳನ್ನು ಸಾಧಾರಣ ಸ್ಥಿತಿಗೆ ತಂದು ಸಂತೋಷ ಕೂಡುತ್ತದೆ. ಒಂದು ಗುಂಪಿನ ಜನಕ್ಕೆ ಅಥವಾ ವ್ಯಕ್ತಿಯೊಬ್ಬರಿಗೆ ನಗು ಆರೋಗ್ಯದ ರಕ್ಷಣಾ ಗೋಡಯಿದ್ದಂತೆ.
ನಗುವೆಂಬ ಚಂಡಮಾರುತದಲ್ಲಿ ದೋಷ, ಮತ್ಸರ ಎಲ್ಲವೂ ಹಾರಿ ಹೋಗುತ್ತವೆ
ವೈದ್ಯರೊಬ್ಬರು ಖಾಯಿಲೆಯಲ್ಲಿ ನಿರಾಶೆಯಿಂದ ಮಲಗಿದ್ದ ಹುಡುಗನೊಬ್ಬನನ್ನು ನಗಿಸಲು ಪ್ರಯತ್ನಿಸುತ್ತಿದ್ದರು. ಏಕೆಂದರೆ ಅವನು ಇನ್ನೂ ನಗುವ ಸ್ಥಿತಿಯಲ್ಲಿದ್ದ ಯಾವನಸ್ಸರಿಗೆ ಖಾಯಿಲೆಯ ಸಂದರ್ಭದಲ್ಲಿ ನಗುವ ಅವಕಾಶ ಉಂಟು. ಆದರೆ ಎಳೆ ಮಗುವಿಗೆ ಖಾಯಿಲೆಯ ಸಮಯಗಳಲ್ಲಿ ನಗುವಿನ ವರದಾನವಿಲ್ಲ. ಹಾಸ್ಯದ ಹೊನಲನ್ನು ಅದು ಅರ್ಧ ಮಾಡಿಕೊಳ್ಳಲಾರದು. ಎಲ್ಲರೂ ಸೇರಿ ಹಾಸ್ಯ ಮಾಡಿ ನಕ್ಕಾಗ ನಗಿಸಲು ಪ್ರಯತ್ನಿಸಿದಾಗ ಮಗುವು ಆಶ್ಚರ್ಯದಿಂದ ನೋಡುತ್ತದೆ. ಆದರೆ ಸಹಜವಾಗಿ ನಗುವಿಲ್ಲದೆ ಎಲ್ಲರ ನಗುವಿಗೆ ಮಗುವಿನ ಮುಗ್ದ ಮನಸ್ಸು ಕಾರಣ ಹುಡುಕಲಾರಂಬಿಸುತ್ತದೆ.
ಮಗುವಿನ ಮೊದಲು ಮುಗಳು ನಗೆಯೇ ಅದರ ಆರೋಗ್ಯದ ಹಾಗೂ ಸಂತೋಷದ ಸೂಚನೆ. ಆರು ದಿನಗಳಲ್ಲಿ ತೋರಿದ ಆ ಮುಗಳನಗೆಯು ಹಸ್ನೀರಡು ವಾರದವರೆಗೂ ತೋರುತ್ತದೆ, ಆದರೆ ಅದು ಆರೋಗ್ಯ ಸೂಚಿಸುವ ನಗುವಲ್ಲಿ. ಅಂತಹ ನಗುವೊಂದನ್ನು ಹೊರಸೂಸುಷ್ಟು ಮಾನಸಿಕ ಸಾಮಥ್ರ್ಯ ಪಡದಿರುವುದೇ ಈ ಮುಗ್ಳುನಗೆಗೆ ಕಾರಣ ನಂತರ ಸಂತೋಷದ ಸಂದರ್ಭದಲ್ಲಿ ಹಾಗೂ ತೃಪ್ತಿಕರ ಸಂದರ್ಭದಲ್ಲೂ ಮಗು ನಗುತ್ತದೆ. ಅದಕ್ಕೆ ಕಾರಣ ಮಗುವು ಅವುಗಳನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ಬಂದಿರುವುದೇ ಆಗಿದೆ.
ಮಗುವಿನ ಮಾತಿನ ಬೆಳವಣಿಗೆಗೂ ನಗುವಿನ ಬೆಳವಣಿಗೆಗೂ ಪರಸ್ಪರ ಸಂಬಂಧವಿದ್ದು, ನಗುವೆ ಮಾನವನ ಸಂಪರ್ಕತೆಯ ಮೊದಲ ಮಾಧ್ಯಮವಾಗುತ್ತದೆ.
  ನಗುವು ತನ್ನ ಸೂಕ್ಷ್ಮ ಬುದ್ಧಿಶಕ್ತಿಯಿಂದ ಜನರ ಮತ್ತು ರಾಷ್ಟ್ರಗಳ ನಡುವೆ ತನ್ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ನಗುವನ್ನೂ ಸಹಿಸಲಾರೆ ಎಂದು ಹೇಳಿ ಬೇರ್ಪಟ್ಟ ವ್ಯಕ್ತಿಯೇ ಇಲ್ಲ ಎಂದು ಮರಿಯ ಎಡ್ಜವರ್ತ ಹೇಳುತ್ತಾರೆ.
ಸದಾ ನಗುವವರನ್ನೂ ಇತರರು ಆಕ್ಷೇಪಣೆ ಮಾಡುವುದು ಸಾಮಾನ್ಯ ಅವರನ್ನು ಅರೆಹುಚ್ಚು ಎಂದು ಸಹ ಕರೆದು ಬಿಡುತ್ತಾರೆ ಆದರೆ ಅವರ ಅರೆ ಹುಚ್ಚರಲ್ಲಿ. ಅವು ಅವರ ನಗುವೆಂಬ ಚಿಲುಮೆಯಿಂದ ಹುಕ್ಕಿ ಹೊರಸೂಸುವ ನಗುವಿನ ತರಂಗಗಳು. ಈ ರೀತಿಯ ನಗು ನರದೌರ್ಬಲ್ಯ ದಿಂದಾಗಲಿ ಮಾನಸಿಕ ಉದ್ವೇಗದಿಂದಾಗಲಿ ಬಂದದ್ದಲ್ಲ.
ಸುಕೋಮಲ ಮನೋಭಾವನೆಗಳಲ್ಲಿ ನಗುವು ಉತ್ತಮ ಹಾಗೂ ಉಪಯೋಗವಾದದ್ದು ಯಾರು ಯಾರು ಇದನ್ನು ಅಭ್ಯಾಸ ಮಾಡುತ್ತಾರೋ ಹಾಗೂ ಆನಂದಿಸುತ್ತಾರೋ ಅವರ ಮೇಲೆ ಸುಕೋಮಲ ಮಾನಸಿಕ ಪರಿಣಾಮಗಳನ್ನುಂಟು ಮಾಡಿ ಆಂತರಿಕ ಸಂಘ ಜೀವಿ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ.

 ಡಾ|| ಕರುಣಾಕರ ಬಂಗೇರ ಮುಂಬೈಯಲ್ಲಿ ವೈದ್ಯರಾಗಿದ್ದಾರೆ..

ಕುಂದಾಪ್ರ ಡಾಟ್ ಕಾಂ- editor@kundapra.com